ಈಗ ದೊಗ್ಗಳ್ಳಿಗೂ ಬಂತು ಹಕ್ಕಿಜ್ವರ ?
ಏಕಾಏಕಿ ಸತ್ತ 30 ಕೋಳಿ, ಉಳಿದ ಕೋಳಿಗಳ ಕಲ್ಲಿಂಗ್‌ಬನ್ನಿಕೋಡಲ್ಲಿ ಎರಡನೇ ದಿನವೂ 500 ಕೋಳಿ ಸಂಹಾರ
Team Udayavani, Mar 20, 2020, 11:29 AM IST
ಹರಿಹರ: ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ಕಾಣಿಸಿಕೊಡು ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ತಾಲೂಕಿನ ದೊಗ್ಗಳ್ಳಿ ಗ್ರಾಮದಲ್ಲೂ ಬುಧವಾರ ಏಕಾಏಕಿ 30 ಕೋಳಿಗಳು ಸಾವನ್ನಪ್ಪಿದ್ದು, ಇಲ್ಲೂ ಸಹ ಹಕ್ಕಿಜ್ವರ ಇರುವ ಭೀತಿ ಎದುರಾಗಿದೆ.
ದೊಗ್ಗಳ್ಳಿ ಗ್ರಾಮದ ಶಿರಡಿ ಶ್ರೀ ಹಾಲಿನ ಡೇರಿ ಸಮೀಪದ ಕೋಳಿ ಫಾರಂನಲ್ಲಿನ ಬುಧವಾರ ಸಂಜೆಯಿಂದ ರಾತ್ರಿಯೊಳಗೆ 4-5 ತಾಸುಗಳ ಅವಧಿಯಲ್ಲಿ ಅಂದಾಜು 30 ಕೋಳಿಗಳು ಸತ್ತು ನೆಲಕ್ಕುರಳಿದವು. ವಿಷಯ ತಿಳಿಯುತ್ತಿದ್ದಂತೆ ಗುರುವಾರ ಆರೋಗ್ಯ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸತ್ತ 30 ಕೋಳಿಗಳನ್ನು ಪಶು ವೈದ್ಯಾಧಿಕಾರಿ ಡಾ|ಗುರುಶಾಂತಪ್ಪ ನೇತೃತ್ವದ ತಂಡ ವೈಜ್ಞಾನಿಕ ರೀತಿಯಲ್ಲಿ ಹೂಳಿದ್ದಲ್ಲದೆ, ಫಾರಂನಲ್ಲಿ ಇನ್ನುಳಿದ 30 ಜೀವಂತ ಕೋಳಿಗಳನ್ನೂ ಗೋಣು ತಿರುವಿ ಕೊಂದು, ಕಲ್ಲಿಂಗ್ ಕಾರ್ಯಾಚರಣೆ ಮಾಡಲಾಯಿತು. ಸತ್ತ ಕೋಳಿಗಳ ರಕ್ತದ ಮಾದರಿಗಳನ್ನು ಪಡೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ನಂತರ ಹಕ್ಕಿಜ್ವರ ಇರುವ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ.
ಕೋಳಿ ಫಾರಂ ಹಾಗೂ ಸುತ್ತಮುತ್ತಲ 10 ಜನರಿಗೆ ಯಾವದೆ ಸೋಂಕು ಹರಡದಂತೆ ಟೀಮಿಪ್ಲೂಯು ಮಾತ್ರೆಯನ್ನು ನೀಡಲಾಗಿದ್ದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾ ಕಾರಿ ಡಾ|ಚಂದ್ರಮೋಹನ ತಿಳಿಸಿದ್ದಾರೆ.
ತಾಲೂಕಿನ ನೋಡಲ್ ಅಧಿ ಕಾರಿ ಡಾ|ನಟರಾಜ, ಬಿಳಸನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ|ಆಶಾ, ಹಿರಿಯ ಆರೋಗ್ಯ ಸಹಾಯಕರಾದ ಮಂಜುನಾಥ, ಎಂ.ವಿ.ಹೊರಕೇರಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಬನ್ನಿಕೋಡು-ಮುಂದುವರಿದ ಕಲ್ಲಿಂಗ್
ಬನ್ನಿಕೋಡು ಗ್ರಾಮದಲ್ಲಿ ಬುಧವಾರದಿಂದ ಆರಂಭವಾಗಿರುವ ವೈಜ್ಞಾನಿಕ ರೀತಿಯ ಕೋಳಿ ಸಂಹಾರ ಮಾಡುವ ಕಲ್ಲಿಂಗ್ ಆಪರೇಷನ್ ಗುರುವಾರವೂ ಸಹ ಮುಂದುವರಿಯಿತು. ಎರಡನೆ ದಿನ 500ಕ್ಕೂ ಹೆಚ್ಚು ಕೋಳಿಗಳನ್ನು ಹಿಡಿದು ಸಾಯಿಸಿ, ಗ್ರಾಮ ಹೊರವಲಯದ ಕೆರೆ ದಂಡೆಯಲ್ಲಿ 2 ಮೀಟರ್ ಉದ್ದ, 2 ಮೀಟರ್ ಅಗಲ ಮತ್ತು 2 ಮೀಟರ್ ಆಳದ ಗುಂಡಿ ತೆಗೆದು ಹೂಳಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೆಶಕ ಡಾ|ನಂದಾ ತಿಳಿಸಿದ್ದಾರೆ. ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಭಾಸ್ಕರ್ ನಾಯ್ಕ ನೇತೃತ್ವದ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಒಂದು ಕಿಲೊಮೀಟರ್ ವ್ಯಾಪ್ತಿಯಲ್ಲಿ ಕೋಳಿ, ಹಕ್ಕಿ-ಪಕ್ಷಿಗಳನ್ನು ಸಾಯಿಸುವ ಕಾರ್ಯಾಚರಣೆ ನಡೆಸಿದೆ. ಗ್ರಾಮದಲ್ಲಿ 1600ಕ್ಕೂ ಹೆಚ್ಚು ಕೋಳಿಗಳಿವೆ
ಎಂದು ಅಂದಾಜಿಸಲಾಗಿದ್ದು, ಮೊದಲ ದಿನ 332 ಕೋಳಿಗಳನ್ನು ಸಂಹರಿಸಲಾಗಿತ್ತು.
ಸಮೀಕ್ಷೆ: ಬನ್ನಿಕೋಡು ಗ್ರಾಮದ ಅಕ್ಕಪಕ್ಕದ ಸಲಗನಹಳ್ಳಿ, ಬೇವಿನಹಳ್ಳಿ ಮುಂತಾದ ಗ್ರಾಮಗಳಲ್ಲೂ ಗುರುವಾರ ಕೋಳಿಗಳ ಸಮೀಕ್ಷೆ ನಡೆಸಲಾಗಿದೆ. ತಾಲೂಕಿನಾದ್ಯಂತ ಎಲ್ಲಾ ಕೋಳಿ ಫಾರಂ ಮಾತ್ರವಲ್ಲದೆ ಸಾಕಿದ ಕೋಳಿಗಳ ಮೇಲೂ ನಿಗಾ ಇಡಲಾಗಿದೆ ಎಂದು ಪಶು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.