ಡಾ| ತಿಪ್ಪೆರುದ್ರಸ್ವಾಮಿ ಕನ್ನಡ ನಾಡು ಕಂಡ ಶ್ರೇಷ್ಠವಿದ್ವಾಂಸ
Team Udayavani, Mar 17, 2022, 8:04 PM IST
ಹೊನ್ನಾಳಿ: ಸೃಜನಶೀಲ ಸಾಹಿತ್ಯ ರಚನೆಗೆ ಹೆಸರಾದಸಾಹಿತಿ, ಕವಿ ಡಾ| ಎಚ್. ತಿಪ್ಪೇರುದ್ರಸ್ವಾಮಿಯವರುನಾಡು ಕಂಡ ಶ್ರೇಷ್ಠ ವಿದ್ವಾಂಸ ಎಂದು ಲೇಖಕಯು.ಎನ್. ಸಂಗನಾಳಮಠ ಹೇಳಿದರು.ಹಿರೇಕಲ್ಮಠದ ಲಿಂಗೈಕ್ಯ ಮೃತ್ಯುಂಜಯಶಿವಾಚಾರ್ಯ ಸ್ವಾಮೀಜಿಯವರ 52ನೇ ವಾರ್ಷಿಕಪುಣ್ಯಾರಾಧನೆ ಮತ್ತು ಲಿಂಗೈಕ್ಯ ಒಡೆಯರಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ7ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿಹಮ್ಮಿಕೊಂಡಿದ್ದ ಡಾ| ಎಚ್. ತಿಪ್ಪೇರುದ್ರಸ್ವಾಮಿಹಾಗೂ ಲಿಂಗೈಕ್ಯ ಎಚ್.ಎನ್. ಷಡಕ್ಷರ ಶಾಸ್ತ್ರಿ ಅವರದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಡಾ| ಎಚ್.ತಿಪ್ಪೇರುದ್ರಸ್ವಾಮಿಯವರ ಸಾಹಿತ್ಯ ಚಿಂತನ’ ಎಂಬವಿಷಯದ ಕುರಿತು ಉಪನ್ಯಾಸ ನೀಡಿದರು.
ಡಾ|ಎಚ್. ತಿಪ್ಪೇರುದ್ರಸ್ವಾಮಿಯವರು ಬದುಕಿನುದ್ದಕ್ಕೂಸರಳ ಸಜ್ಜನಿಕೆ ರೂಢಿಸಿಕೊಂಡಿದ್ದರು. ಸಾರಸ್ವತಲೋಕದಲ್ಲಿ ಅನೇಕ ಕಾದಂಬರಿಗಳನ್ನು ಹಾಗೂಮೇರು ಗ್ರಂಥಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆಅಪಾರ ಕೊಡುಗೆ ನೀಡಿದ್ದಾರೆ ಎಂದರು.ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ರಚನೆಗೆರೂಪುರೇಷೆ ನೀಡಿದರು. ಸುತ್ತೂರು ಮಠದ ಶ್ರೀಗಳಆಶಯದಂತೆ ಅಖೀಲ ಭಾರತ ಶರಣ ಸಾಹಿತ್ಯಪರಿಷತ್‌ನ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.ಹಾಗಾಗಿ ಇಂದಿಗೂ ತಾಲೂಕು, ಜಿಲ್ಲಾ ಹಾಗೂರಾಜ್ಯ ಮಟ್ಟದ ಶರಣ ಸಾಹಿತ್ಯ ಪರಿಷತ್ತುಗಳುಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅತ್ಯಂತಚಿಕ್ಕ ವಯಸ್ಸಿನಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಪಡೆದ ಡಾ| ಎಚ್. ತಿಪ್ಪೇರುದ್ರಸ್ವಾಮಿಯವರುಬಸವಣ್ಣನವರ ಬಗ್ಗೆ ಬರೆದ “ಕರ್ತಾರನ ಕಮ್ಮಟ’ಎಂಬ ಕಾದಂಬರಿ ಇಂಗ್ಲಿಷ್ ಹಾಗೂ ಹಿಂದಿಭಾಷೆಗಳಿಗೆ ಅನುವಾದವಾಗಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಬಸವರಾಜ್ ಮಾತನಾಡಿ,ಡಾ| ಎಚ್. ತಿಪ್ಪೇರುದ್ರಸ್ವಾಮಿಯವರು ಸಂಪಾದಿಸಿದ”ಕರ್ನಾಟಕ ಸಂಸ್ಕೃತಿ ಸಮೀಕ್ಷೆ’ ಎಂಬ ಗ್ರಂಥಕ್ಕೆ ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ಮೈಸೂರುಭಾಗದಲ್ಲಿ ಕುವೆಂಪು ಅವರನ್ನು ಕಂಡಂತೆ ಡಾ| ಎಚ್.ತಿಪ್ಪೇರುದ್ರಸ್ವಾಮಿಯವರನ್ನು ಗೌರವಿಸುತ್ತಿದ್ದರು.ಅವರ ವಿದ್ವತ್ ಗಮನಿಸಿದ ಕುವೆಂಪು ಅವರುನೇರವಾಗಿ ಹಾಸನ ನಗರದ ಸರ್ಕಾರಿ ಕಾಲೇಜಿಗೆಉಪನ್ಯಾಸಕರನ್ನಾಗಿ ನೇಮಿಸಿದರು.
ಶರಣ ಸಾಹಿತ್ಯಹಾಗೂ ಉತ್ತಮ ಕಾದಂಬರಿಗಳನ್ನು ರಚಿಸಿದ ಡಾ|ಎಚ್. ತಿಪ್ಪೇರುದ್ರಸ್ವಾಮಿಯವರು ಸಾಹಿತ್ಯ ಕ್ಷೇತ್ರದಐಕಾನ್ ಎಂದು ಬಣ್ಣಿಸಿದರು.ವೈದ್ಯ ಡಾ| ರಾಜಕುಮಾರ್ ಮಾತನಾಡಿ,ಲಿಂಗೈಕ್ಯ ಒಡೆಯರ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ಈ ಭಾಗದಲ್ಲಿ ನಡೆದಾಡುವದೇವರೆನ್ನಿಸಿಕೊಂಡು ಭಕ್ತರ ಮನದಾಳದಲ್ಲಿಸ್ಥಿರವಾಗಿ ನೆಲೆಸಿದ್ದಾರೆ ಎಂದರು. ಎಚ್.ಎನ್.ಷಡಕ್ಷರಿ ಶಾಸ್ತ್ರಿಗಳವರದತ್ತಿ ಉಪನ್ಯಾಸವನ್ನು ಉಪನ್ಯಾಸಕ ಡಾ|ಎಚ್.ಎಂ. ನಾಗಾರ್ಜುನ ನಡೆಸಿಕೊಟ್ಟರು.ಹಿರೇಕಲ್ಮಠದ ಡಾ| ಒಡೆಯರ ಚನ್ನಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮೀಜಿ ನೇತೃತ್ವ, ರಟ್ಟಿàಹಳ್ಳಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಅಧ್ಯಕ್ಷತೆ ವಹಿಸಿದ್ದರು. ನಾಗವಂದ ಹೊರಗಿನಮಠ ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯಸ್ವಾಮೀಜಿ, ಕೋಣಂದೂರು, ಜಕ್ಕಲಿ, ಮುಷ್ಟೂರುಶ್ರೀಗಳು ಸಮ್ಮುಖ ವಹಿಸಿದ್ದರು.
ಚನ್ನಪ್ಪಸ್ವಾಮಿವಿದ್ಯಾಪೀಠದ ನಿರ್ದೇಶಕ ಕೋರಿ ಮಲ್ಲಿಕಾರ್ಜುನಪ್ಪಸ್ವಾಗತಿಸಿದರು. ಶಾಂತಾ ಸುರೇಶ್ ಹಾಗೂವಿದ್ಯಾ ಸಂತೋಷ್ ನಿರೂಪಿಸಿದರು. ಲಿಂಗೈಕ್ಯಮೃತ್ಯುಂಜಯ ಶಿವಾಚಾರ್ಯ ಸ್ವಾ,ಮೀಜಿ ಮತ್ತುಲಿಂಗೈಕ್ಯ ಒಡೆಯರ ಚಂದ್ರಶೇಖರ ಶಿವಾಚಾರ್ಯಸ್ವಾಮೀಜಿಯವರ ಕತೃì ಗದ್ದುಗೆಗಳಿಗೆಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂಮಹಾಮಂಗಳಾರತಿ ಜರುಗಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.