ವಿವೇಕಾನಂದರಿಂದ ಭಾರತಕ್ಕೆ ವಿಶ್ವಗುರು ಪಟ್ಟ
ಯುವಕರನ್ನು ಚಿಂತನೆಗೆ ಹಚ್ಚಿದವರು ಕೇವಲ ಮಾತನಾಡದೆ ಆದರ್ಶಗಳನ್ನು ಅಳವಡಿಸಿಕೊಳ್ಳಿ: ಡಿಸಿ
Team Udayavani, Jan 13, 2020, 11:27 AM IST
ಹರಿಹರ: ಧಾರ್ಮಿಕ ಕ್ಷೇತ್ರದಲ್ಲಿ ಭಾರತ ದೇಶವನ್ನು ವಿಶ್ವಗುರುವನ್ನಾಗಿ ರೂಪಿಸಿದ ಕೀರ್ತಿ ವೀರಸನ್ಯಾಸಿ, ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ಪಟ್ಟರು.
ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ನಿಮಿತ್ತ ನಗರದ ರಾಮಕೃಷ್ಣ ವಿವೇಕಾನಂದಾಶ್ರಮದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಭಾರತದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ರಾಯಭಾರಿಯಾಗಿ ಹಿಂದೂ ಧರ್ಮದ ಅನನ್ಯತೆ ಹಾಗೂ ಶ್ರೇಷ್ಠತೆಯನ್ನು ಜಗತ್ತಿಗೆ ಸಾರುವ ಮೂಲಕ ವಿವೇಕಾನಂದರು ಭಾರತದ ಸಾಧನೆಯನ್ನು ಜಗತ್ತಿಗೆ ಪರಿಚಯಿಸಿದರು.
ಯುವಕರ ಆದರ್ಶ, ಹಿಂದು ಸಮಾಜದ ಅಂತಃಶಕ್ತಿಯಾಗಿರುವ ಸ್ವಾಮಿ ವಿವೇಕಾನಂದರು ನಮ್ಮೆಲ್ಲರಿಗೂ ಪ್ರೇರಣಾ ಶಕ್ತಿ. ಇಂದಿನ ಯುವ ಜನಾಂಗ ದಿನಕ್ಕೆ ಒಂದು ಬಾರಿ ವಿವೇಕಾನಂದರನ್ನು ನೆನಪಿಸಿಕೊಂಡರೆ ಸಾಕು, ಅವರಲ್ಲಿ ನಾವು ಎನು ಬೇಕಾದರೂ
ಸಾಧಿ ಸಬಹುದು ಎಂಬ ಆತ್ಮಸ್ಥೈರ್ಯ ಮೂಡುತ್ತದೆ ಎಂದರು. ಕಬ್ಬಿಣ ತರಹ ಮಾಂಸ ಖಂಡ, ಉಕ್ಕಿನಂತಹ ನರಮಂಡಲ, ಮಿಂಚಿನ ಬುದ್ಧಿ ಶಕ್ತಿ ಹಾಗೂ ಅಪಾರ ಅತ್ಮಸ್ಥೈರ್ಯದಿಂದ ಕೂಡಿರುವಂತ ವ್ಯಕ್ತಿಯೇ ನಿಜವಾದ ಯುವ ಶಕ್ತಿ ಎನ್ನುತ್ತಿದ್ದ ವಿವೇಕಾನಂದರು, ಇಂತಹ 100 ಯುವಕರು ಇದ್ದರೆ ದೇಶದ ಚಿತ್ರಣವನ್ನು ಬದಲಿಸುವ ವಿಶ್ವಾಸ ಹೊಂದಿದ್ದರು. ಆದರೆ ದೇಶದ ಇಂದಿನ ಪೀಳಿಗೆ ಗಾಂಜಾ ಮತ್ತು ಅಫೀಮ್ ಗಿಂತ ಹೆಚ್ಚಿನ ಅಪಾಯಕಾರಿಯಾಗಿರುವ ಮೊಬೈಲ್ ಬಳಕೆಯಿಂದ ತಮ್ಮ ಅಮೂಲ್ಯವಾದ ಚಿಂತನಾಶಕ್ತಿಯನ್ನು ಕಳೆದುಕೊಂಡು ಅವನತಿಯ ಹಾದಿಯತ್ತ ಸಾಗುತ್ತಿದೆ. ಆದ್ದರಿಂದ ಮಹಾ ಸಂತರ ಆದರ್ಶ ಮತ್ತು ಚಿಂತನೆಗಳನ್ನು ತಮ್ಮ ಜೀವನದಲ್ಲಿ ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸ್ವತಂತ್ರ ಹೋರಾಟದಲ್ಲಿ ಯುವಕರು ಪಾಲ್ಗೊಳ್ಳಲು ವಿವೇಕಾನಂದರ ಪ್ರೇರಣೆಯೇ ಮೂಲ ಕಾರಣ ಎಂದ ಅವರು, ಸರ್ಕಾರವು ಮಹನೀಯರ ಜಯಂತಿಗಳಿಗೆ ರಜಾ ನೀಡದೆ ಅವರು ಸಮಾಜಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವುದು ಇಂದಿನ ಅವಶ್ಯಕತೆ ಎಂದು ಹೇಳಿದರು. ಧರ್ಮ ಪಾಲನೆ ಎಂದರೆ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸಲ್ಲ. ಜನರ ನಡುವೆ ಇದ್ದುಕೊಂಡು ಜನರಿಗಾಗಿ ಸಮಸ್ತ ಶಕ್ತಿಯನ್ನು ವಿನಿಯೊಗಿಸುವುದು ಎಂದು ಸಾರಿದರು. ಜಗತ್ತಿಗೆ ಹಿಂದೂ ಧರ್ಮದ ಸಾರವನ್ನು ಸಾರಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಿಸಿ ಮಹಾಂತೇಶ್ ಬೀಳಗಿ, ಸಂತರ ಆದರ್ಶಗಳನ್ನು ಕೇವಲ ಮಾತನಾಡದೆ ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳುವುದು ಅಂತಹವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು. ರಾಮಕೃಷ್ಣ ವಿವೇಕಾನಂದಾಶ್ರಮದ ಶಾರದೇಶಾನಂದ ಶ್ರೀ,
ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಪೌರಯುಕ್ತೆ ಎಸ್.ಲಕ್ಷ್ಮೀ, ಮಾಜಿ ಶಾಸಕ ಬಿ.ಪಿ.ಹರೀಶ್, ಸಿಪಿಐ ಶಿವಪ್ರಸಾದ್ ಎಂ, ಡಾ| ಶಾರಾದದೇವಿ, ಡಾ| ರಾಮಪ್ರಸಾದ, ತುಕಾಮಣಿ ಸಾ ಭೂತೆ, ಡಾ|ಖಮೀತ್ಕರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Honnali: ಮಹಿಳೆಯನ್ನು ತವರಿನಿಂದ ಒತ್ತಾಯಪೂರ್ವಕವಾಗಿ ಕರೆದುಕೊಂಡ ಹೋದ ಪತಿ, ಸಂಬಂಧಿಕರು
ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ
CM Post: ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.