ಭೂ ಸುಧಾರಣೆ ಕಾಯ್ದೆ ಜನೋಪಕಾರಿ
Team Udayavani, Apr 6, 2017, 2:32 PM IST
ಚನ್ನಗಿರಿ: ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದ್ದ ತಾಂಡಾ, ದೊಡ್ಡಿ ಪಾಳ್ಯ, ಹಟ್ಟಿ, ಕಾಲೋನಿಯಂತಹ ದಾಖಲೆ ಇಲ್ಲದ ಜನವಸತಿಗಳನ್ನು ಇನ್ನೂ ಮುಂದೆ ಕಂದಾಯ ಗ್ರಾಮಗಳನ್ನಾಗಿಸುವ ಮಹತ್ವದ ವಿಧೇಯಕವನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿರುವುದು ಹರ್ಷ ತಂದಿದೆ ಎಂದು ಮಾಯಕೊಂಡ ವಿಧಾನ ಸಭಾ ಕ್ಷೇತ್ರ ಶಾಸಕ ಕೆ. ಶಿವಮೂರ್ತಿ ತಿಳಿಸಿದ್ದಾರೆ.
ಪಟ್ಟಣ ತಾಲೂಕು ಕಚೇರಿ ಸಭಾಂಗಣದಲ್ಲಿ ವಿಧೇಯಕ ಅಂಗೀಕಾರಕ್ಕೆ ನಿರಂತರ ಒತ್ತಡ ಹಾಕಿ ಜಾರಿಗೆ ತರುವಲ್ಲಿ ಶ್ರಮಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕೆ. ಶಿವಮೂರ್ತಿ ನಾಯಕರಿಗೆ ಸನ್ಮಾನವನ್ನು ಮಾಡಿ ಗೌರವಿಸಿದರು. ಈ ವೇಳೆ ಮಾತನಾಡಿದ ಶಾಸಕ ಕೆ. ಶಿವಮೂರ್ತಿ ನಾಯ್ಕ, ವಿಧಾನ ಸೌಧದಲ್ಲಿ ಭೂ ಸುಧಾರಣೆ ಕಾಯ್ದೆಯ ಬಗ್ಗೆ ವಿಷಯ ಪ್ರಸ್ತಾಪಿಸುತ್ತಿದಂತೆ ಪ್ರತಿಸಾರಿಯೂ ಇವನೊಬ್ಬ ಹುಚ್ಚ ಎನ್ನುತ್ತಿದ್ದರು.
ಇದನ್ನು ಜಾರಿ ಮಾಡುವಂತೆ ನಾನು ಒತ್ತಡ ಹೇರಿದ ಪರಿಣಾಮ, ವಿಧೇಯಕ ಅಂಗೀಕಾರವಾಗಿದೆ. ನನ್ನ ಕಾನೂನು ಹೋರಾಟವನ್ನು ಕಾಂಗ್ರೆಸ್ ಸರ್ಕಾರ ಮನ್ನಿಸಿದೆ. ರಾಜ್ಯದಲ್ಲಿ ಸುಮಾರು 58 ಸಾವಿರ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕರ್ನಾಟಕ ಭೂ ಸುಧಾರಣೆ ಕಾಯ್ದೆಯಾಗಿದೆ. ಇದರಲ್ಲಿ ವಾಸಿಸುವವನೇ ಮನೆಯ ಒಡೆತನ ಕೊಡುವ ಮಹತ್ವದ ವಿಧೇಯಕವಾಗಿದೆ ಎಂದರು.
ಈ ವಿದೇಯಕದಿಂದ ಸುಮಾರು 5 ಲಕ್ಷ ಕುಟುಂಬಗಳಿಗೆ ದಾಖಲಾತಿಗಳು ದೊರೆಯಲ್ಲಿವೆ. ಇಲ್ಲಿಯವರೆಗೆ ಆ ಕುಟುಂಬಗಳು ಪರಿಪೂರ್ಣವಾಗಿ ಸರ್ಕಾರಿ ಸೌಲಭ್ಯಗಳಿಲ್ಲದೆ ವಂಚನೆಗೆ ಒಳಪಟ್ಟಿದ್ದವು. ವಿದೇಯಕ ಮಂಡನೆಗೆ 60ಕ್ಕೂ ಹೆಚ್ಚು ಶಾಸಕರು ನನ್ನ ಜತೆ ಧ್ವನಿ ಗೂಡಿಸಿದ್ದರು. ಅದರ ಪರಿಣಾಮ ಸುವರ್ಣವಕಾಶದಲ್ಲಿ ಬರೆದಿಡುವಂತಹ ಮಹತ್ವದ ಯೋಜನೆ ಇದಾಗಿದೆ ಎಂದರು.
ಭೂ ಸುಧಾರಣೆ ಕಾಯ್ದೆ 1961ಕ್ಕೆ ತಿದ್ದುಪಡಿಗೊಳಿಸಿ ಇದರಲ್ಲಿ ರಾಜ್ಯದಲ್ಲಿರುವ 58 ಸಾವಿರ ಗೊಲ್ಲರಹಟ್ಟಿ, ಲಂಬಾಣಿ ತಾಂಡಾ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರಹಟ್ಟಿ, ಮಜಾರೆ ಗ್ರಾಮ, ದೊಡ್ಡಿಪಾಳ್ಯ, ಕ್ಯಾಂಪ್, ಗೌಳಿ ದೌಡ್ಡಿ, ಕಾಲೋನಿ ಅಂತಹ ದಾಖಲೆ ಇಲ್ಲದ ಜನವಸತಿ ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸಿ ಸರ್ಕಾರದ ಎಲ್ಲ ಸವಲತ್ತುಗಳನ್ನು ದೊರೆಯವಂತೆ ಮಾಡುವುದು ಈ ವಿಧೇಯಕದ ಪ್ರಮುಖಾಂಶವಾಗಿದೆ ಎಂದರು. ಕಾಂಗ್ರೆಸ್ ಮುಖಂಡರಾದ ಟಿ. ಮಹೇಶ್ವರಪ್ಪ, ಬಸವರಾಜಪ್ಪ, ಶಿವಗಾರಯ್ಯ, ಸುಣಿಗೆರೆ ಮಲ್ಲನಾಯ್ಕ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್ ಜೋಶಿ
MUST WATCH
ಹೊಸ ಸೇರ್ಪಡೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Ambulance ಇಂಜಿನ್ ಗೆ ಬೆಂಕಿ-ಆಕ್ಸಿಜನ್ ಸಿಲಿಂಡರ್ ಸ್ಫೋಟ;ಗರ್ಭಿಣಿ ಪ್ರಾಣಾಪಾಯದಿಂದ ಪಾರು!
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.