ಹೊಳೆಯಲ್ಲಿ ನಿರ್ಮಿಸಿದ್ದ ಹೊಂಡ ನಾಪತ್ತೆ!
Team Udayavani, Apr 10, 2017, 1:04 PM IST
ಹರಿಹರ: ತುಂಗಭದ್ರಾ ನದಿ ನೀರಿನ ಹರಿವು ಭಾನುವಾರ ಮತ್ತಷ್ಟು ಕ್ಷೀಣಿಸಿದ್ದು, ನಗರಕ್ಕೆ ನೀರು ಪೂರೈಸುವ ಕವಲೆತ್ತು ಜಾಕ್‌ವೆಲ್‌ಗೆ ಸರಿಯಾಗಿ ನೀರು ಸಿಗದ ಕಾರಣ ಸೋಮವಾರದಿಂದ ನೀರು ಸರಬರಾಜು ಸ್ಥಗಿತೊಳ್ಳುವ ಅಪಾಯ ಎದುರಾಗಿದೆ. ನದಿ ಪಾತ್ರದ ಜನವಸತಿ ಪ್ರದೇಶಗಳಿಗೆ ಕುಡಿಯುವ ಉದ್ದೇಶಕ್ಕೆಂದು ಕಳೆದ ಮಾ.20ರಂದು ಭದ್ರಾ ಡ್ಯಾಮ್‌ನಿಂದ 3 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿತ್ತು.
ಆದರೆ ಈಗಾಗಲೇ ಜಲಾಶಯದಿಂದ ಬರುವ ನೀರು ಬಂದ್ ಮಾಡಲಾಗಿದ್ದು, ತಾಲೂಕಿನಲ್ಲಿ ಮುಂದಿನ 2-3 ದಿನಗಳಲ್ಲಿ ನದಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಬರದ ನಿಮಿತ್ತ ಪ್ರಸಕ್ತ ವರ್ಷ ಜಲಾಶಯದಲ್ಲಿ ಕನಿಷ್ಟ ಪ್ರಮಾಣದ ನೀರು ಮಾತ್ರ ಸಂಗ್ರಹವಾಗಿದ್ದು, ಜನವರಿ ಕೊನೆಯಲ್ಲಾಗಲೇ ನದಿ ನೀರು ಸ್ಥಗಿತಗೊಂಡಿತ್ತು.
ಮೈಲಾರ ಜಾತ್ರೆ ನಿಮಿತ್ತ ಫೆಬ್ರವರಿಯಲ್ಲಿ 10-12 ದಿನಗಳ ಕಾಲ ನೀರು ಹರಿಸಿದ್ದರೆ, ಈ ಸಲ ಏ.5ರವರೆಗೆ ಅಂದರೆ 15-16 ದಿನಗಳ ಕಾಲ ನೀರು ಹರಿಸಲಾಗಿದೆ. ನಾಳೆಯಿಂದ ಮತ್ತೆ ಕೊಳವೆ ಬಾವಿಯ ಸಪ್ಪೆ ಹಾಗೂ ಫ್ಲೋರೈಡ್‌ಯುಕ್ತ ನೀರನ್ನೆ ತಾಲೂಕಿನ ಜನರು ಆಶ್ರಯಿಸಬೇಕಿದೆ.
ಹೊಂಡ ನಾಪತ್ತೆ!: ಜಲಾಶಯದಿಂದ ನೀರು ಬಿಡುತ್ತಲೇ ತಾಲೂಕಿನ ಅಧಿಧಿಕಾರಿಗಳು ಹಾಗೂ ಜನಪ್ರತಿನಿಧಿಧಿಗಳಿಗೆ ಹೊಳೆಯಲ್ಲೇ ಹೊಂಡ ನಿರ್ಮಿಸಿ, ನೀರು ಸಂಗ್ರಹಿಸುವ ಅದ್ಭುತ ಉಪಾಯ (?) ಹೊಳೆಯಿತು. ಅದರಂತೆ ಜಾಕ್‌ವೆಲ್ ಸುತ್ತಲೂ 250-300 ಮೀಟರ್ ಉದ್ದ, 100 ಮೀಟರ್ ಅಗಲದ 2 ಮೀಟರ್ ಆಳದ ಹೊಂಡ ನಿರ್ಮಿಸಲಾಗಿತ್ತು.
12-13 ದಿನಗಳ ಕಾಲ ಹರಿದ ನೀರಿನಮಟ್ಟ ಈಗ ಕ್ಷೀಣಿಸಿದೆ. ಆದರೆ ಜಾಕ್‌ವೆಲ್ ಸುತ್ತ ನಿರ್ಮಿಸಲಾಗಿದ್ದ ಹೊಂಡ ನಾಪತ್ತೆಯಾಗಿದೆ. ಅಲ್ಲಿ ದೊಡ್ಡ ಹೊಂಡ ನಿರ್ಮಿಸಲಾಗಿತ್ತೆಂಬ ಸಣ್ಣ ಕುರುಹು ಸಹ ಕಾಣದಂತೆ ಮರಳು ಸಮತಟ್ಟಾಗಿದೆ.
ಸಾರ್ವಜನಿಕ ಹಣ ಪೋಲು: 8 ಜೆಸಿಬಿ ವಾಹನಗಳು 3 ದಿನ ಹಗಲು ರಾತ್ರಿ ಶ್ರಮಿಸಿ ನದಿಯಲ್ಲಿ ಹೊಂಡ ನಿರ್ಮಿಸಿದ್ದವು. ಇದರಲ್ಲಿ 40-50 ಮಿಲಿಯನ್ ಲೀಟರ್ ನೀರು ಸಂಗ್ರಹವಾಗಲಿದ್ದು, ನದಿ ಹರಿವು ನಿಂತರೂ ಸಂಗ್ರಹಿತ ನೀರನ್ನು ಒಂದು ವಾರ ನಗರಕ್ಕೆಪೂರೈಸಬಹುದು ಎಂದು ಪ್ರಚಾರ ಮಾಡಲಾಗಿತ್ತು.
ಆದರೆ ತರಾತುರಿಯಲ್ಲಿ, ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಹೊಂಡ ಮರಳಿನಿಂದ ಮುಚ್ಚಿಕೊಂಡು ನಾಮಾವಶೇಷವಾಗಿದೆ. ಅಧಿಧಿಕಾರಿಗಳು, ಜನಪ್ರತಿನಿಧಿಧಿಗಳ ದಡ್ಡತನಕ್ಕೆ ಲಕ್ಷಾಂತರ ರೂ. ಸಾರ್ವಜನಿಕ ಹಣ ಪೋಲಾದಂತಾಗಿದೆ.
ನೀರಿದ್ದರೂ ಉಪಯೋವಿಲ್ಲ: ನದಿ ನೀರು ಇನ್ನೂ ಸಂಪೂರ್ಣ ಸ್ಥಗಿತಗೊಂಡಿಲ್ಲ, ಸಣ್ಣದಾಗಿ ಝರಿಯಂತೆ ನೀರು ಹರಿಯುತ್ತಿದ್ದರೂ ಅದು ನೀರೆತ್ತುವ ಜಾಕ್‌ವೆಲ್‌ಗೆ ಸಿಗದ ಕಾರಣ ಪಂಪ್ ಮಾಡಿ, ಸರಬರಾಜು ಮಾಡಲಾಗುತ್ತಿಲ್ಲ. ನದಿಪಾತ್ರದ ಉದ್ದಕ್ಕೂ ಅಲ್ಲಲ್ಲಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ಅಥವಾ ಶಾಶ್ವತ ಒಡ್ಡು ಹಾಕಿ ಸಾಧ್ಯವಾದಷ್ಟು ನೀರು ಸಂಗ್ರಹಿಸಿಕೊಂಡು ಜಾಕ್‌ವೆಲ್‌ಗೆ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುತ್ತದೆ.
ಇಲ್ಲೂ ಸಹ ಪ್ರತಿ ಬೇಸಿಗೆಯಲ್ಲಿ ಮರಳಿನ ಚೀಲದಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತಿತ್ತು. ಆದರೆ ಹೊಂಡ ನಂಬಿಕೊಂಡು ಈ ಸಲ ಅದನ್ನು ಮಾಡಿಲ್ಲ. ಈಗಲೂ ಕಾಲ ಮಿಂಚಿಲ್ಲ, ನಗರಸಭೆ ಸೋಮವಾರವೇ ತಾತ್ಕಾಲಿಕ ಮರಳಿನ ಚೀಲದ ಗೋಡೆ ನಿರ್ಮಿಸಿದರೆ ಮತ್ತೆ 5-6 ದಿನಗಳ ನಗರಕ್ಕೆ ನೀರು ಪೂರೈಸಬಹುದಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.