ಕುಂದಿದ ವ್ಯಾಪಾರಿ ಪ್ರದೇಶದ ಆಕರ್ಷಣೆ

Team Udayavani, Mar 8, 2017, 1:03 PM IST

dvg1.jpg

ದಾವಣಗೆರೆ: ಗರಿಷ್ಠ ಮುಖಬೆಲೆಯ ನೋಟು ಅಪನಗದೀಕರಣ, ಸತತ ಎರಡು ವರ್ಷದ ಬರ ಹಾಗೂ ಕೇಂದ್ರ ಸರ್ಕಾರದ ಬಿಗಿ ನೀತಿ ದಾವಣಗೆರೆಯ ವ್ಯಾಪಾರ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದೆ. ನಗರದ ವಾಣಿಜ್ಯ ಪ್ರದೇಶವೆಂದೇ ಕರೆಯಿಸಿಕೊಳ್ಳುವ ಮಂಡಿಪೇಟೆ ಈಗ ಭಾಗಶಃ  ಬಂದ್‌ನ ವಾತಾವರಣ ಕಂಡು ಬರುತ್ತಿದೆ. 

ಬೆಳಗ್ಗೆಯಿಂದ ರಾತ್ರಿ 10 ಗಂಟೆ ವರೆಗೂ ಅಂಗಡಿಯಲ್ಲಿದ್ದವರೆಲ್ಲಾ ನಿಲ್ಲಲು ಸಾಧ್ಯವಾಗದಂತೆ ಕೆಲಸ ಮಾಡುತ್ತಿದ್ದ ಕಾಲ ಇದೀಗ ಕಾಣಿಸದಾಗಿದೆ. ಅಂಗಡಿ ಮಾಲೀಕರು, ಕೆಲಸಗಾರರು ವ್ಯಾಪಾರಿ ಭಾಷೆಯಲ್ಲಿ ಹೇಳುವಂತೆ ಅಕ್ಷರಶಃ ನೊಣ  ಹೊಡ್ಕೊಂಡು ಕೂರುವ ಕಾಲ ಬಂದಿದೆ. ಕಳೆದ ವರ್ಷ ಬರ ಪರಿಸ್ಥಿತಿ ಇದ್ದರೂ ನೋಟು ಅಮಾನ್ಯಕ್ಕೂ ಮುನ್ನ ಒಂದಿಷ್ಟು ವ್ಯಾಪಾರ-ವಹಿವಾಟು ಇತ್ತು.

ಆದರೆ, ನೋಟು  ಅಮಾನ್ಯದ ನಂತರ ಆದ ಕುಸಿತ ಇದುವರೆಗೂ ಚೇತರಿಕೆ ಕಂಡಿಲ್ಲ. ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ಇತ್ತ ಸುಳಿಯುತ್ತಿಲ್ಲ. ಅತ್ತ ಅಶೋಕ ಚಿತ್ರಮಂದಿರದಿಂದ ಇತ್ತ ಮಹಾನಗರ ಪಾಲಿಕೆ ಮುಂಭಾಗದ ರೈಲ್ವೆ ಬ್ರಿಡ್ಜ್ನ ಉತ್ತರ ಭಾಗದಿಂದ ಆರಂಭವಾಗುವ ಸುಮಾರು ಅರ್ಧ ಕಿಮೀ ರಸ್ತೆಯ ಅಕ್ಕಪಕ್ಕದಲ್ಲಿ ಬರುವ ಬಹುತೇ ಅಂಗಡಿಗಳ ಕತೆ ಇದಾಗಿದೆ.

ಈ ಭಾಗದಲ್ಲಿ  ಹಿಂದೆ ತಿಂಗಳಿಗೆ ಕನಿಷ್ಠ ಸಣ್ಣ ಮಳಿಗೆ ಅಂದರೂ 5-6 ಸಾವಿರ ರೂ. ಬಾಡಿಗೆ, 1500 ರೂ.ನಷ್ಟು ಕರೆಂಟ್‌ ಬಿಲ್‌, ಇಬ್ಬರು ಕೆಲಸಗಾರರಿಗೆ ಕನಿಷ್ಠ 16 ಸಾವಿರ  ಸಂಬಳ, ಉಳಿದ ವೆಚ್ಚಗಳನ್ನು ನಿಭಾಯಿಸಿಕೊಂಡು ಕೂಡ ಅಂಗಡಿ ಮಾಲೀಕ ಲಕ್ಷಗಟ್ಟಲೇ ಆದಾಯ ಕಾಣುತ್ತಿದ್ದುದುಂಟು. ಆದರೆ, ಇಂದು ಅಂಗಡಿ ಬಾಡಿಗೆ ಕಟ್ಟಲು ಬೇಕಾಗುವಷ್ಟು ಆದಾಯ ಸಹ  ಸಿಗದ ಸ್ಥಿತಿ ನಿರ್ಮಾಣ ಆಗಿದೆ. 

ಕಳೆದ 2 ವರ್ಷಗಳಿಂದ ವ್ಯಾಪಾರ ವಹಿವಾಟು ಕುಸಿಯುತ್ತಾ ಬಂದಿದೆ. ಆದರೆ, ಈ ವರ್ಷವಂತೂ  ಸಂಪೂರ್ಣ ನೆಲಕಚ್ಚಿ ಹೋಗಿದೆ. ಇದೇ ಸ್ಥಿತಿ ಇನ್ನೆರಡು 3 ತಿಂಗಳು ಮುಂದುವರಿದಿದ್ದೇ ಇಲ್ಲಿನ ಅದೆಷ್ಟೋ ಅಂಗಡಿಗಳು ಮುಚ್ಚಿಹೋಗುವುದು ಖಚಿತ. ದಿನನಿತ್ಯ ಗಿರಾಕಿಗಳ ಗೋಜಲಿನಿಂದ ರೋಸಿಹೋಗುತ್ತಿದ್ದ ಅಂಗಡಿ ಕೆಲಸಗಾರರು ಇಂದು ಸುಮ್ಮನೆ ಕುಳಿತು ಬೇಸರಗೊಂಡು ಸ್ವತಃ ತಾವೇ ಕೆಲಸ ಬಿಟ್ಟು ಹೋಗುತ್ತಿದ್ದಾರೆ. 

ದೊಡ್ಡ ದೊಡ್ಡ ವಸ್ತ್ರ ವ್ಯಾಪಾರಿಗಳು,  ಗೃಹಪಯೋಗಿ, ವಿದ್ಯುತ್‌ ಪರಿಕರ, ಪುಸ್ತಕ, ಕಿರಾಣಿ, ಪ್ಲಾಸ್ಟಿಕ್‌ ಹೀಗೆ ಬಹುತೇಕ ಎಲ್ಲಾ ರೀತಿಯ ವಸ್ತುಗಳ ಮಾರಾಟ ಸ್ಥಳವಾಗಿರುವ ಮಂಡಿಪೇಟೆ, ಎಚ್‌.ಎಂ. ರಸ್ತೆ, ನರಸರಾಜ ಪೇಟೆ, ಬೆಳ್ಳುಡಿ ಗಲ್ಲಿ, ಬಿ.ಟಿ. ಗಲ್ಲಿ, ಕೆ.ಆರ್‌. ಮಾರುಕಟ್ಟೆ ಪ್ರದೇಶ ಇಂದು ತನ್ನ ನೈಜ ರೂಪ ಕಳೆದುಕೊಂಡಿವೆ. ಈ ಹಿಂದೆ ಅಲ್ಲಿ ವಾಹನ ಸವಾರಿ ದೊಡ್ಡ ಸವಾಲು ಎಂಬಂತಿತ್ತು.  

ಅಂಥಹ ಜನಜಂಗುಳಿ ಸದಾ ಇರುತ್ತಿತ್ತು. ಆದರೆ, ಇಂದು ಸ್ಥಿತಿ ಸಂಪೂರ್ಣ ವ್ಯತಿರಿಕ್ತವಾಗಿದೆ. ರಸ್ತೆಗಳು ಬಿಕೋ ಎನ್ನುತ್ತವೆ. ಅಂಗಡಿಗಳು ಬಾಗಿಲು  ತೆರೆದಿದ್ದರೂ ಗ್ರಾಹಕರಿಲ್ಲದೆ ಬಣಗುಟ್ಟುತ್ತಿವೆ. ಇಡೀ ಪ್ರದೇಶದ ವಾತಾವರಣವೇ ಬದಲಾಗಿದೆ. ಅನೇಕರು ಬ್ಯಾಂಕ್‌ನಲ್ಲಿ ಸಾಲ ಪಡೆದು ವ್ಯಾಪಾರ ವಹಿವಾಟ ನಡೆಸುತ್ತಿದ್ದರು. ಕಂತು ಬಡ್ಡಿ ಕಟ್ಟಲು ಹೆಣಗಾಡುವಂತಹ ಸ್ಥಿತಿ ಇಂದು ನಿರ್ಮಾಣ ಆಗಿದೆ. 

* ಪಾಟೀಲ ವೀರನಗೌಡ

ಟಾಪ್ ನ್ಯೂಸ್

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

Mumbai: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Video: ಮದುವೆ ಮೆರವಣಿಗೆಯ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

Video: ಮದುವೆ ಸಂಭ್ರಮದ ಖುಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ಕಾರೇ ಸುಟ್ಟಿತು

16-MGM-1

MGM: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜು; ಅಮೃತ ಮಹೋತ್ಸವ

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

SMAT T20: 28 ಎಸೆತದಲ್ಲಿ ಶತಕ ಬಾರಿಸಿ T20ಯಲ್ಲಿ ದಾಖಲೆ ಬರೆದ ಇಂಡಿಯನ್‌ ಬ್ಯಾಟರ್

14-

Jewelry Clean Tips: ಮನೆಯಲ್ಲೇ ಆಭರಣಗಳನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Maharashtra: ಮುಖ್ಯಮಂತ್ರಿ ಆಯ್ಕೆ – ಪ್ರಧಾನಿ ಮೋದಿ ಅವರ ನಿರ್ಧಾರವೇ ಅಂತಿಮ: ಶಿಂಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.