ಹೊನ್ನಾಳಿಯಲ್ಲಿ ವಾರಾಂತ್ಯ ಕರ್ಫ್ಯೂ ಯಶಸ್ವಿ
Team Udayavani, Jan 9, 2022, 4:42 PM IST
ಹೊನ್ನಾಳಿ: ವಾರಾಂತ್ಯ ಕಪ್ಯೂìನಿಂದಾಗಿ ಪಟ್ಟಣದಲ್ಲಿಶನಿವಾರ ಅಘೋಷಿತ ಬಂದ್ ನಿರ್ಮಾಣವಾಗಿತ್ತು.ಔಷಧ ಅಂಗಡಿಗಳು, ದಿನಸಿ ಅಂಗಡಿಗಳು, ಹಾಲುಸೇರಿದಂತೆ ಕೆಲ ಅಂಗಡಿಗಳು ತೆರೆದಿದ್ದನ್ನು ಬಿಟ್ಟರೆಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್‌ಆಗಿದ್ದವು.ಎರಡನೇ ಶನಿವಾರವಾದ್ದರಿಂದ ಎಲ್ಲಾ ರಾಜ್ಯಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿದ್ದವು.
ಕೇಂದ್ರಸರ್ಕಾರದ ಅಂಚೆ ಕಚೇರಿ, ಬಿಎಸ್‌ಎನ್‌ಎಲ್‌ಸೇರಿದಂತೆ ಇತರ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಹಳ್ಳಿಗಳಿಂದ ಜನರು ಪಟ್ಟಣಕ್ಕೆಬಾರದ ಕಾರಣ ಪಟ್ಟಣ ಬಿಕೋ ಎನ್ನುತ್ತಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸಿದವು.ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ, ನಗರಹಾಗೂ ಪಟ್ಟಣಗಳಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ಗಳು ಶನಿವಾರ ರಸ್ತೆಗೆ ಇಳಿಯಲಿಲ್ಲ.
ವಾರಾಂತ್ಯಕರ್ಫ್ಯೂ ಇದ್ದ ಕಾರಣ ಪ್ರಯಾಣಿಕರು ಮನೆಯಿಂದಹೊರಗೆ ಬರುವುದಿಲ್ಲ ಎನ್ನುವುದನ್ನು ಅರಿತ ಖಾಸಗಿಬಸ್ ಮಾಲೀಕರು ಬ ಸ್‌ಗಳನ್ನು ರಸ್ತೆಗೆ ಇಳಿಸಲಿಲ್ಲ.ಬಸ್ ಸಂಚಾರ ಆರಂಭಿಸಿದರೆ ಡೀಸೆಲ್ ಖರ್ಚುಸಹ ಹುಟ್ಟುವುದಿಲ್ಲ. ಹಾಗಾಗಿ ಬಸ್ ಸಂಚಾರಸ್ಥಗಿತಗೊಳಿಸಲಾಗಿದೆ ಎಂದು ಖಾಸಗಿ ಬಸ್‌ಮಾಲೀಕರೊಬ್ಬರು ಅಳಲು ತೋಡಿಕೊಂಡರು.
ಇನ್ನು ಕೂಲಿ ಕಾರ್ಮಿಕರು ಕೆಲಸವಿಲ್ಲದೆಪರದಾಡಿದರು. ಶ್ರೀಮಂತರು, ದೊಡ್ಡವ್ಯಾಪಾರಿಗಳು, ಸಂಬಳ ಬರುವವರು, ಸರ್ಕಾರಿನೌಕರರಿಗೆ ನಮ್ಮ ಕಷ್ಟ ಅರ್ಥವಾಗುವುದಿಲ್ಲ.ನಮ್ಮ ಉದರ ತುಂಬಬೇಕಾದರೆ ಕೂಲಿಗೆಹೋಗಲೇಬೇಕು. ಎರಡು ದಿನ ಕೂಲಿ ಇಲ್ಲದಿದ್ದರೆಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿನಿರ್ಮಾಣವಾಗುತ್ತದೆ ಎಂಬುದು ಹೆಸರು ಹೇಳಲುಇಚ್ಛಿಸದ ಕೂಲಿ ಕಾರ್ಮಿಕನೊಬ್ಬನ ನೋವು.ಸೊಪ್ಪು, ಮಾರುವವರು, ರಸ್ತೆ ಬದಿ ವ್ಯಾಪಾರಿಗಳಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.