![Arrest](https://www.udayavani.com/wp-content/uploads/2025/02/Arrest-6-415x249.jpg)
![Arrest](https://www.udayavani.com/wp-content/uploads/2025/02/Arrest-6-415x249.jpg)
Team Udayavani, Jun 28, 2020, 6:02 PM IST
ಹರಿಹರ: ತಾಲೂಕಿನ ಪಾಮೇನಹಳ್ಳಿ ಗ್ರಾಮದ ಜನರು ಶನಿವಾರ ಗ್ರಾಮದಲ್ಲಿ ಕೋವಿಡ್ ಅಮ್ಮನ ಹಬ್ಬ ಆಚರಿಸಿ ಎಡೆ ಸಮರ್ಪಿಸಿದರು. ಗ್ರಾಮದ ಹಿರಿಯರು ಚರ್ಚಿಸಿ ಕೋವಿಡ್ ಅಮ್ಮನ ಹಬ್ಬದಾಚರಣೆಗೆ ಒಮ್ಮತದ ನಿರ್ಣಯ ಕೈಗೊಂಡರು.
ನಂತರ ಗ್ರಾಮದಲ್ಲಿ ಡಂಗೂರ ಸಾರಲಾಯಿತು. ಅದರ ಪ್ರಕಾರ ಮಹಿಳೆಯರು ಮನೆಯಲ್ಲಿ ಹೋಳಿಗೆ ಇತರೆ ಹಬ್ಬದಡುಗೆ ತಯಾರಿಸಿದರು. ಗ್ರಾಮದ 200ಕ್ಕೂ ಹೆಚ್ಚು ಮನೆಗಳಿಂದ ರೇಣುಕಾಯಲ್ಲಮ್ಮ ದೇವಸ್ಥಾನಕ್ಕೆ ಹೋಳಿಗೆ, ಕಾಯಿ, ಹಣ್ಣು ಇಟ್ಟು ಎಡೆ ಮಾಡಿಸಲು ತರಲಾಯಿತು. ಬಳಿಕ ಪೂಜಾರ್ ಈರಬಸಪ್ಪ ಅವರು ವಿಶೇಷ ಪೂಜೆ ನೆರವೇರಿಸಿದರು.
ತದನಂತರ ಗ್ರಾಮದ ಗಡಿಗೆ ತೆರಳಿದ ಎಡೆ ಇಟ್ಟು ಪೂಜೆ ಸಲ್ಲಿಸಿದ ಗ್ರಾಮಸ್ಥರು, ಮನೆಗಳಿಗೆ ತೆರಳಿ ಹಬ್ಬದೂಟವನ್ನು ಸವಿದರು. ಗ್ರಾಮದ ಮುಖಂಡ ಶಂಭೋಜಿ ಹನುಮಂತಪ್ಪ, ಗ್ರಾಪಂ ಸದಸ್ಯಬಣಕಾರ್ ಕೃಷ್ಣೋಜಿ ರಾವ್, ಆನಂದ ರಾವ್, ನಂದಿಗಾವಿ ಬಸವರಾಜ್, ಬಣಕಾರ್ ಸುರೇಶ್, ಅಭಿಷೇಕ್‌ಎ.ಎಸ್. ಇದ್ದರು.
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
You seem to have an Ad Blocker on.
To continue reading, please turn it off or whitelist Udayavani.