ಹೆದ್ದಾರಿ ಪಕ್ಕ ಕಚೇರಿ; ಸಂಚಾರಕ್ಕೆ ಕಿರಿ-ಕಿರಿ
Team Udayavani, Mar 6, 2019, 10:25 AM IST
ಚನ್ನಗಿರಿ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 13 ಹಾದುಹೋಗಿದ್ದು, ಇದರ ಪಕ್ಕದಲ್ಲೇ ಹಲವಾರು ಸರ್ಕಾರಿ ಕಚೇರಿಗಳಿವೆ. ಸ್ವಲ್ಪ ಯಮಾರಿದರೂ ಈ ಹೆದ್ದಾರಿ ಪಾದಚಾರಿಗಳಿಗೆ ಅಪಘಾತದ ರಹದಾರಿಯಾಗಿ ಮಾರ್ಪಟ್ಟಿದೆ. ದಿನದಿಂದ ದಿನಕ್ಕೆ ತಾಲೂಕು ಕೇಂದ್ರವೂ ಅಭಿವೃದ್ಧಿಯತ್ತ ಸಾಗುತ್ತಿದ್ದು, ಜನಸಂಖ್ಯೆ ಪ್ರಮಾಣದಲ್ಲೂ ಹೆಚ್ಚಾಗುತ್ತಿದೆ. ಇದರ ಜತೆಗೆ ಸಂಚಾರದ ಸಮಸ್ಯೆಯೂ ಉಲ್ಬಣಿಸುತ್ತಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಲೂಕು ಪಂಚಾಯತ್, ಕೃಷಿ, ಇಲಾಖೆ, ಪಶುಸಂಗೋಪನೆ ಇಲಾಖೆ, ತಾಲೂಕು ಕಚೇರಿ, ಬ್ಯಾಂಕ್, ಸೇರಿದಂತೆ ವಿವಿಧೆ ಇಲಾಖೆಗಳು ಸಿಗುತ್ತವೆ. ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ, ಸರಿಯಾದ ಸಂಚಾರದ ವ್ಯವಸ್ಥೆಯಿಲ್ಲದೆ ಎಲ್ಲೆಂದರಲ್ಲೆ ಖಾಸಗಿ ವಾಹನಗಳನ್ನು ಇಲಾಖೆ ರಸ್ತೆ ಬದಿಯಲ್ಲಿಯೇ ನಿಲ್ಲಿಸುತ್ತಾರೆ. ಇದರಿಂದ ಪಾದಚಾರಿಗಳು ಕಿರಿ-ಕಿರಿ ಅನುಭವಿಸುವಂತಾಗಿದೆ. ಇದಲ್ಲದೆ ಹಲವು ಬಾರಿ ಅಪಘಾತಗಳು ನಡೆದು ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ.
ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಿದ್ದು, ಕಚೇರಿಗೆ ಪ್ರವೇಶಿಸುವ ದಾರಿಯ ಇಕ್ಕೆಲೆಗಳಲ್ಲಿ ಖಾಸಗಿ ವಾಹನ ಹಾಗೂ ಬಾಡಿಗೆ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಇಲಾಖೆಗೆ ದಿನನಿತ್ಯ ಸಾವಿರಾರು ಕೆಲಸ-ಕಾರ್ಯ ನಿಮಿತ್ತ ವಾಹನಗಳಲ್ಲಿ ಬರುತ್ತಾರೆ.
ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಇದರಿಂದ ತಾಪಂ ಮುಖ್ಯದ್ವಾರದಲ್ಲಿ ಪಾದಚಾರಿಗಳು ನಡೆದಾಡಲು ಪರಿತಪಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಕದಲ್ಲೇ ಇರುವ ರಾಷ್ಟ್ರೀಯ ಹೆದ್ದಾರಿ ದಾಟುವುದಕ್ಕೆ ಪರದಾಡಬೇಕಿದೆ.
ಪಾಲನೆಯಾಗದ ಸಂಚಾರಿ ನಿಯಮ: ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತದೆ. ಪೊಲೀಸ್ ಇಲಾಖೆ ಸುಗಮ ಸಂಚಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಚಾರಿ ಪೊಲೀಸರ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ. ರಸ್ತೆಯಲ್ಲಿ ರಸ್ತೆ ಸಾರಿಗೆ ಇಲಾಖೆಯ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ರಸ್ತೆಬದಿಯಲ್ಲಿ ಇಲ್ಲ ನಾಮಫಲಕ: ಪಟ್ಟದ ಪ್ರಮುಖ ರಸ್ತೆಗಳಲ್ಲಿ ನಾಮಫಲಕಗಳನ್ನು ಹಾಕದೇ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ತಾಲೂಕು ಕಚೇರಿ ರಸ್ತೆ, ನೃಪತುಂಗ ರಸ್ತೆ, ಕಲ್ಲುಸಾಗರ ರಸ್ತೆ, ಕನಿಕಪರಮೇಶ್ವರಿ ದೇವಸ್ಥಾನ ರಸ್ತೆ, ಕೊರ್ಟ್ ರಸ್ತೆಗಳಲ್ಲಿ ನಾಮಫಲಕಗಳಿಲ್ಲ. ದಿನನಿತ್ಯವು ಈ ರಸ್ತೆಯಲ್ಲಿ ಸರ್ವಾಜನಿಕರ ಸಂಖ್ಯೆ ದಟ್ಟವಾಗಿರುತ್ತದೆ. ಶಕ್ರವಾರ ಬಂತೆಂದರೆ ಟ್ರಾಫಿಕ್ ಸಮಸ್ಯೆಯಿಂದ ಹೆಚ್ಚಿರುತ್ತದೆ.
ಆದ್ದರಿಂದ ದ್ವಿಚಕ್ರವಾಹನಗಳಿಗೆ ದ್ವಿಮುಖ ಮತ್ತು ಏಕ ಮುಖ ರಸ್ತೆ ಸಂಚಾರದ ನಿಯಮಗಳನ್ನು ಜಾರಿಗೆ ತಂದರೆ ಟ್ರಾಫಿಕ್ ಸಮಸ್ಯೆ ಸುಧಾರಿಸಲಿದೆ ಎನ್ನುವುದು ಪ್ರಜ್ಞಾವಂತರ ಆಶಯವಾಗಿದೆ.
ಮುಖ್ಯ ರಸ್ತೆಗಳು ಕಿರಿದಾಗಿದ್ದು, ಪ್ರತ್ಯೇಕವಾಗಿ ಎರಡು ವಾಹನಗಳು ಸಂಚಾರಿಸುವುದು ಕಷ್ಟಸಾಧ್ಯವಾಗಿದೆ. ಊರುಬಾಗಿಲ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗಿರುತ್ತದೆ. ಶಾಲಾ ಸಮಯದಲ್ಲಿ ಮಕ್ಕಳು ಟ್ರಾಫಿಕ್‌ನಿಂದ ಸಮಸ್ಯೆ ಅನುಭವಿಸುವಂತಾಗಿದೆ. ಎನ್‌ಎಚ್13 ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಮಿತಿಯಿಲ್ಲದೆ ನಿಲ್ಲಿಸಲಾಗುತ್ತದೆ. ಇದರಿಂದ ಪಾದಾಚಾರಿಗಳು ಮೃತಪಟ್ಟಿರುವ ಘಟನೆಗಳು ಸಹ ನಡೆದಿದೆ, ತಕ್ಷಣ ಟ್ರಾಫಿಕ್ ವ್ಯವಸ್ಥೆ ಸುಗಮಗೊಳಿಸಲು ಕ್ರಮ ತೆಗೆದುಕೊಳ್ಳಬೇಕು.
ಎ.ಸಿ. ಚಂದ್ರು, ತಾಲೂಕು ಅಹಿಂದ ಅಧ್ಯಕ್ಷ
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಶಿವರಾತ್ರಿ ಹಬ್ಬದ ನಂತರ ಟ್ರಾಫಿಕ್ ಸಮಸ್ಯೆ ಇರುವ ರಸ್ತೆಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ವಾಹನ ಚಾಲಕರು ತಮ್ಮ ವಾಹನಗಳನ್ನು ಹೇಗೆ ಪಾರ್ಕಿಂಗ್ ಮಾಡಬೇಕು ಎಂಬುದನ್ನು
ಜಾಗೃತಿ ಮೂಡಿಸಲಾಗುವುದು.
ಶಿವರುದ್ರಪ್ಪ ಮೇಟಿ, ಪಿಎಸ್‌ಐ, ಚನ್ನಗಿರಿ
ಸಿ.ಎಸ್. ಶಶೀಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.