ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ
Team Udayavani, Jan 1, 2019, 10:39 AM IST
ದಾವಣಗೆರೆ: ಹೊಸ ಕ್ಯಾಲೆಂಡರ್ ವರ್ಷ ಬಂತೆಂದರೆ ಸಾಕು ಎಲ್ಲೆಡೆ ಮೋಜು ಮಸ್ತಿ ಸಾಮಾನ್ಯ. ಯುವಕ-ಯುವತಿಯರು, ಸ್ನೇಹಿತರೆಲ್ಲಾ ಒಂದುಗೂಡಿ ಕೇಕ್ ಕತ್ತರಿಸಿ ಕುಣಿದು-ಕುಪ್ಪಳಿಸಿ ಸಂಭ್ರಮಿಸುವುದು ವರ್ಷಾಚರಣೆ ವಿಶೇಷ. ಇನ್ನು ಹೊಸ ವರ್ಷ ಸ್ವಾಗತಿಸುವ ಸಂಭ್ರಮಕ್ಕೆ ನಗರದ ವಿವಿಧ ಬೇಕರಿಗಳಲ್ಲಿ ಗ್ರಾಹಕರ ಬೇಡಿಕೆ, ಅಪೇಕ್ಷೆ, ಅಭಿರುಚಿಯಂತೆ ಅತ್ಯಾಕರ್ಷಕ, ವೈವಿಧ್ಯಮಯ ಕೇಕ್‌ಗಳು, ಬಗೆ ಬಗೆಯ ಸಿಹಿ
ತಿನಿಸುಗಳನ್ನು ತಯಾರಿಸುವುದು ದೇವನಗರಿ ವಿಶೇಷ.
ಪ್ರತಿವರ್ಷವೂ ಆಹಾರ್-2000ನ ಬೇಕರಿಯಲ್ಲಿ ಒಂದಲ್ಲ ಒಂದು ರೀತಿ ವಿಶೇಷ ಕೇಕ್ ಪ್ರದರ್ಶನ ಮತ್ತು ಮಾರಾಟ ಮುಂದುವರಿಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ಲಂಡನ್ ಟವರ್ ಮಾದರಿ ಕೇಕ್ ಮೆಚ್ಚುಗೆಗೆ ಪಡೆದಿತ್ತು. ಈ ಬಾರಿ ಜಗತ್ತಿನ ಎರಡನೇ ಎತ್ತರದ ಮೆಲೇಷಿಯಾ ಟ್ವಿನ್
ಟವರ್, ಗುಂಡಿ ಮಹಾದೇವಪ್ಪ ವೃತ್ತ, ಭಾರತದಲ್ಲೆ ನಾಲ್ಕನೇ ಉದ್ದದ ಅಸ್ಸಾಂನ ಸೇತುವೆ ಮಾದರಿಯ ಕೇಕ್ ಸಿದ್ದಪಡಿಸಿ, ಪ್ರದರ್ಶನಕ್ಕಿಡಲಾಗಿದೆ.
ಬೇಕರಿ ನುರಿತ ಕೇಕ್ ತಯಾರಕರು 20 ದಿನಗಳಲ್ಲಿ ಅದ್ಭುತ ಕಲಾಕೃತಿಗಳನ್ನು ಥರ್ಮಕೋಲ್, ಕೇಕ್ ಬಳಸಿ ವಿಶೇಷವಾಗಿ ಟವರ್, ವೃತ್ತ, ಸೇತುವೆ ತಯಾರಿಸಿದ್ದಾರೆ.
ಮೆಲೇಷಿಯಾ ಟ್ವಿನ್ ಟವರ್ ಐದೂವರೆ ಅಡಿ ಅಗಲ, ಆರೂವರೆ ಅಡಿ ಎತ್ತರವಿದ್ದರೆ, ಸೇತುವೆ ಆರೂವರೆ ಅಡಿ ಅಗಲ, 2 ಅಡಿ ಎತ್ತರವಿದೆ. ಈ ಕೇಕ್ ಪ್ರದರ್ಶನವು ಸೋಮವಾರದಿಂದ ಬುಧವಾರದ ವರೆಗೆ ಸಾರ್ವಜನಿಕರ ವೀಕ್ಷಣೆ ಅವಕಾಶ ಕಲ್ಪಿಸಲಾಗಿದೆ ಎಂದು ಬೇಕರಿ ಮಾಲೀಕ
ರಮೇಶ್ ಮಾಹಿತಿ ನೀಡಿದರು.
ಕೇಕ್ ಮಾದರಿ: ಮಾಮೂಲಿ ಕೇಕ್‌ಗಳಿಗಿಂತ ಹಲವು ಬಗೆಯ ವಿನ್ಯಾಸದಲ್ಲಿ ಅಂದರೆ, ಗೊಂಬೆ, ಚೋಟಾ ಭೀಮ್, ಮೀನು, ಬೋಟ್, ಹೂ ಬುಟ್ಟಿ, ತಬಲ, ಹಲಸು, ಕಲ್ಲಂಗಡಿ ಹಣ್ಣು, ಚಿಟ್ಟೆ, ಹಾರ್ಮೋನಿಯಂ, ಗಿಟಾರ್, ಕಾರ್, ಹಾರ್ಟ್ ಹೀಗೆ ಅನೇಕ ಮಾದರಿ ಕೇಕ್‌ಗಳನ್ನು ಆಹಾರ್ -2000 ಪ್ರದರ್ಶನದಲ್ಲಿ ಕಾಣಬಹುದಾಗಿದೆ.
ಇದಲ್ಲದೇ ನಗರದ ಬಹುತೇಕ ಬೇಕರಿಗಳಲ್ಲಿ ಮಾಮೂಲಿ ಕ್ರೀಮ್‌ಕೇಕ್, ಕೋಲ್ಡ್‌ಕೇಕ್‌ಗಳನ್ನೇ ಬಗೆಬಗೆಯ ಚಿತ್ತಾರಗಳಲ್ಲಿ ಪ್ರದರ್ಶನಕ್ಕಿಡಲಾಗಿದೆ. ಜನರು ಹೊಸ ವರ್ಷಾಚರಣೆಯ ಸಂಭ್ರಮದ 2 ರಿಂದ 3 ದಿನಗಳ ಮುಂಚೆಯೇ ಆರ್ಡ್‌ರ್ ಕೊಟ್ಟು ಕೇಕ್‌ಗಳನ್ನು ಬುಕ್ಕಿಂಗ್ ಮಾಡಿದ್ದಾರೆ.
ಬೆಣ್ಣೆನಗರಿಯಲ್ಲಿ ಈ ಬಾರಿ ಎಂದೂ ಇಲ್ಲದ ಪೊಲೀಸ್ ಬಿಗಿಭದ್ರತೆಯ ನಡುವೆಯೂ ಯುವಕರು ಮೋಜ್ ಮಸ್ತಿ ಮಾಡಿ ಸಂಭ್ರಮಿಸಿದರೆ, ಯುವತಿಯರು, ಮಹಿಳೆಯರು, ಮಕ್ಕಳು ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕೇಕ್‌ಗಳನ್ನು ಕತ್ತರಿಸಿ, ಹೊಸ ವರ್ಷ ಸ್ವಾಗತಿಸಿ, ಸಂಭ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.