ಪ್ರಥಮ ಸೆಮಿಸ್ಟರ್ ಪರೀಕ್ಷೆ ತೊಳಲಾಟ!
ಪರೀಕ್ಷಾ ದಿನಾಂಕ ನಿಗದಿಯಾಗದೆ ಅಯೋಮಯ ಸ್ಥಿತಿ
Team Udayavani, Apr 28, 2022, 2:19 PM IST
ದಾವಣಗೆರೆ: ರಾಜ್ಯ ಸರ್ಕಾರ, ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವಲ್ಲಿ ತೋರಿದ ಉತ್ಸುಕತೆ ಪಠ್ಯಕ್ರಮ, ಪುಸ್ತಕಗಳ ಲಭ್ಯತೆ, ಯೋಜನಾಬದ್ಧ ವಾಗಿ ನೀತಿ ಅನುಷ್ಠಾನ, ಸಕಾಲದಲ್ಲಿ ಪರೀಕ್ಷೆ ನಡೆಸುವಲ್ಲಿ ತೋರದ ಕಾಳಜಿಯ ಪರಿಣಾಮ ಪದವಿಯ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ!
ದಾವಣಗೆರೆ ವಿಶ್ವವಿದ್ಯಾಲಯದ ಪದವಿಯ ಬಹುತೇಕ ಎಲ್ಲ ಪರೀಕ್ಷೆಗಳು ಮುಗಿದಿವೆ. ಆದರೆ ಪ್ರಥಮ ಸೆಮಿಸ್ಟರ್‌ನ ಪರೀಕ್ಷಾ ವೇಳಾಪಟ್ಟಿ ಈ ಕ್ಷಣದವರೆಗೂ ನಿಗದಿಯಾಗಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂಬುದು ಅಕ್ಷರಶಃ ಗೊಂದಲದ ಗೂಡಾಗಿದೆ.
‘ಮೂಗಿಗಿಂತಲೂ ಮೂಗುತಿ ಭಾರ’ ಎನ್ನುವಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಜ್ಜಾಗುವುದಕ್ಕಿಂತಲೂ ಪರೀಕ್ಷೆ ನಿರ್ದಿಷ್ಟವಾಗಿ ನಡೆಯುವುದು ಯಾವಾಗ ಎಂಬುದೇ ಗೊತ್ತಾಗದೆ ಅಯೋಮಯ ಸ್ಥಿತಿಯಲ್ಲಿದ್ದಾರೆ. ಪರೀಕ್ಷಾ ದಿನಾಂಕ ನಿಗದಿಯಾಗದೆ ಓದುವತ್ತ ಗಮನ ಹರಿಸದಂತಾಗಿದೆ.
ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ಕೀರ್ತಿ ನಮ್ಮದು ಎಂದು ಬೆನ್ನು ಚಪ್ಪರಿಸಿಕೊಳ್ಳುವ ರಾಜ್ಯ ಸರ್ಕಾರ ಅನುಸರಿಸುತ್ತಿರುವ ನೀತಿಯ ಪರಿಣಾಮವಾಗಿಯೇ ಈವರೆಗೆ ಪ್ರಥಮ ಸೆಮಿಸ್ಟರ್ ಪರೀಕ್ಷೆ ನಡೆಯುವುದಿರಲಿ, ಯಾವಾಗಿನಿಂದ ಖಚಿತವಾಗಿ ಪ್ರಾರಂಭ ಆಗಲಿವೆ ಎಂಬುದಕ್ಕೆ ಯಾರಲ್ಲೂ ಉತ್ತರವೇ ಇಲ್ಲ.
ಜಾಲತಾಣ ನಂಬಿ ಬೇಸ್ತು ಬಿದ್ದರು
ಕೆಲ ದಿನಗಳ ಹಿಂದಷ್ಟೇ ಪ್ರಥಮ ಸೆಮಿಸ್ಟರ್ ಪರೀಕ್ಷೆ ಏ. 27ರಿಂದ ಆರಂಭವಾಗಲಿದೆ ಎಂಬ ವೇಳಾಪಟ್ಟಿ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ನಂಬಿದ ವಿದ್ಯಾರ್ಥಿಗಳು ಅದೇ ನಿಜವಾದ ವೇಳಾಪಟ್ಟಿ ಎಂದು ಭಾವಿಸಿ ಪರೀಕ್ಷೆಗೆ ಸಿದ್ಧರಾದರು. ಮದುವೆ, ನಿಶ್ಚಿತಾರ್ಥ, ಪ್ರವಾಸ ಮುಂತಾದವುಗಳನ್ನೆಲ್ಲ ರದ್ದುಪಡಿಸಿ ಇಲ್ಲವೇ ಮುಂದೂಡಿ ಪರೀಕ್ಷೆಗೆ ಸಜ್ಜಾದರು. ನಂತರ ಅದು ಅ ಧಿಕೃತ ವೇಳಾಪಟ್ಟಿಯೇ ಅಲ್ಲ ಎಂಬುದು ತಿಳಿದು ಬಂತು.
ಮತ್ತೆ ಕೆಲವೇ ದಿನಗಳಲ್ಲಿ ಮತ್ತೂಂದು ವೇಳಾಪಟ್ಟಿಯೂ ಜಾಲತಾಣಗಳಲ್ಲಿ ಹರಿದಾಡ ತೊಡಗಿತು. ವಿದ್ಯಾರ್ಥಿಗಳು ಆಗಲೂ ಪರೀಕ್ಷಾ ತಯಾರಿ ಮಾಡಿಕೊಂಡರು. ಅಂತಿಮವಾಗಿ ಅದು ಸಹ ನಿಜವಾದ ವೇಳಾಪಟ್ಟಿಯೇ ಅಲ್ಲ ಎಂಬುದು ಗೊತ್ತಾಯಿತು. ಪದವಿ ಹಂತದ ವೇಳಾಪಟ್ಟಿಯೇ ಜಾಲತಾಣದಲ್ಲಿ ಹಲವಾರು ಹರಿದಾಡಿದರೂ ಸಂಬಂಧಿತರು ಈವರೆಗೆ ಅದರ ಬಗ್ಗೆ ಗಮನ ಹರಿಸಿಲ್ಲ ಎನ್ನುವುದು ಪರಮಾಶ್ಚರ್ಯ.
ವಾಸ್ತವವಾಗಿ ಪ್ರಥಮ ಸೆಮಿಸ್ಟರ್ ಪರೀಕ್ಷೆ ಮುಗಿದು ಎರಡನೇ ಸೆಮಿಸ್ಟರ್ ಪ್ರಾರಂಭ ಅಗಬೇಕಿತ್ತು. ಎರಡೂವರೆ ತಿಂಗಳಷ್ಟು ವಿಳಂಬವಾದರೂ ಸರ್ಕಾರವಾಗಲೀ, ಉನ್ನತ ಶಿಕ್ಷಣ ಇಲಾಖೆಯಾಗಲೀ ಪರೀಕ್ಷೆ ನಡೆಸುವತ್ತ ಗಮನ ಹರಿಸದಿರುವುದು ಸೋಜಿಗ ಮೂಡಿಸಿದೆ. ಸರ್ಕಾರದ ವಿಳಂಬ ನೀತಿಯಿಂದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷಾ ತೊಳಲಾಟದಲ್ಲಿದ್ದಾರೆ.
ಸರ್ಕಾರಕ್ಕೆ ಸರಿಯಾದ ಪಾಲಿಸಿಯೇ ಇಲ್ಲ. ಫಸ್ಟ್ ಸೆಮಿಸ್ಟರ್ ಎಕ್ಸಾಂ ಯಾವಾಗ ಎನ್ನುವುದೇ ಗೊತ್ತಿಲ್ಲ. ಮಕ್ಕಳು ಓದುವುದಕ್ಕೆ ಬಹಳ ತೊಂದರೆ ಆಗುತ್ತಿದೆ. ಈಗಲಾದರೂ ಎಕ್ಸಾಂ ಡೇಟ್ ಫಿಕ್ಸ್ ಮಾಡಲಿ. -ನೊಂದ ಪೋಷಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.