ಪಾರ್ಟ್ಸ್ ಹೋಗುತ್ತಿದ್ದರೂ ಮತದಾರರ ಋಣ ತೀರಿಸುವೆ..
Team Udayavani, Jul 5, 2017, 3:34 PM IST
ದಾವಣಗೆರೆ: ಅವರು (ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್) ಹೇಳಿದಂತೆ ನನ್ನ ಒಂದೊಂದು ಪಾರ್ಟ್ಸ್ (ದೇಹದ ಭಾಗ) ಹೋಗುತ್ತಿದ್ದರೂ ಮತ ನೀಡಿದವರ ಋಣ ತೀರಿಸಲು, ಸಮಸ್ಯೆಗೆ ಸ್ಪಂದಿಸಲು ಎಲ್ಲ ಕಡೆ ಭೇಟಿ ನೀಡುತ್ತಿದ್ದೇನೆ. ಅವರು ಎಷ್ಟು ಕಡೆ ಹೋಗಿದ್ದಾರೆ ಎಂಬುದನ್ನು ತಿಳಿಸಲಿ… ಇದು ಸಂಸದ ಜಿ.ಎಂ. ಸಿದ್ದೇಶ್ವರ್ ಜಿಲ್ಲಾ
ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಟೀಕೆಗೆ ಹಾಕಿರುವ ಸವಾಲು.
ಮಂಗಳವಾರ 15ನೇ ವಾರ್ಡ್‌ನ ಭಾರತ್ ಕಾಲೋನಿಯಲ್ಲಿ ಕುಡಿಯುವ ನೀರು ಸರಬರಾಜು ಘಟಕ ಉದ್ಘಾಟಿಸಿ ಮಾತನಾಡಿದ ತಮ್ಮ ಭಾಷಣದಲ್ಲಿ ಸಿದ್ದೇಶ್ವರ್, ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.
ಮಲ್ಲಿಕಾರ್ಜುನ್ ನಮ್ಮ ತಂದೆಗೆ ವಯಸ್ಸಾಗಿದೆ ಎಂದೇಳುವ ಸಿದ್ದೇಶ್ವರರ ಬಾಡಿಯ ಒಂದೊಂದೆ ಪಾರ್ಟ್ಸ್ ಹೋಗುತ್ತಿವೆ ಎಂದಿದ್ದಾರೆ. ಯಾರೇ ಆಗಲಿ ವೈಯಕ್ತಿಕವಾದ ವಿಚಾರ ಹೇಳಿಕೆ ನೀಡುವುದು ಸರಿಯಲ್ಲ. ಅವರು ನನ್ನ ಒಂದೊಂದು ಪಾರ್ಟ್ಸ್ ಹೋಗುತ್ತಿವೆ ಎಂದಿರುವುದಕ್ಕೆ ಕಾಲವೇ ತಕ್ಕ ಉತ್ತರ ಕೊಡಲಿದೆ ಎಂದರು.
ನನ್ನ ಒಂದೊಂದು ಪಾರ್ಟ್ಸ್ ಹೋಗುತ್ತಿದ್ದರೂ ಮೂರು ಚುನಾವಣೆಯಲ್ಲಿ ನನಗೆ ಮತ ನೀಡಿದವರ ಋಣ ತೀರಿಸಲು, ಸಮಸ್ಯೆಗೆ ಸ್ಪಂದಿಸಲು ಎಲ್ಲ ಕಡೆ ಭೇಟಿ ನೀಡುತ್ತಿದ್ದೇನೆ. ಅವರು ಮೂರು ಬಾರಿ ನನ್ನ ವಿರುದ್ಧ ಸ್ಪರ್ಧಿಸಿ, ಸೋತಿದ್ದಾರೆ. ಲಾಸ್ಟ್ ಎಲೆಕ್ಷನ್‌ನಲ್ಲಿ ನನಗೆ 5.17 ಲಕ್ಷ ವೋಟ್ ಕೊಟ್ಟಿದ್ದಾರೆ. ಹಾಗಾಗಿ ಜಿಲ್ಲೆಯ ಎಲ್ಲಾ ಕಡೆ ಹೋಗುತ್ತೇನೆ. ಅವರು
ಎಷ್ಟು ಕಡೆ ಹೋಗಿದ್ದಾರೆ ಎಂಬುದನ್ನು ತಿಳಿಸಲಿ. ಅವರಿಗೂ ಜನರು 5 ಲಕ್ಷ ವೋಟ್ ಕೊಟ್ಟಿದ್ದಾರೆ ಎಂಬುದನ್ನು ಮರೆಯಬಾರದು ಎಂದು ತಾಕೀತು ಮಾಡಿದರು. ಇನ್ನೂ ಸಾಕಷ್ಟುಮಾತನಾಡುವುದು, ಹೇಳುವುದು ಇದೆ.
ನಾಳೆ(ಬುಧವಾರ) ನನ್ನ ಬರ್ತ್‌ಡೇ ಇದೆ. ಅಲ್ಲಿ ಮಾತನಾಡುತ್ತೇನೆ… ಎನ್ನುವ ಮೂಲಕ ಕುತೂಹಲ ಮೂಡಿಸಿದರು.
ಸಮಯ ಬಂದಾಗ ಉತ್ತರಿಸುವೆ…
ಮಾಜಿ, ಹಾಲಿ ಸಚಿವರು ನನ್ನ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ. ಸಮಯ ಬಂದಾಗ ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ.
ಹಿಂದಿನ ಸಚಿವರು ಹಿರಿಯರು. ಅವರ ಬಗ್ಗೆ ಗೌರವ ಇದೆ. ಅವರು ಯಾರ ಬಗ್ಗೆಯೇ ಆಗಲಿ ಗೌರವದಿಂದ
ಮಾತನಾಡಬೇಕು. ಅದನ್ನು ಬಿಟ್ಟು ಯಾರೋ ಬೀದಿಯಲ್ಲಿ, ಮಾರ್ಕೆಟ್‌ನಲ್ಲಿ ಮಾತನಾಡಿದ ರೀತಿ ಮಾತನಾಡುವುದು
ಸರಿಯಲ್ಲ. ಯಾಕೆಂದರೆ ಎಲ್ಲರಿಗೂ ಅವರದ್ದೇ ಆದ ಗೌರವ ಇದ್ದೇ ಇರುತ್ತದೆ. ಹಾಗಾಗಿ ಎಲ್ಲರ ಬಗ್ಗೆಯೂ ಗೌರವದಿಂದ
ಮಾತನಾಡಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು. ಬೇರೆ ಎಲ್ಲಾ ಕಡೆ ಸ್ಮಾಟ್
ìಸಿಟಿ ಕೆಲಸ ಆಗುತ್ತಿವೆ. ಇಲ್ಲಿ ಯಾಕೆ ಆಗುತ್ತಿಲ್ಲ. ದಾವಣಗೆರೆಗೆ ಮಾತ್ರವೇ ಮೋದಿಯವರು ಕಠಿಣ ಕ್ರಮ
ತೆಗೆದುಕೊಂಡಿಲ್ಲ. ಅಭಿವೃದ್ಧಿ ವಿಚಾರ ಬಂದಾಗ ನಾವು- ಅವರು ಒಂದಾಗಿ ಕೆಲಸ ಮಾಡಬೇಕು. ರಾಜಕೀಯವನ್ನ
ಚುನಾವಣಾ ಅಖಾಡದಲ್ಲಿ ಮಾಡಬೇಕು. ಅಲ್ಲಿ ಸಡ್ಡು ಹೊಡೆಯಬೇಕು. ನನ್ನ ಬಗ್ಗೆ ಮಾತನಾಡಿರುವುದಕ್ಕೆ ಈ
ಕಾರ್ಯಕ್ರಮದಲ್ಲಿ ಉತ್ತರ ಕೊಡುವುದು ಸರಿಯಲ್ಲ. ಸಮಯ ಬಂದಾಗ ತಕ್ಕ ಉತ್ತರ ಕೊಡುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.