25 ಹಳ್ಳಿಗಳಲ್ಲಿ ಅಂತರ್ಜಲ ಕಲುಷಿತ

ದಾವಣಗೆರೆ ಜಿಲ್ಲೆಯ ಹಲವೆಡೆ ಅಂತರ್ಜಲದಲ್ಲಿ ಫ್ಲೋರೈಡ್‌ ಹೆಚ್ಚಳ,ಕೆಲವೆಡೆ ಕ್ಲೋರೈಡ್‌, ಟಿಡಿಎಸ್‌ ಪ್ರಮಾಣವೂ ಏರಿಕೆ

Team Udayavani, Jan 4, 2021, 5:59 PM IST

dg-tdy-1

ಸಾಂದರ್ಭಿಕ ಚಿತ್ರ

ದಾವಣಗೆರೆ: ಜಿಲ್ಲೆಯ 25 ಹಳ್ಳಿಗಳಲ್ಲಿನ ಅಂತರ್ಜಲ ಕಲುಷಿತಗೊಂಡಿದ್ದು ನೀರು ಕುಡಿಯಲುಯೋಗ್ಯವಾಗಿಲ್ಲ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯಇಲಾಖೆ ಪ್ರಸಕ್ತ ವರ್ಷ ಜಿಲ್ಲೆಯ ಅಂತರ್ಜಲವನ್ನುಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗಈ ಅಂಶ ಬೆಳಕಿಗೆ ಬಂದಿದೆ. ಈ ಹಳ್ಳಿಗಳ ಜನರುಕುಡಿಯಲು ಶುದ್ಧ ನೀರನ್ನೇ ಬಳಸುವ ಮೂಲಕಫ್ಲೊರೋಸಿಸ್‌ನಂಥ ಕಾಯಿಲೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕಾಗಿದೆ.

ಜಿಲ್ಲೆಯ ದಾವಣಗೆರೆ, ಹರಿಹರ ಹಾಗೂ ಜಗಳೂರುತಾಲೂಕು ವ್ಯಾಪ್ತಿಯ 25 ಹಳ್ಳಿಗಳಲ್ಲಿ ಅಂತರ್ಜಲಕಲುಷಿತಗೊಂಡಿದೆ. ಇವುಗಳಲ್ಲಿ ಮೂರು ಹಳ್ಳಿಗಳಅಂತರ್ಜಲದಲ್ಲಿ ಕ್ಲೋರೈಡ್‌ ಪ್ರಮಾಣ ಹೆಚ್ಚಾಗಿದ್ದರೆ,ಎರಡು ಹಳ್ಳಿಗಳಲ್ಲಿ ಟಿಡಿಎಸ್‌ (ಟೋಟಲ್‌ ಡಿಸಾಲ್ವಡ್‌ ಸಾಲಿಡ್ಸ್‌) ಹೆಚ್ಚಾಗಿದೆ. ಉಳಿದಂತೆ ಎಲ್ಲ 20 ಹಳ್ಳಿಗಳಲ್ಲಿಫ್ಲೋರೈಡ್‌ ಅಂಶ ಹೆಚ್ಚಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಿಸಿದಂತೆ ನೀರಿನಲ್ಲಿ ಫ್ಲೋರೈಡ್‌ ಅಂಶ 1.5ಕ್ಕಿಂತ ಹೆಚ್ಚುಇರಬಾರದು. ಈ ಮಾನದಂಡದ ಪ್ರಕಾರ 20ಹಳ್ಳಿಗಳಲ್ಲಿ ಫ್ಲೋರೈಡ್‌ ಅಂಶ 1.8ರವರೆಗೂಇದೆ. ಕ್ಲೊರೈಡ್‌ ಪ್ರಮಾಣ 1000 ಇರಬೇಕಾದಲ್ಲಿ 1550 ರವರೆಗೂ ಇದೆ. ಇನ್ನು ಟಿಡಿಎಸ್‌ ಪ್ರಮಾಣ2000 ಪಾಯಿಂಟ್ಸ್‌ ಇರಬೇಕಾದಲ್ಲಿ 2400ವರೆಗೂ ಇದೆ. ದಾವಣಗೆರೆ ತಾಲೂಕಿನ ಚಟ್ಟೊಬನಹಳ್ಳಿ ಹಾಗೂ ತೋಳಹುಣಸೆ ಗ್ರಾಮಗಳಲ್ಲಿನ ಅಂತರ್ಜಲದಲ್ಲಿ ಅತಿ ಹೆಚ್ಚು ಅಂದರೆ 1.8ರಷ್ಟು ಫ್ಲೋರೈಡ್‌ ಕಂಡು ಬಂದಿದೆ.ಇನ್ನು ಜಗಳೂರು ತಾಲೂಕಿನ ಚಿಕ್ಕಮನಹಟ್ಟಿಯಲ್ಲಿ ಕ್ಲೋರೈಡ್‌ ಪ್ರಮಾಣ ಅತಿ ಹೆಚ್ಚು ಅಂದರೆ 1550ರಷ್ಟು ಕಂಡು ಬಂದಿದೆ. ಹರಿಹರ ತಾಲೂಕಿನ ಕಡರನಾಯಕನಹಳ್ಳಿ ಪಂಚಾಯಿತಿಯ ಪಾಳ್ಯದ ಅಂತರ್ಜಲದಲ್ಲಿ ಟಿಡಿಎಸ್‌ ಪ್ರಮಾಣ ಅತಿ ಹೆಚ್ಚು ಅಂದರೆ 2400ರಷ್ಟು ಕಂಡು ಬಂದಿದೆ.

ದಾವಣಗೆರೆ ತಾಲೂಕು: ದಾವಣಗೆರೆ ತಾಲೂಕಿನ 10 ಹಳ್ಳಿಗಳ ಅಂತರ್ಜಲದಲ್ಲಿ ಪ್ಲೋರೈಡ್‌ ಅಂಶಹೆಚ್ಚಾಗಿದೆ. ಅವರಗೊಳ್ಳ, ಬಸವನಾಳು ಗೊಲ್ಲರಹಟ್ಟಿ,ಲಿಂಗದಹಳ್ಳಿ, ರಾಮಪುರ, ಕಾಡಜ್ಜಿ, ಕಡ್ಲೆಬಾಳುಗ್ರಾಪಂನ ಮಲಗೊಂಡನಹಳ್ಳಿ, ಕೊಡಗನೂರುಪಂಚಾಯಿತಿಯ ದಿಂಡದಹಳ್ಳಿ ಹಾಗೂ ಜಂಪೇನಹಳ್ಳಿ,ತೋಳಹುಣಸೆ ಪಂಚಾಯಿತಿಯ ಚಟ್ಟೊಬನಹಳ್ಳಿಮತ್ತು ತೋಳಹುಣಸೆ ಗ್ರಾಮಗಳ ಅಂತರ್ಜಲದಲ್ಲಿಫ್ಲೋರೈಡ್‌ ಅಂಶ ಹೆಚ್ಚಾಗಿ ಕಂಡು ಬಂದಿದೆ. ಈ ಎಲ್ಲಹಳ್ಳಿಗಳಲ್ಲಿ ಫ್ಲೋರೈಡ್‌ ಪ್ರಮಾಣ 1.6ರಷ್ಟಿದೆ.

ಹರಿಹರ ತಾಲೂಕು: ಹರಿಹರ ತಾಲೂಕಿನ ಏಳು ಹಳ್ಳಿಗಳಲ್ಲಿ ಅಂತರ್ಜಲ ಕಲುಷಿತಗೊಂಡಿದೆ.ತಾಲೂಕಿನ ಬಸವನಾಳು ಗ್ರಾಮದಲ್ಲಿ ಕ್ಲೋರೈಡ್‌ ಪ್ರಮಾಣ ಹೆಚ್ಚಾಗಿ ಕಂಡು ಬಂದಿದೆ. 1000ದಷ್ಟುಇರಬೇಕಾದ ಕ್ಲೋರೈಡ್‌ ಪ್ರಮಾಣ ಈ ಗ್ರಾಮದಲ್ಲಿ1200ರಷ್ಟಿದೆ. ಹನಗವಾಡಿ ಪಂಚಾಯಿತಿಯ ಡೊಗ್ಗಳ್ಳಿಯಲ್ಲಿ ಟಿಡಿಎಸ್‌ ಪ್ರಮಾಣ ಹೆಚ್ಚಾಗಿದ್ದು 2000 ಇರಬೇಕಾದಲ್ಲಿ 2400ರಷ್ಟಿದೆ. ಜಿಗಳಿ ಪಂಚಾಯಿತಿವ್ಯಾಪ್ತಿಯ ಬೇವಿನಹಳ್ಳಿ (ಗುಡ್ಡದ), ಜಿಗಳಿ, ಕೊಂಡಜ್ಜಿಪಂಚಾಯಿತಿಯ ಕೆಂಚನಹಳ್ಳಿಯಲ್ಲಿ ಫ್ಲೋರೈಡ್‌ ಹೆಚ್ಚಾಗಿದ್ದು 1.5ರಷ್ಟು ಇರಬೇಕಾದಲ್ಲಿ 1.6ರಷ್ಟಿದೆ. ಇದೇ ತಾಲೂಕಿನ ಕಡರನಾಯಕನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪಾಳ್ಯದಲ್ಲಿ ಟಿಡಿಎಸ್‌ ಪ್ರಮಾಣ ಹೆಚ್ಚಾಗಿದ್ದು 2400ರಷ್ಟಿದೆ.

ಜಗಳೂರು ತಾಲೂಕು: ಜಗಳೂರು ತಾಲೂಕಿನ ಎಂಟು ಹಳ್ಳಿಗಳ ಅಂತರ್ಜಲ ಕಲುಷಿತಗೊಂಡಿದೆ. ತಾಲೂಕಿನ ಅಣಬೂರು ಪಂಚಾಯಿತಿ ವ್ಯಾಪ್ತಿಯ ದೊಡ್ಡಬೊಮ್ಮನಹಳ್ಳಿಯಲ್ಲಿ 1.5ರಷ್ಟು ಇರಬೇಕಾದ ಫ್ಲೋರೈಡ್‌ ಎರಡಷ್ಟಿದೆ. ತಾಲೂಕಿನ ಗುಡ್ಡಲಿಂಗನಹಳ್ಳಿ,ಅಯ್ಯನಹಳ್ಳಿ, ಸುರಡ್ಡಿಹಳ್ಳಿ, ಕಾಮಗೇತನಹಳ್ಳಿ,ಕಮಂಡಲಗುಂದಿ ಹಳ್ಳಿಗಳಲ್ಲಿ ಫ್ಲೋರೈಡ್‌ ಪ್ರಮಾಣ1.6ರಷ್ಟಿದೆ. ಇದೇ ತಾಲೂಕಿನ ಚಿಕ್ಕಮ್ಮನಹಟ್ಟಿಯಲ್ಲಿ ಕ್ಲೊರೈಡ್‌ 1550 ಹಾಗೂ ಕೆಚ್ಚೆನಹಳ್ಳಿಯಲ್ಲಿ ಕ್ಲೋರೈಡ್‌ 1510 ಇದೆ. ಒಟ್ಟಾರೆ ಜಿಲ್ಲೆಯ 25 ಹಳ್ಳಿಗಳ ಅಂತರ್ಜಲ ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ.ಈ ಭಾಗದ ಜನರಲ್ಲಿ ಅಂತರ್ಜಲ ಕುಡಿಯಲು ಬಳಸದೇ ಇರುವ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಅವರಿಗೆ ಕುಡಿಯಲು ಯೋಗ್ಯ ನೀರಿನ ವ್ಯವಸ್ಥೆ ಮಾಡಬೇಕಾಗಿದೆ.

ಜಿಲ್ಲೆಯ ಮೂರು ತಾಲೂಕುಗಳ ಅಂತರ್ಜಲ ಕಲುಷಿತಗೊಂಡಿರುವುದುಪ್ರಯೋಗ ಪರೀಕ್ಷೆಯಿಂದ ಗೊತ್ತಾಗಿದೆ. ಅಂತರ್ಜಲ ಮೇಲಕ್ಕೆ ಬಂದಂತೆ ಫ್ಲೋರೈಡ್‌,ಕ್ಲೋರೈಡ್‌ ಪ್ರಮಾಣ ಕಡಿಮೆಯಾಗುತ್ತದೆ. ಅಂತರ್ಜಲ ಕಲುಷಿತಗೊಂಡ ಬಹುತೇಕಎಲ್ಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇನ್ನು ಕೆಲವು ಹಳ್ಳಿಗಳಿಗೆಬಹುಗ್ರಾಮ ನದಿ ನೀರು ಯೋಜನೆ ಮೂಲಕಕುಡಿಯುವ ನೀರು ಪೂರೈಸಲಾಗುತ್ತಿದೆ.ಹಳ್ಳಿಗರು ಹೆಚ್ಚಾಗಿ ಕುಡಿಯಲು ಶುದ್ಧ ನೀರಿನ ಘಟಕಗಳ ನೀರನ್ನೇ ಉಪಯೋಗಿಸುತ್ತಿದ್ದಾರೆ. ಅಂತರ್ಜಲ ಕಲುಷಿತಗೊಂಡಿರುವಗ್ರಾಮಗಳಲ್ಲಿ ಕುಡಿಯಲು ಕೊಳವೆಬಾವಿ ನೀರು ಬಳಸದಂತೆ ಜಾಗೃತಿ ಮೂಡಿಸಲಾಗುತ್ತಿದೆ. –ಎಚ್‌. ನಾಗಪ್ಪ, ಕಾರ್ಯಪಾಲಕಎಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ, ದಾವಣಗೆರೆ

 

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.