ಮನೆಯಿಂದ ಹೊರ ಬರುತ್ತಿಲ್ಲ ಜನ
ಕೊರೊನಾ ಭೀತಿ-ಬಿಸಿಲ ಝಳಕ್ಕೆ ಮನೆಯಲ್ಲೇ ವಾಸ್ತವ್ಯ ಪಟ್ಟಣಕ್ಕೆ ಬಾರದ ಗ್ರಾಮೀಣರು
Team Udayavani, Mar 21, 2020, 11:32 AM IST
ಹೊನ್ನಾಳಿ: ಕೊರೊನಾ ವೈರಸ್ ಭೀತಿಯಿಂದ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಜನತೆ ಮನೆಯಲ್ಲಿಯೇ ಉಳಿಯುತ್ತಿದ್ದಾರೆ. ರಸ್ತೆಗೆ ಬಂದರೆ ವೈರಸ್ ಹರಡಬಹುದೆಂಬ ಭೀತಿಯಂದ ಜನತೆ ಹೊರ ಬರಲು ಹೆದರುತ್ತಿದ್ದಾರೆ.
ಸಿನೆಮಾ, ಶಾಲಾ-ಕಾಲೇಜುಗಳು ಬಂದ್ ಮಾಡಿರುವದರಿಂದ ಗ್ರಾಮೀಣ ಭಾಗದ ಬಹುತೇಕರು ಪಟ್ಟಣಕ್ಕೆ ಬರುತ್ತಿಲ್ಲ. ಬೇರೆ ಯಾವ ಕೆಲಸಕ್ಕೆ ಬಾರದಿದ್ದರೂ ರೈತರು, ಸಾರ್ವಜನಿಕರು, ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಪ್ರತಿನಿತ್ಯ ಬ್ಯಾಂಕಿಗೆ ಬರುತ್ತಿದ್ದರು. ಆದರೆ ಕೊರೋನಾ ಭೀತಿಯಿಂದ ಅದರಲ್ಲೂ ಅರ್ಧದಷ್ಟು ಗ್ರಾಹಕರು ಬ್ಯಾಂಕಿನತ್ತ ಬರುವುದನ್ನು ನಿಲ್ಲಿಸಿದ್ದಾರೆ.
ಸ್ಯಾನಿಟೆ„ಜರ್‌ಗೆ ಗ್ರಾಹಕರ ಒತ್ತಾಯ: ಪಟ್ಟಣದಲ್ಲಿರುವ ಮೂರು ಎಟಿಎಂ ಗಳಲ್ಲಿ ಈ ವರೆಗೂ ಸ್ಯಾನಿಟೈಸರ್ ಇರಿಸಿಲ್ಲ. ಈ ಕುರಿತು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕೂಡಲೆ ಬ್ಯಾಂಕ್ ವ್ಯವಸ್ಥಾಪಕರು ಎಟಿಎಂ ನಲ್ಲಿ ಸ್ಯಾನಿಟೈಸರ್ ಇರಿಸಬೇಕು ಎಂದು ಬ್ಯಾಂಕ್ ಗ್ರಾಹಕರು ಆಗ್ರಹಿಸಿದ್ದಾರೆ.
ಮೆಚ್ಚುಗೆ: ಪ.ಪಂ. ಮುಖ್ಯಾಧಿಕಾರಿ ಎಸ್. ಆರ್. ವೀರಭದ್ರಯ್ಯ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಬೆಳಗ್ಗೆ ಹಾಗೂ ಸಂಜೆ ಪಟ್ಟಣದ ಎಲ್ಲಾ ಚರಂಡಿಗಳಿಗೆ ಡಿಡಿಟಿ ಪೌಡರ್ ಸಿಂಹಪಡಿಸುತ್ತಿದ್ದಾರೆ. ಗೂಡಂಗಡಿಗಳ ತೆರವು, ವಾರದ ಸಂತೆ ರದ್ದು ಸೇರಿದಂತೆ ಅನೇಕ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಪೊಲೀಸ್ ಸ್ಟೇಷನ್ ಖಾಲಿ: ವಿವಿಧ ಚಿಕ್ಕಪುಟ್ಟ ಜಗಳಗಳ ಕಾರಣದಿಂದ ಪೊಲೀಸ್ ಸ್ಟೇಷನ್ ಮೆಟ್ಟಿಲೇರುತ್ತಿದ್ದ ಜನರ ಸಂಖ್ಯೆಯೂ ಕಳೆದ 15 ದಿನಗಳಿಮದ ಕಡಿಮೆಯಾಗಿದೆ. ತುಂಬಾ ಅನಿವಾರ್ಯವಾದರೆ ಮಾತ್ರ ಠಾಣೆಗೆ ಬರುತ್ತಿದ್ದಾರೆ ಹೊರತು ಸುಖಾ ಸುಮ್ಮನೆ ಮೊದಲಿನಂತೆ ಬರುತ್ತಿಲ್ಲ. ಇದರಿಂದ ಪೊಲೀಸರು ತುಸು ನಿಟ್ಟಿಸಿರು ಬಿಟ್ಟಿದ್ದಾರೆ.
ಮತ್ತೊಬ್ಬನ ಮೇಲೆ ತೀವ್ರ ನಿಗಾ: ವಿದೇಶಗಳಿಂದ ಆಗಮಿಸಿರುವ ಐವರ ಜತೆಗೆ ಕೇರಳದ ಕಾಸರಗೋಡಿನಿಂದ ಬಂದಿರುವ ವ್ಯಕ್ತಿಯೊಬ್ಬರನ್ನು ಕೂಡ ಮನೆಗೆ ತೆರಳಿ ತಾಲೂಕು ವೈದ್ಯಾಧಿಕಾರಿಗಳ ತಂಡ ಪರಿಶೀಲಿಸಿದೆ. ಸ್ವಲ್ಪ ಜ್ವರ ಇದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅವರನ್ನೂ ಮನೆ ನಿಗಾವಣೆಯಲ್ಲಿ ಇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.