ಹೊನ್ನಾಳಿ: ಫಸಲಿಗೆ ಬಂದಿದ್ದ 200 ಬಾಳೆಗೊನೆ ಕದ್ದೊಯ್ದ ಕಳ್ಳರು
Team Udayavani, Aug 18, 2022, 2:53 PM IST
ಹೊನ್ನಾಳಿ: ಫಸಲಿಗೆ ಬಂದಿದ್ದ 200 ಬಾಳೆಗೊನೆಗಳನ್ನು ಕೂಯ್ದು ಕದ್ದೊಯ್ದಿರುವ ಘಟನೆ ತಾಲೂಕಿನ
ನರಸಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನರಸಗೊಂಡನಹಳ್ಳಿ ಗ್ರಾಮದ ಅಶೋಕ್ ಎಂಬುವವರ ಒಂದು ಎಕರೆಯಲ್ಲಿ 750 ಬಾಳೆಗಿಡಗಳನ್ನು ಬೆಳೆಯಲಾಗಿತ್ತು. ಆ. 12ರಂದು ರಾತ್ರಿ 200 ಬಾಳೆಗೊನೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಒಂದು ಬಾಳೆಗೊನೆಯಲ್ಲಿ 15 ಕೆಜಿ ಬಾಳೆಹಣ್ಣು ಸಿಗಲಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 80ರಿಂದ 90 ರೂ. ದರ ಇದೆ. 200 ಬಾಳೆಗೊನೆಗೆ 3000 ಕೆಜಿ ಅಂದರೆ 2.40 ಲಕ್ಷ ರೂ. ಮಾರುಕಟ್ಟೆಯಲ್ಲಿ ದೊರೆಯುತ್ತಿತ್ತು.
ಕಳ್ಳರು 200 ಬಾಳೆಗೊನೆ ಹೊತ್ತೂಯ್ದಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಈ ಬಗ್ಗೆ ಹೊನ್ನಾಳಿ
ಪೊಲೀಸ್ ಠಾಣೆಗೆ ಆ. 13ರಂದೇ ದೂರು ನೀಡಿದ್ದರೂ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ತಕ್ಷಣ ಎಫ್‌ಐಆರ್ ಆದರೆ ಉಳಿದಿರುವ ಬಾಳೆಗೊನೆಯನ್ನಾದರೂ ಮಾರುಕಟ್ಟೆಯಲ್ಲಿ ಮಾರಿಬಿಡೋಣ ಎಂದರೆ ಪೊಲೀಸರು
ಪ್ರಕರಣ ದಾಖಲು ಮಾಡಿಕೊಳ್ಳುತ್ತಿಲ್ಲ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಬಾಳೆ ತೋಟದಲ್ಲಿ 200 ಬಾಳೆಗೊನೆಗಳನ್ನು ಕಳ್ಳತನ ಮಾಡಲಾಗಿದ್ದರೆ, ಭಾರೀ ಮಳೆಯಿಂದ ನಮ್ಮ ಮನೆಯ ಹಿಂಭಾಗ ಸಂಪೂರ್ಣವಾಗಿಕುಸಿದು ಬಿದ್ದಿದೆ. ಒಮ್ಮೆಲೆ ನನಗೆ ಎರಡು ಸಮಸ್ಯೆ ಎದುರಾಗಿದೆ ಎಂದು ನೋವು ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.