ಮೂಲಭೂತ ಹಕ್ಕುಗಳೇ ಮಾನವ ಹಕ್ಕುಗಳು: ನ್ಯಾ| ಬೇನಾಳ
Team Udayavani, Dec 15, 2018, 3:35 PM IST
ಹರಿಹರ: ಮಾನವನ ಮೂಲಭೂತ ಹಕ್ಕುಗಳಾದ ಸ್ವಾತಂತ್ರ್ಯ, ಸಮಾನತೆಗೆ ಚ್ಯುತಿಯಾಗಬಾರದೆಂದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳನ್ನು ಘೋಷಣೆ ಮಾಡಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧಿಧೀಶರಾದ ವೈ.ಕೆ. ಬೇನಾಳ ಹೇಳಿದರು.
ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ನಗರದ ಎಸ್‌ಜೆವಿಪಿ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹುಟ್ಟಿನಿಂದ ಮಾನವರೆಲ್ಲರೂ ಸಮಾನರು ಮತ್ತು ಸ್ವತಂತ್ರರು. ಪ್ರತಿಯೊಬ್ಬರಿಗೂ ಸಮಾಜದಲ್ಲಿ ಉತ್ತಮವಾಗಿ, ನೆಮ್ಮದಿಯಿಂದ ಮತ್ತೂಬ್ಬರಿಗೆ
ತೊಂದರೆಯಾಗದ ರೀತಿ ಬದುಕಲು ಅವಕಾಶ ಕಲ್ಪಿಸುವುದೇ ಮಾನವ ಹಕ್ಕುಗಳು ಎಂದರು.
ನಮ್ಮ ಸಂವಿಧಾನದಲ್ಲಿ ಪ್ರಸ್ತಾಪಿಸಿರುವ ಮೂಲಭೂತ ಹಕ್ಕುಗಳು ಮಾನವ ಹಕ್ಕುಗಳೇ ಆಗಿದ್ದು, ದೇಶದ ಯಾವುದೇ ಪ್ರಜೆ ಅನ್ಯಾಯಕ್ಕೊಳಗಾದಾಗ ಜಾತಿ, ಜನಾಂಗ, ಧರ್ಮ, ಭಾಷೆ, ಸಂಸ್ಕೃತಿ ತಾರತಮ್ಯವಿಲ್ಲದೆ ನ್ಯಾಯ ದೊರಕಿಸಿಕೊಳ್ಳುವ ಅವಕಾಶ ಸಂವಿಧಾನದಲ್ಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಗರಾಜ ಹಲವಾಗಲು ಮಾತನಾಡಿ, ವಿಶ್ವದ ಎಲ್ಲಾ ನಾಗರಿಕರಿಗೂ ಜಾತಿ, ಧರ್ಮ, ದೇಶ, ಭಾಷೆ, ಸಂಸ್ಕೃತಿಯ ಭೇದವಿಲ್ಲದೆ ಸಮಾನವಾಗಿ ಮತ್ತು ಸ್ವಾತಂತ್ರ್ಯದಿಂದ ಬದುಕುವ ವಾತಾವರಣವನ್ನು ಸೃಷ್ಟಿಸುವುದೇ ಮಾನಹ ಹಕ್ಕುಗಳ ಧ್ಯೇಯವಾಗಿದೆ ಎಂದರು.
ಎಪಿಪಿ ಶಂಶೀರ ಅಲಿಖಾನ್ ಮಾತನಾಡಿ, ಆಧುನಿಕ ನಾಗರಿಕ ಸಮಾಜದಲ್ಲೂ ಮಾನವ ಹಕ್ಕುಗಳಿಗೆ ಮತ್ತೆ ಆತಂಕ ಎದುರಾಗಿದೆ. ಪ್ರಪಂಚದಾದ್ಯಂತ ಅಲ್ಲಲ್ಲಿ ಮತಾಂಧರ ಭಯೋತ್ಪಾದನಾ ಕೃತ್ಯ, ಯುದ್ಧ ಭೀತಿ ಕಾಣುತ್ತಿದ್ದೇವೆ. ವಿದ್ಯಾರ್ಥಿಗಳು ಶಾಲಾ-ಕಾಲೇಜು ಹಂತದಲ್ಲೇ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಬೇಕು ಎಂದರು. ಡಿ.ಎಂ. ಹಾಲಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶೋಷಣೆ ವಿರುದ್ಧ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ವಕೀಲರಾದ ಜಚ್.ಎಂ. ಷಡಾಕ್ಷರಯ್ಯ, ಜಿ.ಎಚ್. ಭಾಗೀರಥಿ ಮಾತನಾಡಿದರು. ಎಜಿಪಿ ಚನ್ನಪ್ಪ, ಉಪನ್ಯಾಸಕರಾದ ಚಂದ್ರಶೇಖರ ಮಠ, ಸೌಭಾಗ್ಯ, ಕಂದಮ್, ಕೆ.ಬಿ. ಕಾಂಬಳೆ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್ ಜೋಶಿ
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.