ಹಬ್ಬಗಳು ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತ: ರವೀಂದ್ರ
Team Udayavani, Aug 17, 2017, 12:17 PM IST
ಹರಪನಹಳ್ಳಿ: ಹಿಂದೂ-ಮುಸ್ಲಿಂ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿದ್ದು, ಇತರರಿಗೆ ನೋವಾಗದಂತೆ ಹಬ್ಬಗಳನ್ನು ಆಚರಿಸಬೇಕು ಎಂದು ಶಾಸಕ ಎಂ.ಪಿ.ರವೀಂದ್ರ ಹೇಳಿದರು.
ಪಟ್ಟಣದ ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಗೌರಿ ಗಣೇಶ ಹಾಗೂ ಬಕ್ರೀದ್ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಜಾತಿಗೊಂದು ಹಬ್ಬ ಹಾಗೂ ಆಚರಣೆಗಳಾಗಿದ್ದು, ವರ್ಷದ 365 ದಿನಗಳು ಆಚರಣೆಗೆ ಸಾಕಾಗುವುದಿಲ್ಲ.
ಆದ್ದರಿಂದ ಸರ್ವ ಜನಾಂಗದವರು ಒಗ್ಗೂಡಿ ಹಬ್ಬಗಳನ್ನು ಆಚರಿಸಬೇಕು. ಹರಪನಹಳ್ಳಿಯಲ್ಲಿ ಹಿಂದೂ, ಮುಸ್ಲಿಂ ಎರಡು ಸಮುದಾಯದವರು ಯಾವುದೇ ಗಲಾಟೆಗಳು ಇಲ್ಲದೇ ಸಹಜೀವನ ನಡೆಸುತ್ತಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಕೆರೆ, ಬಾವಿಗಳಲ್ಲಿ ನೀರು ಇಲ್ಲ. ಕೆಲವು ಅಯ್ದ
ಕಡೆಗಳಲ್ಲಿ ಗಣೇಶ ವಿಸರ್ಜನೆಗೆ ಪುರಸಭೆಯಿಂದ ವ್ಯವಸ್ಥೆ ಮಾಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಡಿವೈಎಸ್‌ಪಿ ನಾಗೇಶ್ ಐತಾಳ್ ಮಾತನಾಡಿ, ಹಬ್ಬಗಳನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಬೇಕು. ಗಣೇಶನ ಮೆರವಣಿಗೆ ವೇಳೆಯಲ್ಲಿ ಡಿಜೆ ಬಳಸದೇ ಸಂಜೆ 7ಗಂಟೆಯೊಳಗಾಗಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಬೇಕು. ಅಮಾಯಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಜಿಲ್ಲಾ ಧಿಕಾರಿಗಳ ಆದೇಶದಂತೆ ಗಣೇಶ ಪೆಂಡಾಲ್ ಹಾಗೂ ಮೆರವಣಿಗೆ ಸಂದರ್ಭಗಳಲ್ಲಿ ಧ್ವನಿವರ್ಧಕಗಳ ಶಬ್ದವನ್ನು ಕಡಿಮೆ ಬಳಸುವಂತೆ
ಕೋರಿದರು. ಸಿಪಿಐ ಡಿ.ದುರುಗಪ್ಪ ಮಾತನಾಡಿ, ಗಣಪತಿ ಹಬ್ಬ ಹಾಗೂ ಬಕ್ರೀದ್ ಹಬ್ಬಗಳನ್ನು ಶಾಂತಿ ಸೌರ್ಹದತೆಯಿಂದ ಎಲ್ಲರೂ ಆಚರಣೆ ಮಾಡಲು ಸಹಕರಿಸಬೇಕು. ಗಣೇಶ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯಬೇಕು. ಆಯ್ದ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಸೇರಿದಂತೆ ಹಲವಾರು ನಿರ್ಬಂಧನೆಗಳ ಮಾಹಿತಿ ನೀಡಿದರು.
ವಕೀಲರಾದ ಡಿ.ಅಬ್ದುಲ್ ರೆಹಮಾನ್, ವಕೀಲ ವೆಂಕಟೇಶ್, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಸಿ.ಜಾವೀದ್ ಮಾತನಾಡಿ, ತಾಲೂಕಿನಲ್ಲಿ ಯಾವುದೇ ರೀತಿ ಹಾನಿಯಾಗದಂತೆ ಹಬ್ಬಗಳು ಹಿಂದಿನಿಂದಲೂ ನಡೆದಿದ್ದು, ಮುಂದೆಯೂ ಕೂಡ ಶಾಂತಿಯುತವಾಗಿ ಕಾನೂನ್ನು ಪಾಲನೆ ಮಾಡುವ ಮೂಲಕ ಆಚರಣೆ ಮಾಡಬೇಕು. ಕಾನೂನು ಪಾಲನೆ ಮಾಡಿದಲ್ಲಿ ಕಾನೂನು ಎಲ್ಲರನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಐ.ಬಸವರಾಜ್ ಮಾತನಾಡಿ, ಶೀಘ್ರವೇ ಗಣಪತಿ ಕೂಡಿಸಲು ಪುರಸಭೆಯಿಂದ ಅನುಮತಿ ನೀಡಲಾಗುವುದು, ಇದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು. 6ರಿಂದ 8 ಕಡೆಗಳಲ್ಲಿ ಟ್ರಾಕ್ಟರ್ ಮೂಲಕ ಗಣೇಶ್ ವಿಸರ್ಜನೆಗೆ ಅವಕಾಶ ಹಾಗೂ ನಿಗದಿಯಾದ ಕೆರೆಯ 4 ಕಡೆಗಳಲ್ಲಿ ಗುಂಡಿಗಳನ್ನು ತೋಡಿಸಿ ನೀರನ್ನು ತುಂಬಿಸಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಕೆ.ಗುರುಬಸವರಾಜ್, ಉಪನ್ಯಾಸಕ ಎಚ್.ಮಲ್ಲಿಕಾರ್ಜುನ್, ಎನ್‌ಎಸ್‌ಯುಐ ಅಧ್ಯಕ್ಷ ಪಿ.ಶಿವಕುಮಾರನಾಯ್ಕ, ಕಂಚಿಕೇರಿ ಕೆಂಚಪ್ಪ, ಸುರೇಶ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಪಿಎಸ್‌ಐ ರಾಜೇಂದ್ರನಾಯ್ಕ, ಬೆಸ್ಕಾಂ ಎಇಇ ಭೀಮಪ್ಪ, ಅಗ್ನಿಶಾಮಕ ದಳದ ಅ ಧಿಕಾರಿ ಆರೋಗ್ಯಪ್ಪ, ಪುರಸಭೆ ಸದಸ್ಯ ಪೂಜಾರ್ ಅರುಣಕುಮಾರ್, ಕೆ.ಎಂ. ಬಸವರಾಜಯ್ಯ, ಹಲಗೇರಿ ಮಂಜಪ್ಪ, ಕಟ್ಟಿ ಆನಂದಪ್ಪ,
ದಾದಪೀರ, ಮುತ್ತಿಗಿ ಜಂಬಣ್ಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Andhra: ʼಗೇಮ್ ಚೇಂಜರ್ʼ ಈವೆಂಟ್‌ನಿಂದ ಮರಳುತ್ತಿದ್ದ ಅಭಿಮಾನಿಗಳು ರಸ್ತೆ ಅಪಘಾತಕ್ಕೆ ಬಲಿ
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
South Korea: ಅಧ್ಯಕ್ಷ ಯೂನ್ ರನ್ನು ಕೂಡಲೇ ಬಂಧಿಸಿ: ಪೊಲೀಸರಿಗೆ ದಕ್ಷಿಣ ಕೊರಿಯಾ!
ಕಾರ್ಕಳ ನಗರದಲ್ಲೂ ನೆಟ್ ಕಿರಿಕಿರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.