ಬಳ್ಳಾರಿಗೆ ಹರಪನಹಳ್ಳಿ ಸೇರ್ಪಡೆ ಚುನಾವಣಾ ಗಿಮಿಕ್
Team Udayavani, Mar 13, 2018, 5:01 PM IST
ಹರಪನಹಳ್ಳಿ: ರಾಜ್ಯ ಸರಕಾರ ಹರಪನಹಳ್ಳಿ ತಾಲೂಕನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸಲು ಮುಂದಾಗಿರುವುದು ಚುನಾವಣೆ ಗಿಮಿಕ್ ಆಗಿದೆ ಎಂದು ಬಿಜೆಪಿ ಮುಖಂಡ ಪಿ. ಮಹಾಬಲೇಶ್ವರಗೌಡ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರಿಸುವುದರಿಂದ 371ಜೆ ಸೌಲಭ್ಯ ಸಿಗುತ್ತದೆ ಎನ್ನುವುದು ಅಸಾಧ್ಯದ ಮಾತು. ಸೇರ್ಪಡೆ ಮತ್ತು ಬೇರ್ಪಡಿಸುವ ಹಕ್ಕು ಕೇಂದ್ರ ಸರಕಾರಕ್ಕೆ ಇದೆ ಹೊರತು, ರಾಜ್ಯ ಸರಕಾರಕ್ಕಲ್ಲ. 2013ರಲ್ಲಿ ಅಧಿ ಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಇಷ್ಟು ದಿನ ಇಲ್ಲದ ಪ್ರೀತಿ ಈಗ ಹುಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.
ಹರಪನಹಳ್ಳಿ ಮತ್ತು ಗದಗ ತಾಲೂಕಿನ ಕೆಲ ಹಳ್ಳಿಗಳನ್ನು ಹೈಕ ಭಾಗಗಕ್ಕೆ ಸೇರಿಸಲು ಮುಂದಾಗಿರುವುದಕ್ಕೆ ಲೋಕಸಭೆ ವಿರೋಧ
ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಜತೆಗೆ ಸೇರ್ಪಡೆ ಅಷ್ಟು ಸುಲಭದ ಕಾರ್ಯವೂ
ಅಲ್ಲ ಎಂದು ತಿಳಿಸಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ಹರಪನಹಳ್ಳಿಯನ್ನು ಬಳ್ಳಾರಿಗೆ ಸೇರಿಸಲು ಮುಂದಾಗಿರುವುದು ಚುನಾವಣೆ
ತಂತ್ರವಾಗಿದೆ ಎಂದು ತಿಳಿಸಿದರು.
ತಾಲೂಕಿನ ಜನತೆಗೆ ಆಡಳಿತಾತ್ಮಕವಾಗಿ ದಾವಣಗೆರೆ ಜಿಲ್ಲೆ ಅನುಕೂಲಕರವಾಗಿದ್ದು, 371ಜೆ ಸೌಲಭ್ಯ ಸಿಗುವುದಾದರೆ ಎಷ್ಟು
ದೂರವಾದರೂ ಮತ್ತು ಯಾವುದೇ ಜಿಲ್ಲೆಗೆ ಸೇರಿಸಿದರೂ ನಾವು ಹೋಗಲು ಸಿದ್ಧರಿದ್ದೇವೆ. ಸೌಲಭ್ಯ ಸಿಗದೇ ಹೋದಲ್ಲಿ ನಮ್ಮಗಿದ್ದ
ಎರಡು ಕಣ್ಣುಗಳನ್ನು ಕಳೆದುಕೊಂಡಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಒಂದು ವೇಳೆ 371ಜೆ ಸೌಲಭ್ಯವಿಲ್ಲದೇ ಬಳ್ಳಾರಿಗೆ ಹೋದರೆ
ಜನಾಭಿಪ್ರಾಯ ಸಂಗ್ರಹಿಸಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ಅಗತ್ಯ ಬಿದ್ದರೆ ಕಾನೂನಾತ್ಮಕ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಜಿ. ನಂಜನಗೌಡ್ರು ಮಾತನಾಡಿ, ಹರಪನಹಳ್ಳಿ ಜನರು ಬಳ್ಳಾರಿಯೊಂದಿಗಿನ ಭಾವನಾತ್ಮಕ ಸಂಬಂಧದಿಂದ ಹೊರಬಂದು 20 ವರ್ಷಗಳು ಕಳೆದಿವೆ. ಆಡಳಿತಾತ್ಮಕವಾಗಿ ಜನರಿಗೆ ದಾವಣಗೆರೆ ಜಿಲ್ಲೆ ಅನುಕೂಲವಾಗಿದೆ. ಈ ಹಿಂದೆ 371ಜೆ
ಸೌಲಭ್ಯಕ್ಕಾಗಿ ಶಾಸಕರೊಂದಿಗೆ ಪಕ್ಷಭೇದ ಮರೆತು ಹೋರಾಟ ನಡೆಸಿದ್ದೇವೆ. ಚುನಾವಣೆ ಹತ್ತಿರ ಬಂದಾಗ ತರಾತುರಿಯಲ್ಲಿ
ಈ ನಿರ್ಧಾರಕ್ಕೆ ಬಂದಿರುವುದು ಸೂಕ್ತವಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಸದಸ್ಯರಾದ ಕೆಂಚನಗೌಡ, ರಹಮತುಲ್ಲಾ, ಚಂದ್ರನಾಯ್ಕ, ಗಿರಿರಾಜರೆಡ್ಡಿ, ಹನುಮಂತಪ್ಪ, ಚನ್ನಪ್ಪ,
ಶಂಕ್ರಪ್ಪ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.