ಮಹಿಳೆಗೆ ಇನ್ನೂ ದೊರೆಯದ ಸಮಾನತೆ
Team Udayavani, Mar 10, 2017, 12:46 PM IST
ದಾವಣಗೆರೆ: ನಮ್ಮ ಜಿಲ್ಲೆಯ ಬಹುತೇಕ ಇಲಾಖೆಗಳಲ್ಲಿ ಮಹಿಳಾ ಅಧಿಕಾರಿಗಳೇ ಮುಖ್ಯಸ್ಥರಾಗಿದ್ದು, ಯುವತಿಯರು ಇದನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ. ಅಶ್ವತಿ ಹೇಳಿದ್ದಾರೆ.
ಗುರುವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣ ಸಮಾಜದ ಅಭಿವೃದ್ಧಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ,ಮಾತನಾಡಿದ ಅವರು, ಪ್ರಸ್ತುತ ಮಹಿಳೆಯರೇ ಜಿಲ್ಲಾಮಟ್ಟದ ಇಲಾಖೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯರುಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಮುಂದೆ ತಾವೂ ಸಹ ಇದೇ ರೀತಿ ಅಧಿಕಾರಿಗಳು ಆಗುವ ಬಗ್ಗೆ ಚಿಂತಿಸಬೇಕು ಎಂದರು. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ, ನ್ಯಾಯ-ಸಮಾನತೆಗಾಗಿ ಪ್ರತಿನಿತ್ಯವೂ ಹೋರಾಟ ನಡೆಸಬೇಕಾಗಿದೆ.
ಸಮಾಜದಲ್ಲಿ ಶೇ.90ರಷ್ಟು ಮನೆಗಳಲ್ಲಿ ಮಹಿಳೆಯರಿಗೆ ಸಮಾನತೆ ದೊರೆಯುತ್ತಿಲ್ಲ. ಮನೆಗೆಲಸ, ಅಡುಗೆ, ಸ್ವತ್ಛಗೊಳಿಸುವುದು ಸೇರಿ ಹೊರಗಡೆ ದುಡಿಯುವುದಕ್ಕೆ ಹೋಗುತ್ತಿದ್ದಾರೆ. ಇವರಿಗೆ ಪುರುಷರು ಸಹಾಯ ಮಾಡಲು ಮುಂದಾಗುತ್ತಿಲ್ಲ ಎಂದು ಅವರು ಬೇಸರಿಸಿದರು.
ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ಇಂದಿನ ಮಕ್ಕಳು, ಯುವ ಪೀಳಿಗೆ ಕೂಡ ತಮ್ಮತಂದೆ-ತಾಯಿ ಬಗ್ಗೆ ನಡೆದುಕೊಳ್ಳುವ ರೀತಿ ಬದಲಾಯಿಸಿಕೊಳ್ಳಬೇಕು. ತಂದೆಯ ಬಗ್ಗೆ ಮಕ್ಕಳಿಗೆ ಗೌರವವಿರುತ್ತದೆ. ಹಾಗೆಯೇ ತಾಯಿಯನ್ನೂ ಗೌರವಿಸುವ, ಇಬ್ಬರನ್ನೂ ಸಮಾನ ಘನತೆಯಿಂದ ಕಾಣುವುದನ್ನು ರೂಢಿಸಿಕೊಳ್ಳಬೇಕು ಎಂದರು.
ದೇಶದ ಜನಸಂಖ್ಯೆಯಲ್ಲಿ ಅರ್ಥದಷ್ಟು ಮಹಿಳೆಯರಿದ್ದಾರೆ. ಸಮಾಜದ ಅಭಿವೃದ್ಧಿಯಾಗಬೇಕಾದರೆ ಅವರನ್ನೂ ಸಹ ಪರಿಗಣಿಸಬೇಕು. ಆದರೆ, ಸಮಾಜ ಇಂದು ಪುರುಷರನ್ನೇ ಆಧಾರವಾಗಿರಿಸಿಕೊಂಡು ಅಭಿವೃದ್ಧಿ ರೂಪುರೇಷೆ ಸಿದ್ಧಪಡಿಸುತ್ತದೆ. ಉದ್ಯಮ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಮಹಿಳೆಯರು ಸಣ್ಣಪುಟ್ಟ ಉದ್ಯೋಗದಲ್ಲಿ ತೊಡಗಿಕೊಂಡು ಸಬಲೀಕರಣರಾಗಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಧಿಕಾರಿ ಯಶೋಧ ವಂಟಿಗೋಡಿ ಮಾತನಾಡಿ, ಮಹಿಳೆಯರ ಸಮಸ್ಯೆಗಳು ಪುರುಷರಿಗೆ ತಿಳಿಯಬೇಕು. ಹಾಗೆಯೇ ಮಹಿಳೆ ಯಾವ ಕ್ಷೇತ್ರದಲ್ಲಿ ಹಿಂದುಳಿದ್ದಾಳೆ ಎಂಬುದನ್ನು ತಿಳಿದುಕೊಂಡು ಸಮಾಜದಲ್ಲಿ ಮುನ್ನಡೆಯಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಎಂ. ಮಲ್ಲಿಕಾರ್ಜುನ ಕಲಮರಹಳ್ಳಿ, ಜಾನಪದ ತಜ್ಞೆ ಕುಮುದಾ ಸುಶೀಲಪ್ಪ, ಎಚ್.ಎನ್. ಹನುಮಂತಪ್ಪ, ಡಾ| ಆರ್.ತಿಪ್ಪಾರೆಡ್ಡಿ, ಎಸ್. ಆರ್. ಭಜಂತ್ರಿ, ಟಿ.ಬಿ. ಜ್ಯೋತಿ, ಗಂಗಾಧರ್ , ಭೀಮಣ್ಣ ಸುಣಗಾರ್, ಡಾ|ಮಂಜಣ್ಣ, ಎ.ಸಿ. ಪೂಜಾ, ಎಸ್.ಎಂ. ಲತಾ ಇತರರು ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.