ನಾಗರಿಕರು ಕರ್ತವ್ಯ ಪರಿಪಾಲಿಸಬೇಕಿದೆ

Team Udayavani, Mar 5, 2017, 12:46 PM IST

dvg2.jpg

ದಾವಣಗೆರೆ: ನಮ್ಮ ದೇಶದ ಅಭಿವೃದ್ಧಿ, ಜನರ ಏಳಿಗೆಗೆ ಸರ್ಕಾರ ಮಾತ್ರವೇ ಶ್ರಮಿಸಬೇಕು ಎಂಬ ಮನೋಭಾವ ಬಿಟ್ಟು ಇದರಲ್ಲಿ ನಮ್ಮ ಕರ್ತವ್ಯವೂ ಇದೆ ಎಂಬುದನ್ನು ಮನಗಾಣದ ಹೊರತು ದೇಶ, ಜನರ ಸ್ಥಿತಿ ಬದಲಾಗುವುದಿಲ್ಲ ಎಂದು ಕೊಪ್ಪಳದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.

ಶನಿವಾರ ಕುವೆಂಪು ಕನ್ನಡ ಭವನದಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ 4ನೇ ದಾವಣಗೆರೆ ಸಾಂಸ್ಕೃತಿಕ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ದೇಶದ ಜನರ ಸ್ಥಿತಿ ಸುಧಾರಣೆಗೆ ಆ ದೇಶದರಾಜಕಾರಣಿಗಳು ಮಾತ್ರವಲ್ಲ ಅಲ್ಲಿನ ಜನರೂ ಸಹ ಕಾರಣರಾಗುತ್ತಾರೆ.

ಅದನ್ನೇ ನಾಗರಿಕ ಕರ್ತವ್ಯ ಎಂಬುದಾಗಿ  ಕರೆಯಲಾಗುತ್ತದೆ. ಈ ಜವಾಬ್ದಾರಿಯನ್ನು ನಾವು ಚಾಚೂ ತಪ್ಪದೇ ಪಾಲಿಸಬೇಕು ಎಂದರು.ಕಲೆ, ಸಂಸ್ಕೃತಿ, ಸಾಹಿತ್ಯ ಒಂದು ನಾಡಿನ ಜನರ ಭಾವನೆಗಳ ಜೀವನಾಡಿ. ಹಿಂದಿನ ಕಾಲದಲ್ಲಿ ರಾಜರು ಇವುಗಳ ಬೆಳವಣಿಗೆ ಪ್ರೋತ್ಸಾಹ ನೀಡಿದರು.

ಇಂದು ಆಳುವ ಸರ್ಕಾರದ ಬದಲು ಜನರೇ ಇವುಗಳನ್ನ ಪೋಷಣೆ ಮಾಡುವಂತಾಗಬೇಕು. ಆಗಲೇ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿದು, ಬೆಳೆದುಕೊಂಡು ಹೋಗಲು ಸಾಧ್ಯ ಎಂದು ಹೇಳಿದರು. ಇಂದಿನ ಓದು ಕೇವಲ ಪದವಿ ಗಳಿಸಲು ಎಂಬಂತಾಗಿದೆ. ಇದಕ್ಕೆ ಕಾರಣ ಇಂದಿನ ಸೆಮಿಸ್ಟರ್‌ ಪದ್ಧತಿ.

ಹಿಂದಿನ ಕಾಲದಲ್ಲಿ ಈ ಸೆಮಿಸ್ಟರ್‌ ಪದ್ಧತಿ ಇರಲಿಲ್ಲ. ವಿಸ್ತೃತ ಓದು ಇರುತ್ತಿತ್ತು. ಆದರೆ, ಇಂದು ಸಣ್ಣ ಮಕ್ಕಳಿಗೂ ಸೆಮಿಸ್ಟರ್‌ ಪದ್ಧತಿ ಜಾರಿ ಮಾಡಲಾಗಿದೆ. ಇದರಿಂದಾಗಿ ಮಕ್ಕಳು ಇಂದು ಸದಾ ಹೋಂ ವರ್ಕ್‌ ಒತ್ತಡದಲ್ಲಿಯೇ ಇರಬೇಕಾದ ಸ್ಥಿತಿ ಇದೆ. ಇಂತಹ ಓದಿನಿಂದ ಮಕ್ಕಳ ಬಾಲ್ಯ ಕಳೆದು ಹೋಗುವುದು ಮಾತ್ರವಲ್ಲ, ವ್ಯಕ್ತಿತ್ವ ವಿಕಸನ ಸಹ ಕುಗ್ಗಿಹೋಗುತ್ತದೆ ಎಂದು ಅವರು ಹೇಳಿದರು. 

ಸಿನಿಮಾ, ಧಾರವಾಹಿಗಳು ಇಂದು ಸಾಂಸ್ಕೃತಿಕ ಕಾರ್ಯಕ್ರಮಗಳಾಗಿವೆ. ಆದರೆ, ಈ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೆ, ಮನಸ್ಸು, ಸಮಾಜ ಒಡೆಯುವಕೆಲಸ ಮಾಡುತ್ತಿವೆ. ಕಟ್ಟುವ ಕೆಲಸ ಮಾಡುತ್ತಿಲ್ಲ. ಇನ್ನು ಟಿವಿಯಲ್ಲಿ ಬರುವ ಕಾರ್ಯಕ್ರಮಗಳು ಜನರನ್ನು ಮೂರ್ಖರನ್ನಾಗಿಸುತ್ತಿವೆ.

ಬೆಳ್ಳಂಬೆಳಿಗ್ಗೆ ಬರುವ ಜ್ಯೋತಿಷಿಗಳು ಮೂಢನಂಬಿಕೆ ಬಿತ್ತುತ್ತಿದ್ದಾರೆ. ನಾಗರಿಕರು ಪ್ರಜ್ಞಾವಂತರಾದರೆ ಇವನ್ನು ಸಾರಸಗಟಾಗಿ ತಿರಸ್ಕರಿಸಬೇಕು. ಒಳ್ಳೆಯ ವಿಷಯಗಳನ್ನು ಹುಡುಕಿಕೊಳ್ಳಬೇಕು ಎಂದು ಅವರು ಕರೆಕೊಟ್ಟರು.ಟಿವಿ, ಸಿನಿಮಾ ಮಾಧ್ಯಮಗಳು ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ.

ಜನರಲ್ಲಿ ಜಾಗೃತಿ ಮೂಡಿಸಿ, ಸರಿ ದಾರಿಗೆ ತರಬೇಕು. ದೇಶದಲ್ಲಿರುವ ಸ್ಥಿತಿ ಅರಿತು ಸಮಾಜದ ಸ್ವಾಸ್ಥÂ ಕಾಪಾಡಲು ಕೆಲಸ ಮಾಡಬೇಕು. ಇಂದುನಮ್ಮ ದೇಶದಲ್ಲಿ ಸಮರ್ಥ ವಿಪಕ್ಷ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಜನರನ್ನೇ ವಿಪಕ್ಷಗಳನ್ನಾಗಿ ರೂಪಿಸಬೇಕಿದೆ ಎಂದು ಅವರು ಹೇಳಿದರು. 

ಗುಡಿ ಕಟ್ಟುವುದರಿಂದ ದೇಶ ಉದ್ಧಾರ ಆಗುವುದಿಲ್ಲ. ಈ ಹಿಂದೆ ಕಟ್ಟಿರುವ ಬೆಲೆ ಕಟ್ಟಲಾಗದ ಸ್ಮಾರಕಗಳನ್ನು ಉಳಿಸಿಕೊಳ್ಳಬೇಕಿದೆ. ಅವುಗಳು ನಮ್ಮ ಪೂರ್ವಜರಕುರುಹು, ಮುಂದಿನ ಪೀಳಿಗೆಯ ದಾರಿದೀಪ. ಇದನ್ನು  ಅರ್ಥಮಾಡಿಕೊಂಡು ಹೊಸ ಗುಡಿ ಕಟ್ಟುವ ಬದಲು ಇರುವ ಸ್ಮಾರಕ ಉಳಿಸಿಕೊಳ್ಳಲು ನಾವು ಮುಂದಾಗಬೇಕು ಎಂದು ಅವರು ಹೇಳಿದರು. 

ಪ್ರೊ. ಮಲ್ಲಿಕಾರ್ಜುನ ಹಲಸಂಗಿ, ಡಾ| ಎನ್‌. ವಸುಧೇಂದ್ರ, ಮಧು ತೊಗಲೇರಿ, ಜ್ಯೋತಿ ಕುಕ್ಕವಾಡ ವೇದಿಕೆಯಲ್ಲಿದ್ದರು. ಹೊಸ ಹಾದಿ ಹೊಸ ಪಯಣ, ಅಪರಾಧಿ ಯಾರು? ನಾಟಕ ಪ್ರದರ್ಶನಗೊಂಡವು.    

ಟಾಪ್ ನ್ಯೂಸ್

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

ಬಿಸಿಯೂಟ ಸಿಬ್ಬಂದಿ ಇಡಿಗಂಟಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.