ಕಬ್ಬು ಬೆಳೆಯುವ ತಾಂತ್ರಿಕತೆ ಮಾಹಿತಿ ನೀಡಿ
Team Udayavani, Oct 5, 2018, 3:44 PM IST
ದಾವಣಗೆರೆ: ಕೃಷಿ ಇಲಾಖೆಯಿಂದ ಕಬ್ಬು ಬೇಸಾಯದ ಬಗ್ಗೆ ತಾಂತ್ರಿಕ ಮಾಹಿತಿ ಅವಶ್ಯಕತೆ ಇದೆ. ಹಾಗಾಗಿ ಬೆಳಗಾವಿ ಮಾದರಿಯಲ್ಲಿ ರೈತರಿಗೆ ಕಬ್ಬು ಬೆಳೆಯುವ ತಾಂತ್ರಿಕತೆ ತಿಳಿಸಿಕೊಡಬೇಕಿದೆ ಎಂದು ಲೋಕಿಕೆರೆ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಚ್. ಓಬಳಪ್ಪ ಹೇಳಿದ್ದಾರೆ.
ದಾವಣಗೆರೆ ತಾಲೂಕಿನ ಕನಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳೇನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಹಮ್ಮಿಕೊಂಡ 2018-19ಸಾಲಿನ ಆತ್ಮ… ಯೋಜನೆಯಡಿ ಕಬ್ಬು ಬೆಳೆಯುವ ರೈತರಿಗೆ ಕಿಸಾನ್ ಗೋಷ್ಠಿ ಹಾಗೂ ಮಣ್ಣು ಆರೋಗ್ಯ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಣಗೆರೆ ಭಾಗದ ರೈತರು ಕಬ್ಬಿನ
ಇಳುವರಿ ಎಕರೆಗೆ 100 ಟನ್ ಬೆಳೆದು ಹಾಗೂ ಹೆಚ್ಚು ಲಾಭ ಪಡೆಯಬೇಕಿದೆ ಎಂದು ಆಶಿಸಿದರು.
ನೂತನ ತಾಂತ್ರಿಕತೆಗಳಾದ ಒಂದುಗಣ್ಣು ನಾಟಿ, ಕಬ್ಬಿನ ಸಸಿ ತಯಾರಿಕೆ, ಅಂಗಾಂಶ ಕೃಷಿ ಮಾದರಿಯಲ್ಲಿ ಸಸಿ ಪಡೆದುಕೊಂಡು ಹಾಗೂ ಸ್ವಂತ ಬೀಜ ಹೊಲದಲ್ಲೆ ಬೆಳೆದು ನಾಟಿ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂದು ತಿಳಿಸಿದರು.
ಕೃಷಿ ಇಲಾಖೆ ಉಪ ನಿರ್ದೇಶಕಿ ಡಾ| ಹಂಸವೇಣಿ ಮಾತನಾಡಿ, ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ಕಬ್ಬು ಉತ್ಪಾದನೆ ಹೆಚ್ಚಿಸಲು ಈ ಗ್ರಾಮದಲ್ಲಿ ಪ್ರಾತ್ಯಕ್ಷತೆ ಕೈಗೊಳ್ಳಲಾಗಿದೆ. ಉಚಿತವಾಗಿ ಸಾವಯವ ಗೊಬ್ಬರ, ಜಿಂಕ್, ಲಘು ಪೋಷಕಾಂಶ ಹಾಗೂ ಅಂತರಬೆಳೆ ಹಲಸಂದಿ ಬೀಜ ವಿತರಿಲಾಗಿದೆ. ಸಾವಯವ ಗೊಬ್ಬರ, ಜಿಂಕ್, ಲಘು ಪೋಷಕಾಂಶ ಬಳಸುವುದರಿಂದ ಇಳುವರಿ ಹೆಚ್ಚಿಸಬಹುದು ಎಂದು ತಿಳಿಸಿದರು.
ಕೃಷಿ ಇಲಾಖೆಯಿಂದ ಕೆ-ಕಿಸಾನ್ ಕಾರ್ಯಕ್ರಮ ಪ್ರಾರಂಭವಾಗಿದೆ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ, ಪಹಣಿ, ಜಾತಿ ಪ್ರಮಾಣಪತ್ರ ಹಾಗೂ ಅಂಗವಿಕಲ ಪ್ರಮಾಣ ಪತ್ರವನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಿ ನೋಂದಣಿ ಮಾಡಿಸಿದ ಎಲ್ಲಾ ರೈತರು ಕೆ-ಕಿಸಾನ್‌ಕಾರ್ಡ್ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಆತ್ಮ ಉಪ ಯೋಜನೆಯ ನಿರ್ದೇಶಕ ಎಸ್.ಬಿ. ರಾಜಶೇಖರಪ್ಪ ಮಾತನಾಡಿ, ಕಬ್ಬಿನಲ್ಲಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಸುವುದರಿಂದ ಹೆಚ್ಚು ಇಳುವರಿ ಪಡೆಯುವುದು ಸಾಧ್ಯವಿಲ್ಲ. ಸಾವಯವ ಗೊಬ್ಬರದಿಂದ ಅಧಿಕ ಇಳುವರಿ ಸಿಗಲಿದೆ. ಕಬ್ಬಿನಲ್ಲಿ ಇತ್ತೀಚಿನ ದಿನದಲ್ಲಿ ಗೊಣ್ಣೆಗಳ ಬಾಧೆ ಹೆಚ್ಚಾಗಿದೆ. ಮೇಟರೈಜಿಯಮ್ ಬಳಸುವುದರಿಂದ ಹತೋಟಿ ಆಗಲಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ, ರೈತರಿಗೆ ಇಲಾಖೆಯಲ್ಲಿ ದೊರೆಯುವ ಸಬ್ಸಿಡಿ ಹಾಗೂ ಪರಿಕರಗಳು, ಕೀಟನಾಶಕ, ತುಂತುರು ನೀರಾವರಿ ಘಟಕದ ಬಗ್ಗೆ ವಿವರಿಸಿ, ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ಸಕಾಲದಲ್ಲಿ
ತಲುಪಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಕೃಷಿ ಅಧಿಕಾರಿ ದುರುಗಪ್ಪ ಇತರರು ಇದ್ದರು. ಒಂದುಗಣ್ಣು ಪದ್ಧತಿಯಲ್ಲಿ ಹೆಚ್ಚು ಇಳುವರಿ ಪಡೆದ ರೈತ ಎನ್. ಹನುಮಂತಪ್ಪರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರೈತರಿಗೆ ಎನ್ ಎಫ್‌ಎಸ್‌ಎಂ ಪರಿಕರ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.