ಹೂವು-ಹಣ್ಣು ಬೆಳೆಗಾರರಿಗೆ ಸಿಕ್ಕೀತೆ ಪರಿಹಾರ?
Team Udayavani, May 15, 2021, 4:21 PM IST
ದಾವಣಗೆರೆ: ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಜನತಾ ಕರ್ಫ್ಯೂ ವೇಳೆ ಬೆಳೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ ಹಣ್ಣು, ಹೂ ಹಾಗೂ ತರಕಾರಿ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಿತ್ತು. ಈ ವರ್ಷ ರಾಜ್ಯ ಸರ್ಕಾರ ಕೊರೊನಾ ಕರ್ಫ್ಯೂ ಘೋಷಿಸಿರುವುದರಿಂದ ಬೆಳೆಗಾರರು ಮತ್ತೆ ಸರ್ಕಾರ ಪರಿಹಾರ ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಕಳೆದ ವರ್ಷದ ಜನತಾ ಕರ್ಫ್ಯೂ ವೇಳೆ ಹಣ್ಣು ಮತ್ತು ತರಕಾರಿ ಹಾನಿಗೆ ಹೆಕ್ಕೇರ್‌ಗೆ 15 ಸಾವಿರ ರೂ. ಹಾಗೂ ಹೂವು ಹಾನಿಗೆ ಹೆಕ್ಕೇರ್‌ಗೆ 25 ಸಾವಿರ ರೂ.ನಂತೆ ಪರಿಹಾರ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ 5836 ರೈತರಿಗೆ ಸಂಬಂಧಿಸಿ 3681 ಹೆಕ್ಕೇರ್ ಪ್ರದೇಶದ 5.61 ಕೋಟಿ ರೂ. ಗಳಷ್ಟು ಹಣ್ಣು, ಹೂವು ಮತ್ತು ತರಕಾರಿ ಬೆಳೆ ಹಾನಿಯಾಗಿತ್ತು. ಸರ್ಕಾರದಿಂದ 5.28 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದ್ದು, ಇದರಲ್ಲಿ 4.15 ಕೋಟಿ ರೂ. ಪರಿಹಾರವನ್ನು ಹಂತ ಹಂತವಾಗಿ 4436 ರೈತರಿಗೆ ವಿತರಣೆ ಮಾಡಲಾಗಿದೆ.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದ, ಹಿಸ್ಸೆ ಮಾಲೀಕರ ಸಮಸ್ಯೆ ಇರುವ ರೈತರಿಗೆ ಪಾವತಿಯಾಗುವುದು ಬಾಕಿ ಇದೆ. ಹಣ್ಣು, ಹೂವು ಹಾಗೂ ತರಕಾರಿ ಬೆಳೆಗಾರರಿಗೆ ನೀಡಿದ ಪರಿಹಾರ ಜಗಳೂರು ತಾಲೂಕಿನ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರಕಿತ್ತು. ಜಗಳೂರು ತಾಲೂಕಿನ 2116 ರೈತರಿಗೆ ಸಂಬಂಧಿಸಿದ 1443 ಹೆಕ್ಕೇರ್ ಬೆಳೆ ಹಾನಿಗಾಗಿ 2.17 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಉಳಿದಂತೆ ದಾವಣಗೆರೆ ತಾಲೂಕಿನ 711 ರೈತರಿಗೆ 64 ಲಕ್ಷ ರೂ., ಚನ್ನಗಿರಿ ತಾಲೂಕಿನ 605 ರೈತರಿಗೆ 49 ಲಕ್ಷ ರೂ., ಹೊನ್ನಾಳಿ ತಾಲೂಕಿನ 758 ರೈತರಿಗೆ 65 ಲಕ್ಷ ರೂ., ಹರಿಹರ ತಾಲೂಕಿನ 246 ರೈತರಿಗೆ 18.82 ಲಕ್ಷ ರೂ. ಪರಿಹಾರ ಮೊತ್ತ ಪಾವತಿಸಲಾಗಿದೆ.
ಹಣ್ಣು ಪರಿಹಾರ: ಜನತಾ ಕರ್ಫ್ಯೂ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 2023 ರೈತರಿಗೆ ಸಂಬಂಧಿಸಿದಂತೆ 1280 ಹೆಕ್ಕೇರ್ ಪ್ರದೇಶದ ಹಣ್ಣು ಹಾನಿಯಾಗಿತ್ತು. ಇದಕ್ಕಾಗಿ 1.29 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ದಾವಣಗೆರೆ ತಾಲೂಕಿನ 345 ರೈತರಿಗೆ 29 ಲಕ್ಷ ರೂ., ಚನ್ನಗಿರಿ ತಾಲೂಕಿನ 567 ರೈತರಿಗೆ 46 ಲಕ್ಷ ರೂ., ಹೊನ್ನಾಳಿ ತಾಲೂಕಿನ 310 ರೈತರಿಗೆ 30ಲಕ್ಷ ರೂ., ಹರಿಹರ ತಾಲೂಕಿನ 124 ರೈತರಿಗೆ 10ಲಕ್ಷ ರೂ., ಜಗಳೂರು ತಾಲೂಕಿನ 111 ರೈತರಿಗೆ 12ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ.
ತರಕಾರಿ ಪರಿಹಾರ: ಜನತಾ ಕರ್ಫ್ಯೂ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 3536 ರೈತರಿಗೆ ಸಂಬಂಧಿಸಿದಂತೆ 2308 ಹೆಕ್ಕೇರ್ ಪ್ರದೇಶದ ತರಕಾರಿ ಹಾನಿಯಾಗಿತ್ತು. ಇದಕ್ಕಾಗಿ 3.78 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 2.65 ಕೋಟಿ ರೂ. ಪರಿಹಾರ ರೈತರಿಗೆ ಪಾವತಿಸಲಾಗಿದೆ. ದಾವಣಗೆರೆ ತಾಲೂಕಿನ 332ರೈತರಿಗೆ 30 ಲಕ್ಷ ರೂ., ಚನ್ನಗಿರಿ ತಾಲೂಕಿನ 29 ರೈತರಿಗೆ, 2.51 ಲಕ್ಷ ರೂ., ಹೊನ್ನಾಳಿ ತಾಲೂಕಿನ 339 ರೈತರಿಗೆ 25 ಲಕ್ಷ ರೂ., ಹರಿಹರ ತಾಲೂಕಿನ 45 ರೈತರಿಗೆ 3.5 ಲಕ್ಷ ರೂ., ಜಗಳೂರು ತಾಲೂಕಿನ 1987 ರೈತರಿಗೆ 2.02 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. 280 ರೈತರಿಗೆ ಪರಿಹಾರ ವಿತರಿಸುವುದು ಬಾಕಿ ಇದೆ.
ಪುಷ್ಪ ಪರಿಹಾರ: ಜನತಾ ಕರ್ಫ್ಯೂ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 277 ರೈತರಿಗೆ ಸಂಬಂಧಿಸಿ 92.78 ಹೆಕ್ಕೇರ್ ಪ್ರದೇಶದ ಹೂವು ಹಾನಿಯಾಗಿತ್ತು. ಇದಕ್ಕಾಗಿ 20.86 ಲಕ್ಷ ರೂ. ಬಿಡುಗಡೆಯಾಗಿದೆ. ಎಲ್ಲ ರೈತರಿಗೆ ಪರಿಹಾರ ಪಾವತಿಸಲಾಗಿದೆ. ದಾವಣಗೆರೆ ತಾಲೂಕಿನ 34 ರೈತರಿಗೆ 3.92 ಲಕ್ಷ ರೂ., ಚನ್ನಗಿರಿ ತಾಲೂಕಿನ 9 ರೈತರಿಗೆ 78,224 ರೂ., ಹೊನ್ನಾಳಿ ತಾಲೂಕಿನ 109 ರೈತರಿಗೆ 10ಲಕ್ಷ ರೂ., ಹರಿಹರ ತಾಲೂಕಿನ 77 ರೈತರಿಗೆ 4.5 ಲಕ್ಷ ರೂ., ಜಗಳೂರು ತಾಲೂಕಿನ 18 ರೈತರಿಗೆ 6.17 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಹಣ್ಣು, ಹೂವು ಹಾಗೂ ತರಕಾರಿ ಬೆಳೆಗಾರರಿಗೆ ಸರ್ಕಾರ ನೀಡಿದ ಪರಿಹಾರಧನ ಕನಿಷ್ಠವಾಗಿದ್ದರೂ ಇಷ್ಟಾದರೂ ರೈತರಿಗೆ ತಲುಪಿತು ಎಂಬ ಸಮಾಧಾನ ರೈತರದ್ದಾಗಿದೆ. ಈ ವರ್ಷವೂ ಸರ್ಕಾರ ಒಂದಿಷ್ಟು ಪರಿಹಾರ ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಕರ್ಫ್ಯೂ ವೇಳೆ ಕೃಷಿ, ತೋಟಗಾರಿಕೆ ಉತ್ಪನ್ನ ಮಾರಾಟಕ್ಕೆ ಅವಧಿ ವಿಸ್ತರಣೆ ಜತೆಗೆ ಸಾಗಾಟಕ್ಕೆ ಅಡ್ಡಿ ಇಲ್ಲದಿದ್ದರೂ ಕರ್ಫ್ಯೂ ಕಾರಣದಿಂದ ಬೇಡಿಕೆ ಬಹಳಷ್ಟು ಕುಸಿದಿದೆ. ಇದರಿಂದಾಗಿ ಉತ್ಪನ್ನಗಳ ಬೆಲೆಯೂ ಕುಸಿದಿದೆ.
ಕೆಲವೊಂದು ಬೆಳೆಗಳ ಬೆಲೆ ಸಾಗಾಟ ಮಾಡುವ ವೆಚ್ಚವೂ ಭರಿಸದಷ್ಟು ಇಳಿದಿದ್ದು ಬೆಳೆ ಜಮೀನಿನಲ್ಲಿಯೇ ಕೊಳೆಯುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ವರ್ಷವೂ ಪರಿಹಾರ ಘೋಷಿಸುವುದು ಸೂಕ್ತ. ಇ. ಶ್ರೀನಿವಾಸ್, ರೈತ ಮುಖಂಡ
ಹೂವು, ಹಣ್ಣು, ತರಕಾರಿ ಬೆಳೆ ಪರಿಹಾರವಾಗಿ 4.15 ಕೋಟಿ ರೂ. ಪರಿಹಾರವನ್ನು 4436 ರೈತರಿಗೆ ವಿತರಣೆ ಮಾಡಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದ, ಹಿಸ್ಸೆ ಮಾಲೀಕರ ಸಮಸ್ಯೆ ಇರುವ ಕೆಲವು ರೈತರಿಗೆ ಪಾವತಿಯಾಗುವುದು ಬಾಕಿ ಇದೆ. ಈ ವರ್ಷ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆಯಾದರೂ ಕೃಷಿ, ತೋಟಗಾರಿಕೆ ಉತ್ಪನ್ನ ಮಾರಾಟಕ್ಕೆ ಹೆಚ್ಚಿನ ಅಡ್ಡಿಯಾಗಿಲ್ಲ. ಲಕ್ಷ್ಮೀಕಾಂತ್ ಬೊಮ್ಮನ್ನಾರ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ
–ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.