ಪರಿಸರ ನಿರ್ಲಕ್ಷ್ಯ ಧೋರಣೆ ಜೀವಸಂಕುಲಕ್ಕೆ ಮಾರಕ
Team Udayavani, Sep 17, 2017, 4:32 PM IST
ದಾವಣಗೆರೆ: ಮಹಾತ್ಮ ಗಾಂಧೀಜಿ ಹೇಳಿದಂತೆ ಈ ಭೂಮಿ ಮನುಷ್ಯನ ಆಸೆಗಳನ್ನು ಪೂರೈಸಬಲ್ಲದು, ದುರಾಸೆಗಳನ್ನಲ್ಲ ಎಂಬ ಮಾತು ಅರ್ಥಮಾಡಿಕೊಳ್ಳದೇ ಹೋದರೆ ಭವಿಷ್ಯದಲ್ಲಿ ಜೀವ ಸಂಕುಲದ ನಾಶ ಕಟ್ಟಿಟ್ಟ ಬುತ್ತಿ ಎಂದು ಪದ್ಮಶ್ರೀ ಡಾ| ಎಸ್.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ.
ಶನಿವಾರ ಬಿಐಇಟಿ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಹಮ್ಮಿಕೊಂಡ ವಿಶ್ವ ಓಝೋನ್ ದಿನಾಚರಣೆ ಉದ್ಘಾಟಿಸಿ, ಅವರು ಮಾತನಾಡಿದರು.
ನಾವುಗಳು ಪರಿಸರ ಸಂರಕ್ಷಣೆಗೆ ಅನಾದಿ ಕಾಲದಿಂದಲೂ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಅದು ನಮ್ಮ ಸಂಸ್ಕೃತಿಯಲ್ಲಿ ಬೆರೆತುಹೋಗಿದೆ. ಆದರೆ, ಇತೀ¤ಚಿನ ದಶಕಗಳಲ್ಲಿ ಪರಿಸರದ ಬಗೆಗಿನ ನಿರ್ಲಕ್ಶ್ಯ ಧೋರಣೆ ಭೂಮಿಯ ಮೇಲಿನ ಜೀವನ ಸಂಕುಲದ ಅಸ್ತಿತ್ವಕ್ಕೆ ಮಾರಕವಾಗುತ್ತಿದೆ ಎಂದರು.
ಮನುಷ್ಯ ಸೇರಿದಂತೆ ಜೀವಿಗಳ ಜೀವನ ಸುಧಾರಣೆಗೆ ಅಭಿವೃದ್ಧಿ ಬೇಕಿದೆ. ಆದರೆ, ಪರಿಸರಕ್ಕೆ ಮಾರಕವಾಗುವಂತಹ ಅಭಿವೃದ್ಧಿ ಬೇಕಿಲ್ಲ. ಸುಸ್ಥಿರ ಅಭಿವೃದ್ಧಿ ಮೂಲಕ ಪರಿಸರ ಕಾಪಾಡಿಕೊಳ್ಳುವ ಜೊತೆಗೆ ನಾವೂ ಸಹ ಉತ್ತಮ ಜೀವನ ಕಂಡುಕೊಳ್ಳಬಹುದಾಗಿದೆ. ಇದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಪ್ರಪಂಚದ ಎಲ್ಲಾ ದೇಶಗಳು ಇಂದು ಪರಿಸರದ ಸಮಸ್ಯೆ ಎದುರಿಸುತ್ತಿವೆ. ಕಾಡುಗಳ ನಾಶ, ಕೈಗಾರೀಕರಣದಿಂದಾಗುವ ವಾಯು ಮಾಲಿನ್ಯ, ಆಮ್ಲ ಮಳೆಯ ಸಮಸ್ಯೆಗಳು ಎಲ್ಲರನ್ನೂ ಕಾಡುತ್ತಿವೆ. ಇದಕ್ಕೆ ಕೃತಕ, ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿಲ್ಲ. ಪ್ರಕೃತಿಯ ಅಭಿವೃದ್ಧಿ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿದೆ. ನಮ್ಮ ಪರಿಸರ ಮಾಲಿನ್ಯದಿಂದ ಉಂಟಾಗುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಓಝೋನ್ ಪದರು ನಾಶ ಕೂಡ ಒಂದು. ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳ ಪೈಕಿ ಶೇ. 98ರಷ್ಟು ಕಿರಣಗಳನ್ನು ಈ ಪದರ ತಡೆಯುತ್ತದೆ. ಇದರಿಂದಲೇ ನಾವು ಬದುಕಿ ಉಳಿಯಲು ಸಾಧ್ಯವಾಗುತ್ತಿದೆ. ಆದರೆ, ಇಂದು ಇದೇ ಪದರ ಅಪಾಯಕ್ಕೆ ಸಿಲುಕಿದೆ ಎಂದು ಅವರು ತಿಳಿಸಿದರು.
ವಿಶ್ವ ಸಂಸ್ಥೆ ಓಝೋನ್ ಪದರದ ಮಹತ್ವ ಅರಿತು 1994ರಿಂದ ಸೆ.16ಅನ್ನು ಓಝೋನ್ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಅಂದಿನಿಂದ ಇಂದಿನವರೆಗೆ ಓಝೋನ್ ಪದರದ ಮಹತ್ವ ತಿಳಿಸುವ, ಜೊತೆಗೆ ಯಾವ ಅನಿಲ, ಕಲ್ಮಶದಿಂದ ಓಝೋನ್ ಪದರ ನಾಶವಾಗುತ್ತಿದೆ ಎಂಬುದನ್ನು ಈ ದಿನಾಚರಣೆ ಮೂಲಕ ತಿಳಿಸಲಾಗುತ್ತಿದೆ. ಅಗ್ನಿಶಾಮಕ ವಸ್ತು, ಶೀತಲೀಕರಣ ಘಟಕ, ಹವಾ ನಿಯಂತ್ರಣ ಘಟಕಗಳು ಹೊರಸೂಸುವ ರಸಾಯನಿಕಯುಕ್ತ ವಿಷಾನಿಲಗಳು ಓಝೋನ್ ಪದರ ನಾಶ ಮಾಡುತ್ತಿವೆ. ಇಂತಹ ವಸ್ತುಗಳ ಉಪಯೋಗ ತಡೆ ಅಥವಾ ಪರ್ಯಾಯ ವಸ್ತುಗಳ ಅನ್ವೇಷಣೆ ಒಂದೇ ಓಝೋನ್ ರಕ್ಷಣೆಗೆ ಇರುವ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟರು.
ಕಾಲೇಜು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ| ಬಿ.ಸಿ. ನಾಗರಾಜ್, ಡಾ| ಎಚ್. ರಾಮಕೃಷ್ಣ, ಡಾ| ಬಿ.ಇ. ರಂಗಸ್ವಾಮಿ ಇತರರು ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.