ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Team Udayavani, Feb 22, 2022, 2:51 PM IST
ಹೊನ್ನಾಳಿ: ಕಳ್ಳ ಎತ್ತು, ಮುದಿ ಎತ್ತುಎಂದು ಮಾತನಾಡುವ ಶಾಸಕರು,ಇನ್ನು ಮುಂದೆ ನನ್ನ ವಿಚಾರವಾಗಿಮಾತನಾಡುವ ಮುನ್ನ ತಲೆ ಸರಿಇಟ್ಟುಕೊಂಡು ಮಾತಾಡಲಿ ಎಂದುಶಾಸಕ ಎಂ.ಪಿ.ರೇಣುಕಾಚಾರ್ಯಅವರಿಗೆ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಎಚ್ಚರಿದರು.ಸಚಿವ ಕೆ.ಎಸ್. ಈಶ್ವರಪ್ಪಅವರ ರಾಜೀನಾಮೆಗೆ ಆಗ್ರಹಿಸಿಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿಮಾತನಾಡಿದ ಅವರು, ತಾಲೂಕಿನಮಾಸಡಿ ಗ್ರಾಮದಲ್ಲಿ ಜಿಲ್ಲಾ ಧಿಕಾರಿಗಳನಡೆ ಗ್ರಾಮಗಳ ಕಡೆ ಸಮಾರಂಭದಲ್ಲಿರೇಣುಕಾಚಾರ್ಯರು ನನಗೆ ಮುದಿಎತ್ತು, ಕಳ್ಳ ಎತ್ತು ಎಂದು ಕರೆದಿದ್ದಾರೆಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಈ ಹಿಂದೆ ಶಾಸಕರೇಣುಕಾಚಾರ್ಯ ಮತ್ತು ಅವರತಾಲೂಕು ಆಡಳಿತದ ಬಗ್ಗೆ ಭ್ರಷ್ಟಾಚಾರಕುರಿತು ಸಾರ್ವಜನಿಕ ಚರ್ಚೆಗೆಆಹ್ವಾನಿಸಿದ್ದೆ. ಈಗಲೂ ಆಹ್ವಾನಿಸುತ್ತೇನೆ.ಹಿರೇಕಲ್ಮಠಕ್ಕೆ ಬರಲಿ ಎಂದು ಸವಾಲುಹಾಕಿದರು.ಸಚಿವ ಕೆ.ಎಸ್. ಈಶ್ವರಪ್ಪ ಒಬ್ಬಹಿರಿಯ ರಾಜಕಾರಣಿ ಅವರುರಾಷ್ಟ್ರಧ್ವಜಕ್ಕೆ ಅವಮಾನ ಮಾಡುವಂತಹಹೇಳಿಕೆ ಕೊಡಬಾರದು. ಕೆಂಪುಕೋಟೆಮೇಲೆ ಕೇಸರಿ ಧ್ವಜ ಹಾರಿಸುತ್ತೇನೆಎನ್ನುವ ಅವರ ಹೇಳಿಕೆ ಸಂವಿಧಾನ,ಕಾನೂನು ಬಾಹಿರ. ನಮ್ಮರಾದನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕಳೆದ ಐದುದಿನಗಳಿಂದ ಪ್ರತಿಭಟನೆ, ಅಹೋರಾತ್ರಿಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ,ಅವರು ರಾಜೀನಾಮೆ ಕೊಡುವವರೆಗೂಸದನದ ಹೊರಗೂ ಒಳಗೂ ಹೋರಾಟಮಾಡುವುದಾಗಿ ಹೇಳಿದ್ದಾರೆ.
ನಾವುಕೂಡಾ ಹೋರಾಟಕ್ಕೆ ಸಿದ್ಧರಿದ್ದೇವೆಎಂದರು.ಕಾಂಗ್ರೆಸ್ ಹಿರಿಯ ಮುಖಂಡ ಬಿ.ಸಿದ್ದಪ್ಪ, ಡಾ| ಈಶ್ವರನಾಯ್ಕ, ಜಿಪಂಸದಸ್ಯ ಡಿ.ಜಿ. ವಿಶ್ವನಾಥ್, ಜಿಪಂ ಮಾಜಿಅಧ್ಯಕ್ಷ ಆರ್. ನಾಗಪ್ಪ, ಸಾಸ್ವೇಹಳ್ಳಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಗದ್ದಿಗೇಶ್, ತಾಲೂಕು ಅಲ್ಪಸಂಖ್ಯಾತರಘಟಕದ ಅಧ್ಯಕ್ಷ ಚೀಲೂರು ವಾಜೀದ್,ದಿಡಗೂರು ತಮ್ಮಣ್ಣ ಇತರರುಮಾತನಾಡಿದರು. ಈ ಸಂದರ್ಭದಲ್ಲಿಮುಖಂಡರಾದ ಎಚ್.ಡಿ. ವಿಜೇಂದ್ರಪ್ಪ,ಎಚ್.ಬಿ. ಅಣ್ಣಪ್ಪ, ಪಿಎಲ್‌ಡಿ ಬ್ಯಾಂಕ್‌ಅಧ್ಯಕ್ಷ ನಾಗೇಂದ್ರಪ್ಪ, ಪುರಸಭೆಕಾಂಗ್ರೆಸ್ ಸದಸ್ಯರು, ಎನ್‌ಎಸ್‌ಯುಐ,ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರು,ಪದಾ ಕಾರಿಗಳು, ದಲಿತ ಸಂಘಟನೆಗಳಮುಖಂಡರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.