ಘಮಘಮಿಸಿದ ಬಿಎಸ್‌ಸಿ ಫುಡ್‌ ಫೆಸ್ಟ್‌-2018


Team Udayavani, Sep 29, 2018, 12:12 PM IST

dvg-4.jpg

ದಾವಣಗೆರೆ: ಬಿಸಿ ಬಿಸಿ ಪರೋಟ, ಬಿಳಿ ಹೋಳಿಗೆ, ಮೆಂತೆ ರೈಸ್‌, ಜಪಾನಿ ದಾಲ್‌, ರಾಗಿ ಜ್ಯೂಸ್‌…. ಹೀಗೆ ದೇಶಿಯ ಖಾದ್ಯದಿಂದ ವಿದೇಶಿ ತಿಂಡಿ ತಿನಿಸುಗಳು ಕಾಲೇಜಿನ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಹಾರ ಮೇಳದಲ್ಲಿ ಘಮಘಮಿಸಿದವು.

ಎಸ್‌ಎಸ್‌ ಬಡಾವಣೆಯ ಎ ಬ್ಲಾಕ್‌ನ ಬಿ.ಎಸ್‌. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಬಿ.ಎಸ್‌.ಸಿ. ಫುಡ್‌ ಫೆಸ್ಟ್‌ -2018ರ ಮೇಳ ಈ ವೈಶಿಷ್ಟಪೂರ್ಣ ತಿನಿಸುಗಳಿಗೆ ವೇದಿಕೆ ಒದಗಿಸಿತ್ತು. ಅಂತಿಮ ಬಿಸಿಎ ವಿದ್ಯಾರ್ಥಿಗಳ ತಂಡ ಸಮೋಸ, ಮೆಂತೆ ರೈಸ್‌, ಪರೋಟಾ ಕರಿ, ಶ್ಯಾವಿಗೆ ಖೀರು ತಯಾರಿಸಿ, ಮಾರಾಟ ಮಾಡಿದರೆ, ದ್ವಿತೀಯ ಬಿ.ಕಾಂ ವಿನು, ಅಜಯ್‌ ತಂಡ ತಯಾರಿಸಿದ್ದ ಫುಲ್ಕಾ, ಕ್ರಂಬಲ್‌ ಕೋನ್‌, ಫ್ರೂಟಿ ಬ್ರಿಸ್‌, ಮಸಾಲ ಬುಲ್ಪ್ ವಿದೇಶಿ ತಿನಿಸುಗಳು ಗಮನ ಸೆಳೆದವು. 

ಪ್ರಥಮ ಬಿ.ಕಾಂ ವಿದ್ಯಾರ್ಥಿಗಳ ತಂಡ ಸಿದ್ಧಪಡಿಸಿದ ಮೆಂತೆ ಚಪಾತಿ, ಪಾಲಕ್‌ ಪನೀರ್‌, ಹಾರ್ಲಿಕ್ಸ್‌ ಬರ್ಫಿ, ವೆಜ್‌ ರೋಲರ್‌, ವೆಜ್‌ ಬಿರಿಯಾನಿ ಹೀಗೆ ಬಗೆಬಗೆಯ ತಿಂಡಿ ತಿನಿಸುಗಳಲ್ಲಿ ಕೆಲವನ್ನು ವಿದ್ಯಾರ್ಥಿಗಳು ತಾವೇ ಸ್ವಯಂ ತಯಾರಿಸಿದರೆ ಇನ್ನೂ ಕೆಲವನ್ನು ಕ್ಯಾಟರಿಂಗ್‌ ಮೂಲಕ ತರಿಸಿ ಮೇಳದಲ್ಲಿ ಹೋಟೆಲ್‌ ಉದ್ಯಮದ ಅನುಭವ ಪಡೆದರು. 

ಬಿಎಸ್‌ಸಿ ಪ್ರಥಮ, ದ್ವಿತೀಯ ಹಾಗೂ ಅಂತಿಮ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಈ ಆಹಾರ ಮೇಳದಲ್ಲಿ ಒಬ್ಬರು ಮಾರ್ಗದರ್ಶಕರು ಹಾಗೂ ತರಗತಿವಾರು ವಿದ್ಯಾರ್ಥಿಗಳ ತಂಡ ರಚಿಸಲಾಗಿತ್ತು. ಒಂದೊಂದು ಸ್ಟಾಲ್‌ ಕೂಡ ಶಿಸ್ತುಬದ್ಧವಾಗಿ ಹಾಕಿಕೊಂಡು ಎಲ್ಲಾ ರೀತಿಯ ತಿನಿಸುಗಳನ್ನು ಜೋಡಿಸಿ, ಗ್ರಾಹಕರಿಗೆ ಪರಿಚಯಿಸಿ, ಮಾರಾಟ ಮಾಡಿದರು.

ವಿದ್ಯಾರ್ಥಿಗಳು ಕಲರ್‌ಫುಲ್‌ ಉಡುಗೆ ತೊಟ್ಟು ಉತ್ಸಾಹದಿಂದ ಆಹಾರ ಮೇಳದಲ್ಲಿ ಭಾಗವಹಿಸಿದ್ದು, ಆವರಣದ ತುಂಬೆಲ್ಲಾ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಮಳೆರಾಯ ಕೊಂಚ ಅಡ್ಡಿ ಉಂಟು ಮಾಡಿದರೂ ಆಹಾರ ಮೇಳ ಯಶಸ್ವಿಯಾಯಿತು.ಫುಡ್‌ ಫೆಸ್ಟ್‌-2018ಕ್ಕೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್‌ ಚಾಲನೆ ನೀಡಿದರು. ಪ್ರಾಂಶುಪಾಲ ಷಣ್ಮುಖಸ್ವಾಮಿ, ಅಥಣಿ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್‌, ಕಾಲೇಜಿನ ಸದಸ್ಯರಾದ ಅಥಣಿ ಪ್ರಶಾಂತ್‌, ಸುಗಂಧರಾಜ್‌ ಶೆಟ್ರಾ, ದೀಪಾ ಶಿವಕುಮಾರ್‌, ಕಾರ್ಯದರ್ಶಿ ಎಂ.ಎಸ್‌. ನಿಜಾನಂದ್‌, ಪ್ರಾಧ್ಯಾಪಕರಾದ ಗುರು, ಸಂತೋಷ್‌, ಲೋಕೇಶ್‌, ಈಶ್ವರ್‌, ಸತೀಶ್‌ ಮತ್ತಿತರಿದ್ದರು.

ವ್ಯವಹಾರಿಕ ಜ್ಞಾನ 
ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿದ್ದು, ಆಹಾರ ಮೇಳದ ಮೂಲಕ ಅವರಲ್ಲಿ ವ್ಯಾಪಾರದ ಅನುಭವ ಹಾಗೂ ಮಾರುಕಟ್ಟೆ ಜ್ಞಾನವನ್ನು ಪ್ರಾಯೋಗಿಕವಾಗಿ ಬಿತ್ತುವ ಉತ್ತಮ ಕಾರ್ಯ ಇದಾಗಿದೆ. ಈ ರೀತಿಯ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ. ಇದಕ್ಕೆ ನಮ್ಮ ಸಹಕಾರದ ಜೊತೆಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರಕುತ್ತಿದೆ.
ಬಿ.ಸಿ. ಶಿವಕುಮಾರ್‌, ಬಿಎಸ್‌ಸಿ ಕಾಲೇಜು ಅಧ್ಯಕ್ಷರು.

ಕಲಿತದ್ದು ಪ್ರಯೋಜನ….
ನಿತ್ಯ ಮನೆಯಲ್ಲಿ ತಾಯಿ, ಅಕ್ಕನ ಜೊತೆ ಕೂಡಿ ಅಡುಗೆ ಮಾಡುವುದನ್ನು ಕಲಿತಿದ್ದೆ. ಆ ಅನುಭವ ಆಹಾರ ಮೇಳಕ್ಕೆ ಅನುಕೂಲವಾಯಿತು. ಅಲ್ಲದೇ ನಮ್ಮಲ್ಲಿ ವ್ಯಾಪಾರದ ಬಗ್ಗೆ ಅರಿವು ಮೂಡಿಸಿದ್ದು ಹಾಗೂ ಕಾಲೇಜಿನಲ್ಲಿ ಅಡುಗೆ ಮಾಡಿದ್ದು ಮತ್ತಷ್ಟು ಸಂತೋಷ ಉಂಟುಮಾಡಿದೆ. 
ಸಿಂಧು, ಅಂತಿಮ ಬಿಸಿಎ ವಿದ್ಯಾರ್ಥಿನಿ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

1—-kumr-renuka

BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.