ಬೇಸಿಗೆಯ ನೀರಿನ ಸಮಸ್ಯೆ ನೀಗಿಸಿದ ಮಳೆ!
ಉತ್ತಮ ಮಳೆಯಿಂದ ತುಂಬಿದ ಕೆರೆ ಬಿರು ಬೇಸಿಗೆಯಲ್ಲಿ ಸಮಸ್ಯೆಯಾದರೂ ಕ್ರಮಕ್ಕೆ ಸಿದ್ಧತೆ
Team Udayavani, Mar 14, 2020, 11:26 AM IST
ಹೊನ್ನಾಳಿ: ನ್ಯಾಮತಿ ತಾಲೂಕಿನ ಮಾದನಬಾವಿ ಕೆರೆ ತುಂಬಿರುವುದು
ಹೊನ್ನಾಳಿ: ಹೊನ್ನಾಳಿ ಮತ್ತು ನೂತನ ನ್ಯಾಮತಿ ತಾಲೂಕುಗಳಲ್ಲಿ ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಸಾಧ್ಯತೆಗಳು ತೀರಾ ಕಡಿಮೆ. ಕಳೆದ ವರ್ಷ ಆಗಸ್ಟ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಸುರಿದ ಹಿಂಗಾರು ಮಳೆ ಈ ಬಾರಿಯ ಬೇಸಿಗೆ ನೀರಿನ ಸಮಸ್ಯೆಯನ್ನು ಸ್ವಲ್ಪ ತಗ್ಗಿಸಿದೆ ಎನ್ನಬಹುದು.
ತುಂಗಭದ್ರಾ ನದಿ ತಟದಲ್ಲಿರುವ ಅರೆ ಮಲೆನಾಡು ಹೊನ್ನಾಳಿ ತಾಲೂಕು ಯಾವತ್ತೂ ಭೀಕರ ಬರ ಅಥವಾ ನೀರಿನ ಸಮಸ್ಯೆ ಅನುಭವಿಸಿಲ್ಲ. ನ್ಯಾಮತಿ, ಸುರಹೊನ್ನೆ, ಫಲವನ್ನಹಳ್ಳಿ, ಸೋಗಿಲು, ಚಟ್ನಹಳ್ಳಿ ಸೇರಿದಂತೆ ಇತರ ಗ್ರಾಮಗಳು ನೀರಿನ ಬವಣೆ ಅನುಭವಿಸಿದ್ದವು. ಈ ಬಾರಿ ಸುರಿದ ಉತ್ತಮ ಮಳೆಗೆ ಕೆರೆ, ಕಟ್ಟೆಗಳು ತುಂಬಿವೆ. ಅಂತರ್ಜಲ ಮಟ್ಟವೂ ಹೆಚ್ಚಿದ್ದು, ಗ್ರಾಮಗಳ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು ಬರುತ್ತಿದೆ.
ಕಳೆದ 15 ವರ್ಷಗಳಿಂದ ನೀರನ್ನೇ ಕಾಣದ ನ್ಯಾಮತಿ ತಾಲೂಕಿನ ಮಾದನಬಾವಿ ಕೆರೆಗೆ ಈ ಬಾರಿ ಹೆಚ್ಚು ನೀರು ಹರಿದು ಬಂದು ತುಂಬಿದ್ದು, ಈಗ ಪಕ್ಷಿಗಳಿಗೆ ಆಶ್ರಯವಾಗಿದೆ. ಕಳೆದ ವರ್ಷದ ಭಾರೀ ಮಳೆಗೆ ಸೌಳಂಗ ಮತ್ತು ಕತ್ತಿಗೆ ಕೆರೆಗಳು ಪೂರ್ಣ ತುಂಬಿ ಕೋಡಿ ಬಿದ್ದಿವೆ.
ನೂತನ ನ್ಯಾಮತಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಾಗೂ ತಾಲೂಕು ಕೇಂದ್ರ ನ್ಯಾಮತಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸುರಹೊನ್ನೆ ಗ್ರಾಮದಲ್ಲಿ ನೀರಿನ ಸೆಲೆ ಸಾಕಷ್ಟು ಇಲ್ಲದ ಕಾರಣ ಪಟ್ಟಣ ಹಾಗೂ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸದಾ ಕಾಡುತ್ತಿತ್ತು. 2009ರಲ್ಲಿ ಅಂದಿನ ಬಿಜೆಪಿ ಸರ್ಕಾರ ಹೊನ್ನಾಳಿ ತುಂಗಭದ್ರಾ ನದಿಯಿಂದ ಗೋವಿನಕೋವಿ ಗ್ರಾಮದ ಮೂಲಕ ಸುಮಾರು 13 ಕಿಮೀ ದೂರದ ನ್ಯಾಮತಿ-ಸುರಹೊನ್ನೆ ಅವಳಿ ಗ್ರಾಮಗಳಿಗೆ 10.5ಕೋಟಿ ರೂ. ಅನುದಾನದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಿತ್ತು. ನದಿ ತಟದಲ್ಲಿರುವ ಗೋವಿನಕೋವಿ ಗ್ರಾಮದ ಬಳಿ ಜಾಕ್‌ವೆಲ್ ನಿರ್ಮಿಸಿ ಅರೇಹಳ್ಳಿ ಗ್ರಾಮದ ಬಳಿ ನೀರು ಸಂಗ್ರಹ ತೊಟ್ಟಿ ನಿರ್ಮಿಸಿ ನ್ಯಾಮತಿ ಮತ್ತು ಸುರಹೊನ್ನೆ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಯಿತು.
ಇದರಿಂದ ಅವಳಿ ಗ್ರಾಮಗಳ ನೀರಿನ ಬವಣೆಯೂ ತಪ್ಪಿದೆ. ಹೊನ್ನಾಳಿ ತಾಲೂಕಿನ ದಿಡಗೂರು, ಹರಳಹಳ್ಳಿ, ಹೊನ್ನಾಳಿ, ಬಳ್ಳೇಶ್ವರ, ಕೊನಾಯ್ಕನಹಳ್ಳಿ ಸೇರಿದಂತೆ ಇತರ ಗ್ರಾಮಗಳು ನದಿ ಪಾತ್ರದಲ್ಲಿ ಇರುವುದರಿಂದ ನೀರಿನ ಕೊರತೆ ಇಲ್ಲ. ಬಿಸಿಲಿನ ಬೇಗೆ ಹೆಚ್ಚಾದರೆ ಏಪ್ರಿಲ್ ಕೊನೆ ವಾರದಿಂದ ಮೇ ತಿಂಗಳ ಅಂತ್ಯದವರೆಗೆ ನ್ಯಾಮತಿ ತಾಲೂಕಿನ ಜಿನಹಳ್ಳಿ, ಫಲವನಹಳ್ಳಿ, ಸುರಹೊನ್ನೆ, ರಾಮೇಶ್ವರ, ಶಾಂತಿನಗರ, ಚಟ್ನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬರಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ. ತಾಲೂಕಿನಲ್ಲಿ 26 ಚೆಕ್ ಡ್ಯಾಂಗಳ ನಿರ್ಮಾಣವಾಗಿದ್ದು ಎಲ್ಲಾ ಚೆಕ್‌ಡ್ಯಾಂಗಳು ಕಳೆದ ವರ್ಷದ ಮಳೆಗೆ ತುಂಬಿವೆ. ಇದರಿಂದ ಕೊಳವೆ ಬಾವಿಗಳು ಜಲಪೂರ್ಣವಾಗಿವೆ.
ಕಳೆದ ಬಾರಿಯ ಉತ್ತಮ ಮಳೆಗೆ ತಾಲೂಕಿನ ಬಹುತೇಕ ಕೆರೆಕಟ್ಟೆಗಳು ತುಂಬಿವೆ. ಹಾಗಂತ ಸುಮ್ಮನೆ ಕೂರಲು ಆಗುವುದಿಲ್ಲ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುವುದು. ಇದರಿಂದ ಭೂಮಿಯಲ್ಲಿ ಜಲಪೂರ್ಣಗೊಳ್ಳುವುದಲ್ಲದೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗುತ್ತದೆ.
ಎಂ.ಪಿ.ರೇಣುಕಾಚಾರ್ಯ,
ಶಾಸಕರು, ಹೊನ್ನಾಳಿ ಕ್ಷೇತ್ರ.
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಸದ್ಯಕ್ಕೆ ನೀರಿನ ಕೊರತೆ ಇಲ್ಲ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎದುರಾಗುವ ನೀರಿನ ಸಮಸ್ಯೆ ಬಗ್ಗೆ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಗಂಗಾಧರಮೂರ್ತಿ,
ತಾ.ಪಂ ಇಒ, ಹೊನ್ನಾಳಿ.
ಎಂ.ಪಿ.ಎಂ. ವಿಜಯಾನಂದಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.