ಔಷಧ ಅಂಗಡಿಗಳ ಬಂದ್ ಬಿಸಿ
Team Udayavani, May 31, 2017, 1:26 PM IST
ದಾವಣಗೆರೆ: ಕೇಂದ್ರ ಸರ್ಕಾರದ ಆನ್ಲೈನ್ ಔಷಧ ಮಾರಾಟದ ನೀತಿ ಖಂಡಿಸಿ ಅಖೀಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆಯ ಮೇರೆಗೆ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಮಂಗಳವಾರ ಆನ್ಲೈನ್ ಔಷಧ ಅಂಗಡಿಗಳು ಬಂದ್ ಆಗಿದ್ದವು.
ವೈದ್ಯರು ಬರೆದುಕೊಡುವ ಪ್ರಿಸ್ಕಿಷÒನ್, ಗ್ರಾಹಕರಿಗೆ ಕೊಡುವಂತಹ ಔಷಧ… ಪ್ರತಿಯೊಂದನ್ನು ಆನ್ ಲೈನ್ನಲ್ಲಿ ದಾಖಲಿಸಬೇಕು ಎಂಬ ಕೇಂದ್ರದ ನೀತಿ ಖಂಡಿಸಿ ಅಂಗಡಿ ಬಂದ್ ಮಾಡುವ ಪ್ರತಿಭಟನೆ ವ್ಯಕ್ತಪಡಿಸಿದರು.
ಔಷಧ ಅಂಗಡಿಗಳು ಬಂದ್ ಮಾಡಿರುವ ಬಗ್ಗೆ ಮಾಹಿತಿ ಇಲ್ಲದ ಅನೇಕರು ಔಷಧಕ್ಕಾಗಿ ಅಲೆದಾಡುವಂತಾಯಿತು. ಔಷಧ ಅಂಗಡಿಗಳು ಬಂದ್ನಿಂದಾಗಿ ಸದಾ ಗಿಜಿಗುಡುತ್ತಿದ್ದ ಜಿಲ್ಲಾ ಆಸ್ಪತ್ರೆ ರಸ್ತೆ, ಪಿ.ಜೆ. ಬಡಾವಣೆಯ ಅನೇಕ ರಸ್ತೆಯಲ್ಲಿ ಜನ ಸಂದಣಿ ಇರಲಿಲ್ಲ.
ಆಸ್ಪತ್ರೆ ಆವರಣದಲ್ಲಿರುವ ಔಷಧ ಅಂಗಡಿಗಳಿಗೆ ಬಂದ್ ನಿಂದ ವಿನಾಯತಿ ನೀಡಿದ್ದರಿಂದ ಅಲ್ಲಿ ಹೆಚ್ಚಿನ ಜನರು ಕಂಡು ಬಂದರು. ತಮಗೆ ಬೇಕಾದ ಔಷಧ ತೆಗೆದುಕೊಂಡು ಹೋಗುವುದಕ್ಕೆ ಕಾದರು. ಆಸ್ಪತ್ರೆ ಆವರಣದಲ್ಲಿನ ಅಂಗಡಿಗಳಿಗೆ ವಿನಾಯತಿ ನೀಡಿದ್ದು ಜನರ ತೊಂದರೆ ತಪ್ಪಿಸಲು ನೆರವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.