ಶಾಲಾಭಿವೃದಿಗೆ ಬಿಡುಗಡೆಯಾಗಲಿ ಅನುದಾನ
Team Udayavani, Jan 4, 2021, 6:16 PM IST
ದಾವಣಗೆರೆ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದಶಾಸಕ ಎಸ್. ರಾಮಪ್ಪ ಮೂರು ಶಾಲೆಗಳನ್ನ ದತ್ತು ಪಡೆದಿದ್ದಾರೆ.
ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್‌ಶಾಲೆ, ಹಾಲಿವಾಣದಸರ್ಕಾರಿ ಹಿರಿಯಪ್ರಾಥಮಿಕ ಶಾಲೆ, ನಿಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ದತ್ತು ತೆಗೆದುಕೊಂಡು ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ.
ಬನ್ನಿಕೋಡು ಕೆಪಿಎಸ್ ಶಾಲೆ- 5 ಲಕ್ಷ ರೂ. : ಎಲ್‌ಕೆಜಿಯಿಂದ ದ್ವಿತೀಯಪಿಯುಸಿವರೆಗೆ 762 ವಿದ್ಯಾರ್ಥಿಗಳ ಸಂಖ್ಯೆ ಹೊಂದಿರುವ ಬನ್ನಿಕೋಡುಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 240 ಅಡಿ ಉದ್ದ, 120 ಅಗಲದ ಕಾಂಪೌಂಡ್, ಶಾಲಾ ಆಟದ ಮೈದಾನ ದುರಸ್ತಿ, 4 ಕೊಠಡಿ, ಹೈಟೈಕ್ ಶೌಚಾಲಯ, ಅಕ್ಷರ ದಾಸೋಹ ಕೊಠಡಿಗಾಗಿ 5 ಲಕ್ಷ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬನ್ನಿಕೋಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳುವ್ಯಾಸಂಗ ಮಾಡುತ್ತಿದ್ದಾರೆ. ಕಾಂಪೌಂಡ್ ಮೇಲ್ದರ್ಜೆಗೇರಿಸಬೇಕು. ಶೌಚಾಲಯ ವ್ಯವಸ್ಥೆ ಆಗಬೇಕು. ಹೈಟೆಕ್ ಶೌಚಾಲಯಕ್ಕೆ ಗಮನ ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆಗೆ ಇನ್ನೂ ಹೆಚ್ಚಿನ ಸೌಲಭ್ಯ ದೊರೆಯುವಂತಾಗಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ,ಸ್ಮಾರ್ಟ್‌ಕ್ಲಾಸ್, ಶಾಲಾ ಕಾರ್ಯಕ್ರಮನಡೆಸುವುದಕ್ಕೆ ಅನುಕೂಲಕರವಾದಸಭಾಂಗಣದ ಜೊತೆಗೆ ಸುಣ್ಣ ಬಣ್ಣದ ಆಗಬೇಕು ಎನ್ನುತ್ತಾರೆ ಮುಖ್ಯ ಶಿಕ್ಷಕ ಎಂ. ಸಿದ್ದನಗೌಡ.
ಸರಕಾರಿ ಹಿರಿಯ ಪ್ರಾಥಮಿ ಕ ಶಾಲೆ ಹಾಲಿವಾಣ-25 ಲಕ್ಷ ರೂ. :
ಒಂದರಿಂದ 7ನೇ ತರಗತಿಯವರೆಗೆ 320 ವಿದ್ಯಾರ್ಥಿಗಳು ಸಂಖ್ಯೆಗೆ ಅನುಗುಣವಾಗಿ ಇರುವ ಶಾಲೆಯಲ್ಲಿ 2 ಹೊಸ ಕೊಠಡಿ, 25 ಡೆಸ್ಕ್, 5 ಗ್ರೀನ್ ಬೋರ್ಡ್, ಶಾಲಾ ದುರಸ್ತಿ, ಸುಣ್ಣ ಬಣ್ಣಕ್ಕಾಗಿ 25 ಲಕ್ಷ ಅನುದಾನದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅತ್ಯಂತ ಹಿಂದುಳಿದಿರುವ ಹಾಲಿವಾಣ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆತಿ ಮುಖ್ಯವಾಗಿ ಕೊಠಡಿಗಳ ಕೊರತೆ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಬೇಕಾಗಿವೆ ಎಂದು ಮುಖ್ಯ ಶಿಕ್ಷಕ ಎಂ. ರುದ್ರಯ್ಯ ಹೇಳುತ್ತಾರೆ.
ಸರಕಾರಿ ಹಿರಿಯ ಪ್ರಾಥಮಿ ಕ ಶಾಲೆ ನಿಟ್ಟೂರು- 5 ಲಕ್ಷ ರೂ. : ಒಂದರಿಂದ 7ನೇ ತರಗತಿಯವರೆಗೆ 120 ವಿದ್ಯಾರ್ಥಿಗಳ ಹೊಂದಿರುವ ನಿಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 4 ಕೊಠಡಿ, 2 ಶೌಚಾಲಯಕ್ಕೆ 5 ಲಕ್ಷದ ಪ್ರಸ್ತಾವನೆ ಸಲ್ಲಿಸಲಾಗಿದೆ. ನಿಟ್ಟೂರು ಶಾಲೆಗೆ ಕೊಠಡಿಗಳ ಅಗತ್ಯತೆ ಇದೆ. ಗ್ರೀನ್ ಬೋರ್ಡ್,ಉತ್ತಮ ಶಾಲಾ ಆವರಣದ ಅಗತ್ಯತೆ ಇದೆ. ಕಂಪ್ಯೂಟರ್ ಪ್ರಯೋಗಾಲಯ ಇತರೆ ಪಾಠೊಪಕರಣಗಳ ಅಗತ್ಯತೆ ಇದೆ. ಈವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ. ಇನ್ನೂ 10 ಲಕ್ಷರೂಪಾಯಿ ಅನುದಾನಕ್ಕೆ ಶಾಸಕರನ್ನು ಕೋರಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜ್ ಮಾಹಿತಿ ನೀಡಿದರು.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿಮೂರು ಶಾಲೆಗಳಸಮಗ್ರಅಭಿವೃದ್ಧಿಗಾಗಿ ದತ್ತುಪಡೆಯಲಾಗಿದೆ.ಆನುದಾನ ಬಂದಿಲ್ಲ. ಅನುದಾನ ಬಂದ ನಂತರಅಗತ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. –ಎಸ್. ರಾಮಪ್ಪ, ಶಾಸಕರು, ಹರಿಹರ
-ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.