Election 2023; ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ…: ಮಾಡಾಳ್ ವಿರೂಪಾಕ್ಷಪ್ಪ ಪುತ್ರ

50 ಸಾವಿರ ಮಂದಿ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಲು ಬರುತ್ತೇನೆ...!!

Team Udayavani, Apr 16, 2023, 8:42 PM IST

1-ssddsadas

ಚನ್ನಗಿರಿ: ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯದಂತೆ ಕಾರ್ಯಕರ್ತರು ಧೈರ್ಯ ನೀಡುತ್ತಿದ್ದಾರೆ, ಆ ಕಾರಣ ಎ.20, ಗುರುವಾರ 50 ಸಾವಿರ ಜನ ಕಾರ್ಯಕರ್ತರೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಮಾಡಾಳ್ ಮಲ್ಲಿಕಾರ್ಜುನ್ ಹೇಳಿದ್ದಾರೆ.

ಮಾಡಾಳ್ ಗ್ರಾಮದಲ್ಲಿ ನೇತೃತ್ವದಲ್ಲಿ ಕರೆಯಲಾಗಿದ್ದ,ಸ್ವಾಭಿಮಾನಿ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ನಮಗೆ ಟಿಕೆಟ್ ನೀಡದೇ ಇರುವುದು ನೋವಿನ ಸಂಗತಿ, ಪಕ್ಷದಲ್ಲಿ ನಾನೊಬ್ಬ ಪ್ರಾಮಾಣಿಕ ಕಾರ್ಯಕರ್ತನಾಗಿದ್ದು, ಪಕ್ಷವು ಅದನ್ನು ಪರಿಗಣಿಸಿ ಟಿಕೆಟ್ ಕೊಡಬೇಕಿತ್ತು, ಚನ್ನಗಿರಿಯ ಬಿಜೆಪಿ ಅಭ್ಯರ್ಥಿಯನ್ನು ಮಾಧ್ಯಮಗಳಲ್ಲಿ ಚನ್ನಗಿರಿಯ ಮೋದಿ ಎಂದು ತೋರಿಸುತಿರುವುದು ಸರಿಯಲ್ಲ. ಒಬ್ಬ ಪತ್ರಕರ್ತ ಮಾರಾಟವಾದರೆ ಸಾವಿರ ಭಯೋತ್ಪಾದಕರಿಗೆ ಸಮ ಎಂಬುದನ್ನು ಡಾ. ಬಿಆರ್ ಅಂಬೇಡ್ಕರ್ ಅವರು ಹೇಳಿದ್ದಾರೆ ಆದರಿಂದ ನಿಜಾಂಶವನ್ನು ತೋರಿಸುವ ಕೆಲಸವನ್ನು ಮಾಡಬೇಕು ಎಂದರು.

ಇದೇ ತಿಂಗಳು 20ರಂದು 50,000 ಜನಗಳ ಜತೆ ಬಂದು ನಾಮಪತ್ರವನ್ನು ಸಲ್ಲಿಸುತ್ತಿದ್ದೇನೆ ಅದನ್ನು ನೋಡಿ ಎಲ್ಲ ಪಕ್ಷದವರು ಸೋಲಿನ ಭಯವನ್ನು ಇಟ್ಟುಕೊಂಡು ಚುನಾವಣ ಕಣದಿಂದ ಹಿಂದೆ ಸರಿಯುತ್ತಾರೆ. ನಮ್ಮ ತಂದೆ ಮಾಡಿರುವಂತಹ ಕೆಲಸಗಳು ತಾಲೂಕಿನಲ್ಲಿ ಅರ್ಧಕ್ಕೆ ನಿಂತಿರುವ ಕೆಲಸಗಳನ್ನು ಪೂರ್ಣಗೊಳಿಸುವ ನಾವೇ ಮತ್ತೆ ಅಧಿಕಾರಕ್ಕೆ ಬರಬೇಕು ಇಲ್ಲದಿದ್ದರೆ ಅವುಗಳನ್ನು ಯಾರೂ ಕೂಡ ಜಾರಿಗೆ ತರುವುದಿಲ್ಲ ಎಂದರು.

ನಮ್ಮ ತಂದೆಯವರು ಎರಡು ಬಾರಿ ಶಾಸಕರಾದ ಮೇಲೆ ತಾಲೂಕಿನ ಚಿತ್ರಣವನ್ನು ಬದಲು ಮಾಡಿದ್ದಾರೆ. ಯಾವ ಜಾತಿಗೂ ಮೋಸವಾಗದೆ ರೀತಿಯಲ್ಲಿ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದಂತಹ ಪ್ರಾಮಾಣಿಕ ವಿರೂಪಾಕ್ಷಪ್ಪ ಅಂತವರಿಗೆ ಕುತಂತ್ರದಿಂದ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ ಎಂದರು.

ನಮ್ಮ ಕುಟುಂಬಕ್ಕೆ ಕೊಟ್ಟಂತ ನೋವು ಯಾರಿಗೂ ದೇವರು ಕೊಡಬಾರದು. ನಾವು ಚುನಾವಣೆಗೆ ಸ್ಪರ್ಧಿಸಬಾರದು ಎಂದು ತೀರ್ಮಾನಿಸಿದ್ದೇವೆ. ಆದರೆ ತಾಲೂಕಿನ ಜನರು ಮನೆಗೆ ಬಂದು ನೀವು ಚುನಾವಣೆಗೆ ಸ್ಪರ್ಧಿಸಿದೆ ಇದ್ದರೆ ನಾವು ಅನಾಥರಾಗುತ್ತೇವೆ ತಾಲೂಕು ಮತ್ತೊಂದು ವರ್ಷ ಹಿಂದಕ್ಕೆ ಹೋಗುತ್ತದೆ ನಿಮ್ಮ ಜೊತೆ ನಾವಿದ್ದೇವೆ ಇಲ್ಲದಿದ್ದರೆ ನಾವು ಬದುಕುವುದಿಲ್ಲ ಎಂಬ ಮಾತು ಕೇಳಿ ಬಂದಾಗ ತಾಲೂಕಿನ ಹಿರಿಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರನ್ನು ಮತ್ತು ಕುಟುಂಬಸ್ಥರು ಕೇಳಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.

ತಾಲೂಕು ನೋಡುವುದಕ್ಕೆ ಎಷ್ಟು ಅಭಿವೃದ್ಧಿ ಹೊಂದಿದೆ ಆದರೆ ಹಿಂದೆ ಯಾರ ಶ್ರಮ ಇದೆ ಎಂಬುವುದು ತಾಲೂಕಿನ ಮತದಾರ ಬಂಧುಗಳಿಗೆ ಗೊತ್ತು. ಯಾವ ಪಕ್ಷದ ಕಾರ್ಯಕರ್ತರನ್ನು ನಾವು ಟೀಕೆ ಮಾಡುವುದಿಲ್ಲ ನಮ್ಮ ಅಭಿವೃದ್ಧಿ ನಮ್ಮ ತಂದೆಯವರ ಮೇಲೆ ಇರುವ ಪ್ರೀತಿ ನಮ್ಮನ್ನು ಗೆಲ್ಲಿಸುತ್ತದೆ ಎಂದರು.

ಸಭೆ ಒಳಗೆ ಬಂದಿರುವಂತಹ ಎಲ್ಲಾ ನನ್ನ ಆತ್ಮೀಯ ಬಂಧುಗಳಲ್ಲಿ ಕೇಳಿಕೊಳ್ಳುವುದೇನೆಂದರೆ ಇಲ್ಲಿ ನಿಮ್ಮ ಪರವಾಗಿ ಇರುತ್ತೇನೆ ಎಂದು ಕೈಯನ್ನು ಎತ್ತಿ ಹೋಗಿ ಬೇರೆಯವರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಮತವನ್ನು ಅವರಿಗೆ ಹಾಕಿದರೆ ಮಾಡಾಳು ಕುಟುಂಬ ವಿಷ ಕುಡಿಬೇಕಾಗುತ್ತದೆ ಎಂದು ಕಣ್ಣೀರಾಗುತ್ತ ಹೇಳಿದರು.

75 ವರ್ಷಗಳ ನಮ್ಮ ತಂದೆಯವರ ರಾಜಕೀಯ ಜೀವನದಲ್ಲಿ ಯಾವ ಪಕ್ಷದವರಿಗೆ ಆಗಲಿ ಯಾವೊಬ್ಬ ಕಾರ್ಯಕರ್ತನೆಯಾಗಲಿ ಮನಸ್ಸಿಗೆ ನೋವು ಮಾಡದ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ದೀನ ದಲಿತರ ಉದ್ಧಾರವನ್ನು ಮಾಡಿದ್ದೇವೆ. ಎಲ್ಲಾ ಜಾತಿ ಜನಾಂಗಕ್ಕೆ ಸಮುದಾಯ ಭವನವನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ. ಚನ್ನಗಿರಿಯ ಪಟ್ಟಣದ ಒಳಚರಂಡಿ ವ್ಯವಸ್ಥೆಯನ್ನು 50 ವರ್ಷದ ಮುಂಜಾಗ್ರತೆ ಇಟ್ಟುಕೊಂಡು ಎಕ್ಸಲೆಂಟ್ ಮಾಡಿದ್ದೇವೆ. ಇಂತಹ ಎನ್ನುವ ಅನೇಕ ಯೋಜನೆಗಳು ಅರ್ಧದಲ್ಲೇ ಇವೆ ಅವುಗಳನ್ನು ಪೂರ್ಣ ಮಾಡುವ ಮತ್ತು ಜನರ ಸಹೋದರತೆ ಕಾಪಾಡುವ ನಿಟ್ಟಿನಲ್ಲಿ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.

ಮಾಡಾಳ್ ಮಲ್ಲಿಕಾರ್ಜುನ್ ರವರ ತಾಯಿ ಲೀಲಾವತಿ ವಿರುಪಾಕ್ಷಪ್ಪ ಮಾತನಾಡಿ. ನನ್ನ ಗಂಡನನ್ನು ಎರಡು ಬಾರಿ ಆಯ್ಕೆ ಮಾಡಿದ್ದೀರಿ ನಮ್ಮ ಕುಟುಂಬ ಕಷ್ಟದಲ್ಲಿದ್ದಾಗ ಬಂದು ನನಗೆ ಧೈರ್ಯವನ್ನು ತುಂಬಿದ್ದೀರಿ ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ಮಾಡಿಕೊಡಿ ಅದಕ್ಕೆ ನನ್ನ ಮಗನನ್ನು ಸೇವೆಗಾಗಿ ನಿಮ್ಮ ಮಡಲಿಗೆ ಹಾಕುತ್ತಿದ್ದೇನೆ. ಇನ್ಮೇಲೆ ಮಲ್ಲಿಕಾರ್ಜುನ್ ನಮ್ಮ ಮಗ ಅಲ್ಲ ನಿಮ್ಮ ಸೇವಕ ಎಂದು ಹೇಳಿದರು.

ಈ ವೇಳೆ ಪ್ರವೀಣ್ ಕುಮಾರ್ ವಿರುಪಾಕ್ಷಪ್ಪ. ರಾಣಿ ಮಲ್ಲಿಕಾರ್ಜುನ್. ಲೀಲಾವತಿ ವಿರೂಪಾಕ್ಷಪ್ಪ. ಟಿವಿ ರಾಜು ಪಟೇಲ್. ನಲ್ಲೂರು ಶಿವಪ್ಪ. ಮದಿಕೆರೆ ಸಿದ್ದೇಶ್. ಮಂಗೇನ್ಹಳ್ಳಿ ಲೋಹಿತ್. ಶ್ರೀನಿವಾಸ್. ಆರ್ ಎಂ ರವಿ. ರುದ್ರೇಶ್ ಗೌಡ್ರು. ಇಟ್ಟಿಗೆ ಹೇಮಂತ್. ದಿಗ್ಗೆನಹಳ್ಳಿ ನಾಗರಾಜ್. ರುದ್ರೇ ಗೌಡ್ರು. ಹಾಗೂ ಉಪಸ್ಥಿತರು ಹಾಜರಿದ್ದರು.

ಟಾಪ್ ನ್ಯೂಸ್

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-lllaa

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

Areca

Arecanut Growers: ಎರಡು ವರ್ಷಕ್ಕೊಮ್ಮೆ ಅಡಿಕೆ ಫ‌ಸಲು ಏರಿಳಿತ

GV-

New Bill: ಇನ್ನು ಪಂಚಾಯತ್‌ರಾಜ್‌ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ

Pashu-Sanjevani

Mangaluru: ಕರಾವಳಿ ಹೈನುಗಾರರ ಮನ ಗೆದ್ದ ಮನೆ ಬಾಗಿಲಿಗೆ ಪಶು ಸಂಜೀವಿನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

1—-kumr-renuka

BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ

DVG-Duggamma

Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ

16-bjp

BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

2-mng

Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

1-shirva

Shirva: ಏಷ್ಯನ್‌ ಜೂನಿಯರ್‌ ವೇಟ್‌ಲಿಫ್ಟಿಂಗ್‌ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್‌.ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.