ಗೋ ಶಾಲೆ ಆರಂಭಿಸಲು ರೈತ ಸಂಘ-ಹಸಿರು ಸೇನೆ ಆಗ್ರಹ
Team Udayavani, Feb 15, 2017, 1:14 PM IST
ಹರಪನಹಳ್ಳಿ: ರೈತರ ಸಾಲಮನ್ನಾ, ಬರ ಕಾಮಗಾರಿ ಪ್ರಾರಂಭ, ಗೋ-ಶಾಲೆ ಆರಂಭ, ತಾಲೂಕಿಗೆ 371ಜೆ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ಅಧ್ಯಕ್ಷ ಎಚ್.ಎಂ. ಮಹೇಶ್ವರಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಬರ ಆವರಿಸಿರುವುದರಿಂದ ನೀರಿಲ್ಲದೇ ಜಾನುವಾರು, ಜನತೆ ದಯಾನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಆತ್ಮಹತ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಸುಪ್ರೀಂಕೋರ್ಟ್ ನ್ಯಾಯಾಧಿಶರು ಆತ್ಮಹತ್ಯೆ ವರದಿ ಕೇಳಿರುವುದು ಆಡಳಿತ ಪಕ್ಷಗಳು ಮತ್ತು ವಿರೋಧ ಪಕ್ಷಗಳು ತಲೆ ತಗ್ಗಿಸುವಂತಾಗಿದೆ.
ರೈತರ ಆತ್ಮಹತ್ಯೆ ತಡೆಗಟ್ಟಲು ರೈತರ ಎಲ್ಲಾ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ ಮಾಡುವ ಬದಲು ಸಾಲಮನ್ನಾ ಮಾಡಿ ರೈತರ ಋಣ ತೀರಿಸಬೇಕು. ಆರ್‌ಬಿಐ ನಿಯಮದ ಪ್ರಕಾರ ತಾಲೂಕು 1 ಬಾರಿ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದರೆ ಅಲ್ಪಾವಧಿಧಿ ಸಾಲವನ್ನು ಧೀಘಾವಧಿ ಸಾಲವನ್ನಾಗಿ ಪರಿವರ್ತಿಸಬೇಕು.
2ನೇ ಬಾರಿ ಬರವೆಂದು ಘೋಷಿಸದರೆ ಮರು ಸಾಲ ನೀಡಬೇಕು. ಸತತ 3ನೇ ಬಾರಿ ಬರಪೀಡಿತವಾದಲ್ಲಿ ರೈತನ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕೆಂದು ನಿಯಮವಿದ್ದರೂ ಬ್ಯಾಂಕ್‌ಗಳು ಪಾಲನೆ ಮಾಡುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದಿನ ಸರ್ಕಾರಗಳು ಮಾರಕವಾಗಿವೆ ಎಂದು ಕಿಡಿಕಾರಿದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗೋಶಾಲೆ ತೆರೆಯಬೇಕು. ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮಕೈಗೊಂಡು ಪ್ರತಿ ಹಳ್ಳಿಯಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಕೆಲಸ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಸಮಪರ್ಕಕವಾಗಿ ಉದ್ಯೋಗ ಖಾತ್ರಿ ಯೋಜನೆಜಾರಿಗೊಳಿಸಬೇಕು.
ರೈತರ ಬರ ಪರಿಹಾರ ನೀಡಬೇಕು. ನನೆಗುದಿಗೆ ಬಿದ್ದಿರುವ 371ಜೆ ಕಲಂ ವ್ಯಾಪ್ತಿಗೆ ಹಗರಪನಹಳ್ಳಿ ತಾಲೂಕು ಸೇರಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಮ್ಯಾಕಿ ದುರುಗಪ್ಪ, ಆರ್.ವಾಗೀಶ್, ಚಂದ್ರಪ್ಪ, ಕುಲುವಿ, ಬೆಳ್ಳಿ ಕೆಂಚಪ್ಪ, ಆರ್.ಬಸವರಾಜ್, ಶವುಲ್ಲಾ, ತಿರುಪತಿ, ಚಂದ್ರು, ಹನುಮಂತ, ನಾಗರಾಜ್, ಶಿವರಾಜ್, ಮಹಾಂತೇಶ್, ಎಂ.ಕೊಟ್ರೇಶ್, ಕೊಟ್ರಪ್ಪ, ತಿಮ್ಮಪ್ಪ, ರೇವಪ್ಪ, ಚಂದ್ರಪ್ಪ, ಜಗದೀಶ್, ನಾಗರಾಜ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.