ಬೆಂಬಲ ಬೆಲೆ ಶೇಂಗಾ ಖರೀದಿ ಕೇಂದ್ರದತ್ತ ಮುಖ ಮಾಡದ ಜಿಲ್ಲೆಯ ರೈತರು


Team Udayavani, Jan 11, 2018, 2:35 PM IST

11-29.jpg

ದಾವಣಗೆರೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಡಿ. 19ರಿಂದ ಪ್ರಾರಂಭಿಸಿರುವ ಶೇಂಗಾ ಖರೀದಿ ಪ್ರಕ್ರಿಯೆಯಲ್ಲಿ ದಾವಣಗೆರೆಯಲ್ಲಿ
ಸೊನ್ನೆ, ಜಗಳೂರಲ್ಲಿ ಈವರೆಗೆ 25 ರೈತರಿಂದ 325 ಕ್ವಿಂಟಲ್‌ ಮಾತ್ರ ಖರೀದಿಯಾಗಿದೆ!. ಜಗಳೂರು ತಾಲೂಕು ಮತ್ತಿತರೆ ಭಾಗದ ರೈತರಿಂದ ಖರೀದಿ ಕೇಂದ್ರ ಪ್ರಾರಂಭಿಸಲು ಮನವಿ ಹಿನ್ನೆಲೆಯಲ್ಲಿ ಡಿ. 18 ರಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಅಧ್ಯಕ್ಷತೆಯ ಜಿಲ್ಲಾ ಟಾಸ್ಕ್´ೋರ್ಸ್‌ ಸಮಿತಿ ಸಭೆಯಲ್ಲಿ ಡಿ. 19 ರಿಂದ ದಾವಣಗೆರೆ ಮತ್ತು ಜಗಳೂರುನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲು ಹಸಿರು ನಿಶಾನೆ ನೀಡಿತ್ತು.

ಕೇಂದ್ರ ಸರ್ಕಾರ ನಿಗದಿಪಡಿಸಿರುವ 4,250 ರೂ. ಜೊತೆಗೆ ರಾಜ್ಯ ಸರ್ಕಾರದ 200 ರೂ. ಸೇರಿಸಿ ಒಟ್ಟಾರೆ ಕ್ವಿಂಟಲ್‌ಗೆ 4,450 ರೂಪಾಯಿಯಂತೆ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ (ಕೆಒಎಫ್‌) ಮೂಲಕ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಜಿಲ್ಲಾ ಟಾಸ್ಕ್´ೋರ್ಸ್‌ ಸಮಿತಿ ಸಭೆ ತೀರ್ಮಾನದಂತೆ ಜಿಲ್ಲಾ ಕೇಂದ್ರ ದಾವಣಗೆರೆ ಹಾಗೂ ಹೆಚ್ಚು ಶೇಂಗಾ ಬೆಳೆಯುವ ಜಗಳೂರಿನಲ್ಲಿ ಖರೀದಿ ಕೇಂದ್ರ ಪ್ರಾರಂಭವಾಗಿವೆ. ಈವರೆಗೆ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿನ ಖರೀದಿ ಕೇಂದ್ರಕ್ಕೆ ಬಂದ ರೈತರ ಸಂಖ್ಯೆ ಬರೀ ಇಬ್ಬರು ಮಾತ್ರ. ಆ ಇಬ್ಬರೂ ಕೇಂದ್ರಕ್ಕೆ ತಂದಿದ್ದ ಶೇಂಗಾ ಸ್ಯಾಂಪಲ್‌ ನಿಗದಿತ ಪ್ರಮಾಣದಂತೆ ಇರದ ಕಾರಣಕ್ಕೆ ರಿಜೆಕ್ಟ್ (ತಿರಸ್ಕೃತ) ಆಗಿದೆ. ಹಾಗಾಗಿ ದಾವಣಗೆರೆಯಲ್ಲಿ ಒಂದೇ ಒಂದು ಶೇಂಗಾಕಾಯಿ ಖರೀದಿ ಆಗಿಲ್ಲ. ಜಗಳೂರು ಖರೀದಿ ಕೇಂದ್ರಕ್ಕೆ ಈವರೆಗೆ 82 ರೈತರು ಸ್ಯಾಂಪಲ್‌ ತಂದಿದ್ದು, ಈವರೆಗೆ 25 ರೈತರಿಂದ
315 ಕ್ವಿಂಟಲ್‌ ಖರೀದಿ ಆಗಿದೆ. ಜಗಳೂರುನಲ್ಲಿ ಮಾತ್ರವೇ ಶೇಂಗಾ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.

16,181 ಹೆಕ್ಟೇರ್‌ನಲ್ಲಿ ಶೇಂಗಾ: ದಾವಣಗೆರೆ ಜಿಲ್ಲೆಯಲ್ಲಿ 16,181 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದ್ದು, ಅಂದಾಜು 3,23,620 ಕ್ವಿಂಟಲ್‌ ಇಳುವರಿ ದೊರೆಯಬಹುದು ಎಂಬುದು ಕೃಷಿ ಇಲಾಖೆ ಲೆಕ್ಕಾಚಾರ. ದಾವಣಗೆರೆ ತಾಲೂಕಿನಲ್ಲಿ 146 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದ್ದು 2,920 ಕ್ವಿಂಟಲ್‌ ಇಳುವರಿ ನಿರೀಕ್ಷಿಸಲಾಗಿದೆ. ಹೊನ್ನಾಳಿಯಲ್ಲಿ ಬಿತ್ತನೆಯಾಗಿರುವ 3,112 ಹೆಕ್ಟೇರ್‌ ನಲ್ಲಿ 62,240 ಕ್ವಿಂಟಲ್‌, ಚನ್ನಗಿರಿಯಲ್ಲಿ 535 ಹೆಕ್ಟೇರ್‌ ನಿಂದ 10,700 ಕ್ವಿಂಟಲ್‌, ಹರಪನಹಳ್ಳಿಯಲ್ಲಿ 1,750 ಹೆಕ್ಟೇರ್‌ಗೆ 35 ಸಾವಿರ ಕ್ವಿಂಟಲ್‌ ಮತ್ತು ಜಗಳೂರಿನಲ್ಲಿ 10,638 ಹೆಕ್ಟೇರ್‌ನಿಂದ 212760 ಕ್ವಿಂಟಲ್‌ ದೊರೆಯುವ ಅಂದಾಜಿದೆ.

ಹೆಚ್ಚು ಇಷ್ಟಪಡೊಲ್ಲ: ಜಿಲ್ಲಾಡಳಿತವು ರೈತರ ಮನವಿ, ಒತ್ತಾಸೆ ಮೇರೆಗೆ ಶೇಂಗಾ ಖರೀದಿಗೆ ಮುಂದಾಗಿದೆ. ಆದರೆ, ಖರೀದಿ ಕೇಂದ್ರ ಎಂದಿನಂತೆ  ವಿಳಂಬ ಆಯಿತು ಎಂಬ ಅಸಮಾಧಾನ ರೈತರಲ್ಲಿದೆ. ಕೈಯಲ್ಲಿ ಇದ್ದಂತಹ ಶೇಂಗಾ ಎಲ್ಲಾ ಖಾಲಿಯಾದ ಮೇಲೆ ಖರೀದಿ ಕೇಂದ್ರ ಪ್ರಾರಂಭಿಸಿ ಏನು
ಪ್ರಯೋಜನ ಎಂಬುದು ರೈತಾಪಿ ವರ್ಗದ ಪ್ರಶ್ನೆ. ಮಳೆಯ ಕೊರತೆ ಒಳಗೊಂಡಂತೆ ಹಲವಾರು ಸಮಸ್ಯೆಗಳ ನಡುವೆಯೂ ಸಾಲ-ಸೋಲ ಮಾಡಿ
ಶೇಂಗಾ ಬಿತ್ತಿ, ತರಿದು (ಗಿಡದಿಂದ ಬಿಡಿಸಿ) ಖರೀದಿ ಕೇಂದ್ರಕ್ಕೆ ತಂದು ಸ್ಯಾಂಪಲ್‌ ತೋರಿಸಿ, ಓಕೆ ಎಂದಾದ ಮೇಲೆ ಶೇಂಗಾ ತಂದು ಮಾರಾಟ ಮಾಡಿ, ದುಡ್ಡಿಗಾಗಿ ತಿಂಗಳುಗಟ್ಟಲೆ ಕಾಯುವ ಉಸಾಬರಿಯೇ ಬೇಡ. ಕ್ಯಾಷ್‌ ಅಂಡ್‌ ಕ್ಯಾರಿ (ಶೇಂಗಾ ಮಾರಿ, ಹಣ ಪಡೆಯುವುದು) ಒಳ್ಳೆಯದು ಎಂಬುದು ರೈತರ ಲೆಕ್ಕಾಚಾರ. ಹಾಗಾಗಿಯೇ ಖರೀದಿ ಕೇಂದ್ರದತ್ತ ಹೆಚ್ಚಿನ ರೈತರು ಮುಖ ಮಾಡುವುದಿಲ್ಲ. ಯಾವುದೇ ಕೃಷಿ ಉತ್ಪನ್ನಗಳ ಧಾರಣೆ ಮುಕ್ತ ಮಾರುಕಟ್ಟೆಯಲ್ಲಿ ಕುಸಿದಾಗ ಸರ್ಕಾರ ಮಧ್ಯ ಪ್ರವೇಶಿಸಿ ಬೆಂಬಲ ಹಾಗೂ ಪ್ರೋತ್ಸಾಹಧನ ನೀಡಿ, ಖರೀದಿಸುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ನೆರವಿನ ಸಹಾಯಹಸ್ತ ನೀಡುವುದು ಖರೀದಿ ಕೇಂದ್ರದ ಮೂಲ ಉದ್ದೇಶ. ಆದರೆ, ಉತ್ಪನ್ನಗಳ ಆವಕ ಮುಗಿಯುವ ಸಂದರ್ಭದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಿ, ಇನ್ನಿಲ್ಲದ ಷರತ್ತು ವಿಧಿಸಿ, ತಿಂಗಳುಗಟ್ಟಲೆ ಸಮಯದ ನಂತರ ಖಾತೆಗೆ ಹಣ ಜಮೆ ಮಾಡುವುದರಿಂದ ರೈತರು ಖರೀದಿ ಕೇಂದ್ರಗಳತ್ತ ಗಮನ ನೀಡುವುದಿಲ್ಲ. ಅಲ್ಲಿಗೆ ಖರೀದಿ ಕೇಂದ್ರಗಳ ಮೂಲ ಉದ್ದೇಶವೇ ಅಕ್ಷರಶಃ ಮೂಲೆಗುಂಪು. ಸಕಾಲಕ್ಕೆ ಖರೀದಿ ಕೇಂದ್ರ, ಷರತ್ತುಗಳಲ್ಲಿ ಸರಳೀಕರಣ, ಹಣ ಪಾವತಿಯ ವ್ಯವಸ್ಥೆ ಆದಾಗ ಮಾತ್ರವೇ ಸರ್ಕಾರ ಖರೀದಿ ಕೇಂದ್ರ ಪ್ರಾರಂಭಿಸುವುದಕ್ಕೂ ಒಂದರ್ಥ. ಇಲ್ಲದೇ
ಹೋದರೆ ಎದ್ದು ಹೋಗುವ ಮಾತು… ಬಿದ್ದು ಹೋಗಲಿ… ಎನ್ನುವಂತಾಗುತ್ತದೆ ಎನ್ನುವುದಕ್ಕೆ ಜಿಲ್ಲೆಯಲ್ಲಿ 16,181 ಹೆಕ್ಟೇರ್‌ ಪ್ರದೇಶದಲ್ಲಿ
ಬಿತ್ತನೆಯಾಗಿರುವ 3,23,620 ಕ್ವಿಂಟಲ್‌ನಷ್ಟು ಶೇಂಗಾದ ಅಂದಾಜು ಇಳುವರಿಯಲ್ಲಿ ಈವರೆಗೆ ಕೇವಲ 325 ಕ್ವಿಂಟಲ್‌ನಷ್ಟು ಖರೀದಿ ಆಗಿರುವುದೇ
ಪುಷ್ಟೀಕರಿಸುತ್ತದೆ.

ರಾ. ರವಿಬಾಬು

ಟಾಪ್ ನ್ಯೂಸ್

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.