ಪ್ರಪಂಚದಿಂದಲೇ ದೂರವಾದಂತೆ ಆಗಿತ್ತು: ಕೋವಿಡ್ ಕಣ್ಣೀರ ಕಥೆ ಹೇಳಿದ ಸಂಸದ ಸಿದ್ದೇಶ್ವರ
Team Udayavani, Apr 14, 2020, 4:56 PM IST
ದಾವಣಗೆರೆ: ಮಗಳಿಗೆ ಕೋವಿಡ್-19 ಸೋಂಕಿನ ಕಾರಣದಿಂದ ಹೋಮ್ ಕ್ವಾರಂಟೈನ್ ನಲ್ಲಿದ್ದ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ ಸದ್ಯ ಸುರಕ್ಷಿತವಾಗಿ ಅವಧಿ ಮುಗಿಸಿದ್ದಾರೆ. ಹೋಮ್ ಕ್ವಾರಂಟೈನ್ ಮುಗಿಸಿದ ಬಳಿಕ ಮೊದಲ ಭಾರಿಗೆ ಸಭೆಯಲ್ಲಿ ಪಾಲ್ಗೊಂಡ ಅವರು ತನ್ನ ಕ್ವಾರಂಟೈನ್ ದಿನಗಳ ಕಥೆ ಬಿಚ್ಚಿಟ್ಟರು.
ನನ್ನ ಮಗಳು ಹಾಗೂ ನನ್ನ ತಮ್ಮನ ಮಗನಿಗೆ ಕೋವಿಡ್-19 ಸೋಂಕು ಪಾಸಿಟಿವ್ ಬಂದಿತ್ತು. ಆದ್ದರಿಂದ ಬಹಳಷ್ಟು ಜನ ಹೆದರಿದ್ದರು. ನಾನೂ ಹೋಂ ಕ್ವಾರಂಟೈನ್ ನಲ್ಲಿ ಇರಬೇಕಾಯಿತು. ನಮ್ಮನ್ನು ನೋಡಿ ನಮ್ಮ ಸಂಬಂಧಿಕರೇ ನನ್ನ ಹತ್ತಿರ ಬರಲು ಹಿಂದೇಟು ಹಾಕುತ್ತಿದ್ದರು. ನಾವು ಪ್ರಪಂಚದಿಂದಲೇ ದೂರವಿದ್ದೇವಾ ಎನ್ನುವಂತೆ ಆಗಿತ್ತು ನಮಗೆ! ಎಂದು ಕ್ವಾರೆಂಟೈನ್ ನಲ್ಲಿ ಅನುಭವಿಸಿದ ನೋವನ್ನು ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿಕೊಂಡರು.
ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೋವಿಡ್ 19 ನಿಯಂತ್ರಣ ಕ್ರಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದೀಗ ಜಿಲ್ಲೆಯ ಮೂರು ಜನರಿಗೆ ಸೋಂಕು ನೆಗೆಟಿವ್ ಬಂದಿದ್ದು ಸಂತೋಷ ಮೂಡಿಸಿದೆ. ಕೋವಿಡ್-19 ಸೋಂಕು ಬಂತೆಂದು ಯಾರೂ ಹೆದರುವುದು ಬೇಡ. ಕೊವಿಡ್-19 ಪರೀಕ್ಷೆ ಮಾಡಿಸಲು ಸಾಕಷ್ಟು ಜನರು ಹೆದರುತ್ತಿದ್ದಾರೆ. ನಮ್ಮ ತಮ್ಮನೇ ಅವನ ಎರಡನೇ ಮಗನ ಪರೀಕ್ಷೆ ಮಾಡಿಸಿರಲಿಲ್ಲಾ. ನಾವೆಲ್ಲಾ ಪರೀಕ್ಷೆ ಮಾಡಿಸಿದ ಮೇಲೆ ಅವನೂ ಪರೀಕ್ಷೆ ಮಾಡಿಸಿದ್ದು ನೆಗೆಟಿವ್ ಬಂದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.