ಸಸ್ಯಸಂಪತ್ತು ಜೀವಸಂಕುಲದ ಉಳಿವಿಗೆ ಕಾರಣ: ಸ್ವಾಮೀಜಿ
Team Udayavani, Apr 26, 2018, 5:22 PM IST
ಮೂಡಿಗೆರೆ: ಔಷಧೀಯ ಸಸ್ಯಗಳು, ಗಿಡಮೂಲಿಕೆಗಳ ಸಂಪತ್ತು ಜೀವಸಂಕುಲಗಳ ಉಳಿವಿಗೆ ಕಾರಣವಾಗಿವೆ ಎಂದು ಗದಗ ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ತಿಳಿಸಿದರು. ತೋಟಗಾರಿಕೆ ಮಹಾವಿದ್ಯಾಲಯದ ಬೆಳ್ಳಿಹಬ್ಬ ಅಂಗವಾಗಿ ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಔಷ ಧೀಯ ಮತ್ತು ಸುಗಂಧ ದ್ರವ್ಯ ಬೆಳೆಗಳ ಪೋಷಣೆ, ಬೇಸಾಯ ಮತ್ತು ಉಪಯೋಗ ಕುರಿತ ರಾಷ್ಟ್ರಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ತೋಟಗಾರಿಕೆ ಮಹಾವಿದ್ಯಾಲಯ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವುದರಿಂದ ಇಲ್ಲಿಯೂ ದೊಡ್ಡಮಟ್ಟದ ಔಷ ಧದ ಸಸ್ಯಗಳ ಸಂರಕ್ಷಣೆ ಮಾಡಬಹುದು ಎಂದು ತಿಳಿಸಿದ ಅವರು, ಮೂಡಿಗೆರೆಯಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ನಾನು ಇಲ್ಲಿ ಸಂರಕ್ಷಕನಾಗಿ, ಸಂವರ್ಧನಕಾರನಾಗಿ, ಸಂಶೋಧಕನಾಗಿ ಭಾಗವಹಿಸುತ್ತಿದ್ದೇನೆ. ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ತಪ್ಪಲಿನಲ್ಲಿ ಔಷಧೀಯ ಸಸ್ಯಗಳು ಹೇರಳವಾಗಿ ಸಿಗುತ್ತದೆ. ಸುಮಾರು 340 ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯತೋಟಗಳಿವೆ. ಅದರಲ್ಲಿ ಹೇರಳವಾಗಿ ಔಷಧೀಯ ಸಂರಕ್ಷಣೆ ಮಾಡಲಾಗುತ್ತಿದೆ. ಸುಮಾರು 80 ಸಾವಿರ ಎಕರೆ ಪ್ರದೇಶವಿದೆ. 2003ರಿಂದ ಈಚೆಗೆ ಮಳೆಕೊಯ್ಲು, ಅರಣ್ಯೀಕರಣಗಳನ್ನು ಮಾಡುವುದರ ಮೂಲಕ ಕಪ್ಪತ್ತಗುಡ್ಡದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಯಲಾಗುತ್ತಿದೆ. ಕಪ್ಪತ್ತಗುಡ್ಡ ಬಂಗಾರದ ಗುಡ್ಡವಾಗಿದ್ದು, ಆರು ಜಿಲ್ಲೆಗಳಿಗೆ ಆಧಾರವಾಗಿದೆ ಎಂದರು.
ಯುಎಎಚ್‌ಎಸ್ ಶಿವಮೊಗ್ಗದ ಡಾ| ನಾರಾಯಣಸ್ವಾಮಿ ಮಾತನಾಡಿ, ಭಾರತದ ಹದಿನೆಂಟು ಔಷ ಧೀಯ ಸಸ್ಯಗಳ ತಾಣಗಳಲ್ಲಿ ಹಿಮಾಲಯ ಮತ್ತು ಪಶ್ಚಿಮ ಘಟ್ಟ ಪ್ರಮುಖವಾದದ್ದು. ಈ ಪ್ರದೇಶಗಳಲ್ಲಿ ಸಿಗುವ ಔಷ ಧೀಯ ಸಸ್ಯಗಳಿಂದ ಮನುಷ್ಯನ ಜೀರ್ಣಕ್ರಿಯೆಯಿಂದ ಮೂಳೆಮುರಿತದವರೆಗೆ ಎಲ್ಲಾ ಔಷಧೀಯ ಸಸ್ಯಗಳು ಸಿಗುತ್ತದೆ. ಔಷಧೀಯ ಸಸ್ಯಗಳ ರಫ್ತಿನಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಕೀನ್ಯ ಮೂರನೇ ಸ್ಥಾನದಲ್ಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ನಂ.1 ಔಷಧೀಯ ಸಸ್ಯಗಳ ತಾಣವಾಗಲಿದೆ ಎಂದರು. ಇದಕ್ಕೂ ಮೊದಲು ನಡೆದ ಜಾಥಾವನ್ನು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಉದ್ಘಾಟಿಸಿದರು.
ಶಿವಮೊಗ್ಗದ ಕುಲಪತಿ ಡಾ| ಎಂ.ಕೆ.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಆಯುಕ್ತ ಡಾ|ಬಿಎನ್‌ಎಸ್ ಮೂರ್ತಿ, ಡಾ| ವಿ.ಸುಂದರೇಶನ್, ಡಾ| ಹೋಮಿ ಚೆರಿಯನ್, ಡಾ| ಪಿ.ನಾರಾಯಣಸ್ವಾಮಿ, ಡಾ| ಕೆ.ಮಂಜಪ್ಪ, ಡಾ| ಟಿ.ಎಚ್.ಗೌಡ, ಡೀನ್ ಡಾ| ಎಂ.ಹನುಮಂತಪ್ಪ, ಸಹಾಯಕ ಕುಲ ಸಚಿವ ಮಣಿಕಂಠ, ಸಹಾಯಕ ಪ್ರಾಧ್ಯಾಪಕ ಸದಾಶಿವ ನಡಕೇರಿ, ಎಂ.ಎಸ್.ಅಶೋಕ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.