ಗಾಜಿನಮನೆಯಲ್ಲಿ ಹೂವಿನ ಲೋಕ!


Team Udayavani, Jan 28, 2019, 6:50 AM IST

uvsam-6.jpg

ದಾವಣಗೆರೆ: ಏಷ್ಯಾ ಖಂಡದಲ್ಲೇ 2ನೇ ಅತಿದೊಡ್ಡದಾದ ದಾವಣಗೆರೆಯ ಗಾಜಿನ ಮನೆಯಲ್ಲಿ ಅತ್ಯಾಕರ್ಷಕ, ಮನಸೂರೆಗೊಳ್ಳುವ, ವಿವಿಧ ಬಗೆಯ ಸುಂದರ ಮೋಹಕ ಹೂವು-ಫಲಗಳ ಲೋಕವೇ ಅನಾವರಣಗೊಂಡಿದೆ.

ಸಾರ್ವಜನಿಕರಲ್ಲಿ ತೋಟಗಾರಿಕೆಯ ಬಗ್ಗೆ ಅಭಿರುಚಿ, ಮಕ್ಕಳಲ್ಲಿ ಜ್ಞಾನ ಹೆಚ್ಚಿಸುವ, ಬೆಳೆಗಾರರಿಗೆ ಪ್ರೋತ್ಸಾಹ ನೀಡುವ, ಒಂದೆಡೆ ದೇಶ-ವಿದೇಶದ ವಿವಿಧ ಬಗೆಯ ಹೂವು, ಅಲಂಕಾರಿಕ ಗಿಡಗಳ ಪ್ರದರ್ಶಿಸುವ ತೋಟಗಾರಿಕೆ ಇಲಾಖೆಯ ಉದ್ದೇಶ ಸಾಫಲ್ಯಕ್ಕೆ ಅನುಗುಣವಾಗಿ ಫಲ-ಪುಷ್ಪ ಪ್ರದರ್ಶನ ನಡೆಯುತ್ತಿದೆ.

ಕುಂದುವಾಡ ಕೆರೆಗೆ ಹೊಂದಿಕೊಂಡಿರುವ ವಿಶಾಲ ಜಾಗದಲ್ಲಿ 25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗಾಜಿನಮನೆ… ದೇಶದಲ್ಲೇ ದೊಡ್ಡದು ಎಂಬ ಖ್ಯಾತಿ ಹೊಂದಿದೆ. ವಿನ್ಯಾಸಕ್ಕಾಗಿ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿರುವ ಗಾಜಿನಮನೆಯಲ್ಲಿನ ಫಲ-ಪುಷ್ಪ ಪ್ರರ್ದಶನ ಎಲ್ಲರನ್ನು ಆಕರ್ಷಿಸುತ್ತಿದೆ.

ಕೆಂಪು, ಹಳದಿ ಗುಲಾಬಿ, ಸೇವಂತಿಗೆ, ಕಾರ್ನೇಷನ್‌, ಆರ್ಕಿಡ್ಸ್‌, ಹೆಲಿಯೋನಿಯ, ಹೀಲಿಯಮ್‌ ಒಳಗೊಂಡಂತೆ 5 ಲಕ್ಷ ವಿವಿಧ ಬಗೆಯ ಹೂವುಗಳ ಜೊತೆಗೆ ಮತ್ತು ಅಪರೂಪದ ಎಲೆಗಳನ್ನು ಬಳಸಿ ನಿರ್ಮಿಸಲಾಗಿರುವ 25 ಅಡಿ ಎತ್ತರ, 20 ಅಡಿ ಅಗಲದ ಸಾಂಚಿ ಸ್ತೂಪ…ಈ ಬಾರಿಯ ಫಲ-ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ.

ಕಲ್ಲಂಗಡಿಯಲ್ಲಿ ಅರಳಿದ ಹೂವು, ಪಪ್ಪಾಯಿ ಹಣ್ಣಿನಲ್ಲಿ ತಯಾರಿಸಲ್ಪಟ್ಟಿರುವ ತಬಲಾ, ಓಂ, ಗಣೇಶ, ಶಿವಲಿಂಗ, ಮೀನು, ಹಸು, ಹೂವು, ಬದನೆ, ಕ್ಯಾರೆಟ್‌ನಲ್ಲಿ ಮೂಡಿ ಬಂದಿರುವ ನವಿಲು, ಗುಬ್ಬಚ್ಚಿಗಳು, ಹಾಗಲಕಾಯಿಗಳಲ್ಲಿ ಸಿದ್ಧಪಡಿಸಿರುವ ಮೊಸಳೆ, ಮೂಲಂಗಿ, ಕ್ಯಾರೆಟ್ ಬಳಸಿ ತಯಾರಿಸಿರುವ ಬಾತುಕೋಳಿ… ಹೀಗೆ ನಾನಾ ಬಗೆಯ ತರಕಾರಿಗಳಲ್ಲಿ ಮೂಡಿಬಂದ ಕಲಾಕೃತಿಗಳು ಮನಮೋಹಕ.

ಹತ್ತು ಹಲವು ತಳಿಯ 15 ಸಾವಿರ ಗಿಡಗಳನ್ನು ಪ್ಲಾಸ್ಟಿಕ್‌ ಕುಂಡಗಳಲ್ಲಿ ಬೆಳೆಸಲಾಗಿದೆ. ಹಳದಿ, ಕೇಸರಿ, ಬಿಳಿ, ಕೆಂಪು, ಪರ್ಪಲ್‌, ಬಣ್ಣದ ಹೂವುಗಳ ಸಾಲ್ವಿಯಾ, ಮ್ಯಾರಿಗೋಲ್ಡ್‌, ಕಲರ್‌ ಪೆಟ್ಯುನಿಯಾ, ಪೆರಿವಿಂಕಲ್‌, ಸೆಲ್ಯುಷಿಯಾ, ಜೀನಿಯಾ, ಟೆಟ್ಯುನಿಯಾ, ಬಾಲ್ಸ್‌ಮ್‌, ವೆರ್ಬೇನಿಯಾ, ಆಸ್ಟರ್‌ ಮುಂತಾದ ಹೂವಿನ ಗಿಡಗಳ ಪ್ರದರ್ಶನ ಚಿತ್ತಾಕರ್ಷಕ.

ಜಿಲ್ಲೆಯ ವಿವಿಧ ತಾಲೂಕುಗಳ ರೈತರು ಬೆಳೆದಿರುವ ಐದಾರು ಬಗೆಯ ಹೈಬ್ರಿಡ್‌ ತೆಂಗಿನ ಕಾಯಿಗಳು, ಕಾಳು ಮೆಣಸು, ನಿಂಬೆ, ಅಡಿಕೆ, ತಾಳೆ ಹಣ್ಣು, ಸಪೋಟ, ಸೀತಾಫಲ, ತೋತಾಪುರಿ ಮಾವಿನಕಾಯಿ, ಪಪ್ಪಾಯಿ, ಹಲಸು, ಏಲಕ್ಕಿ ಬಾಳೆ, ದಾಳಿಂಬೆ, ತರಕಾರಿಗಳಾದ ಕ್ಯಾರೆಟ್, ಗೆಣಸು, ಟೊಮಾಟೋ ಸೀಮೆ ಬದನೆ, ಬದನೆ, ಹಾಗಲಕಾಯಿ, ಎಲೆ ಕೋಸು….ನಾನಾ ಬಗೆಯ ತೋಟಗಾರಿಕೆ ಬೆಳೆಗಳ ಪ್ರದರ್ಶನ ಎಲ್ಲರನ್ನೂ ಆಕರ್ಷಿಸುತ್ತಿದೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ನಡೆಸಿದ ರಂಗೋಲಿ ಸ್ಪರ್ಧೆಯಲ್ಲಿ ದೇಶದ ಭಾವೈಕ್ಯತೆ ಸೂಸುವ ಭಾರತ ಧ್ವಜಾರೋಹಣ…, ಸ್ವಚ್ಛ ಭಾರತ ಪರಿಕಲ್ಪನೆ…, ಶಿಕ್ಷಣದ ಮಹತ್ವ ಸಾರುವ ರಂಗೋಲಿಯ ಸೊಬಗೇ ಸೊಬಗು. ಈಚೆಗೆ ಲಿಂಗೈಕ್ಯರಾದ ತುಮಕೂರು ಸಿದ್ಧಗಂಗಾ ಶ್ರೀಗಳ ಭಾವಚಿತ್ರ ರಂಗೋಲಿಯಲ್ಲಿ ಒಡಮೂಡಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ರಂಗೋಲಿಯಲ್ಲಿ ಮೂಡಿರುವ ಗಾನಯೋಗಿ ಪಂ| ಪುಟ್ಟರಾಜ ಗವಾಯಿ, ರಾಷ್ಟ್ರಕವಿ ಕುವೆಂಪು, ತೋಟಗಾರಿಕೆ ಪಿತಾಮಹಾ ಡಾ| ಎಂ.ಎಚ್. ಮರಿಗೌಡ ಇತರರ ಭಾವಚಿತ್ರಗಳು ಸೊಗಸಾಗಿವೆ. ಸಿರಿಧಾನ್ಯದಲ್ಲಿ ಮೂಡಿದ ಅಂಬೇಡ್ಕರ್‌ ಅವರ ಪ್ರತಿಕೃತಿ ಕಲಾವಿದರ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿದೆ.

ಫಲ-ಪುಷ್ಟ ಪ್ರದರ್ಶನದ ಹಿನ್ನೆಲೆಯಲ್ಲಿ ಗಾಜಿನ ಮನೆಯ ಒಳ ಆವರಣದಲ್ಲಿರುವ ಎಲ್ಲಾ ಮರಗಳಿಗೂ ಬಗೆ ಬಗೆಯಾದ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಬೆಳಕಿನಲ್ಲಿ ರಾರಾಜಿಸುವ ಬೊನ್ಸಾಯ್‌… ಗಿಡಗಳನ್ನ ನೋಡುವುದೇ ಒಂದು ಸಂತೋಷ. ಅಕ್ವೇರಿಯಂನಲ್ಲಿನ ವಿವಿಧ ಮೀನುಗಳ ಪ್ರದರ್ಶನ ಚಿಕ್ಕಮಕ್ಕಳಾದಿಯಾಗಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪ್ರದರ್ಶನದ ಅಂಗವಾಗಿ ಮಕ್ಕಳಿಗೆ ಅಮ್ಯೂಸ್‌ಮೆಂಟ್ ಪಾರ್ಕ್‌ ಇದೆ. ಗಾಜಿನಮನೆ, ವಿವಿಧ ಫಲ-ಪುಷ್ಪ ನೋಡಿದ ನಂತರ ಜಿಹ್ವಾ ಚಾಪಲ್ಯಕ್ಕಾಗಿ ವಿಶೇಷ ಬಗೆ ಬಗೆಯ ತಿಂಡಿ ತಿನಿಸುಗಳ ಮಳಿಗೆಗಳು ಇವೆ. ಫೆ. 4ರ ವರೆಗೆ ಪ್ರತಿನಿತ್ಯ ಸಂಜೆ 6 ರಿಂದ ರಾತ್ರಿ 9 ರವರೆಗೆ ಪ್ರದರ್ಶನ ನಡೆಯಲಿದೆ.

ಫಲ-ಪುಷ್ಪ ಪ್ರದರ್ಶನದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಉತ್ತಮ ಉದ್ಯಾನ ವನ ನಿರ್ಮಾಣ, ಬೆಳೆಗಾರರು ಬೆಳೆದ ವಿವಿಧ ಹಣ್ಣು, ತರಕಾರಿ, ಸಾಂಬಾರು ಮತ್ತು ತೋಟದ ಬೆಳೆಗಳ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಟ್ಟು ಉತ್ತಮ ಪ್ರದರ್ಶನಕ್ಕೆ ಬಹುಮಾನ ವಿತರಣೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗಾಜಿನಮನೆ, ಫಲ-ಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ರಸ್ತೆ, ಸಂಚಾರ ದಟ್ಟಣೆಗೆ ಕ್ರಮ ಕೈಗೊಂಡಲ್ಲಿ ಫಲ-ಪುಷ್ಪ ಪ್ರದರ್ಶನ ಇನ್ನಷ್ಟು ಯಶಸ್ವಿಯಾಗಲಿದೆ.

ಟಾಪ್ ನ್ಯೂಸ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

7-dvg

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

1—-kumr-renuka

BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.