ಹಂದಿ ಸಾಕಾಣಿಕೆಗೆ ಸರ್ಕಾರಿ ಜಾಗ ಗುರುತಿಸಿ
Team Udayavani, Dec 16, 2020, 6:42 PM IST
ದಾವಣಗೆರೆ: ಹಂದಿ ಸಾಕಾಣಿಕೆಗೆ ನಗರದ ಹೊರವಲಯದಲ್ಲಿ ಎರಡರಿಂದ ಐದು ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮಹಾನಗರಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಂದಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಇಂದು ಸಭೆ ನಡೆಸಲಾಗಿದೆ. ಹಂದಿಗಳು ಎಲ್ಲೆಂದರಲ್ಲಿ ಓಡಾಡುವುದರಿಂದ ನಾಗರಿಕರಿಗೆ ಹಲವು ಕಾಯಿಲೆಗಳಾದ ಡೆಂಘೀ, ಜಪಾನಿಸ್ ಎನ್‌ಸೆಫಲಿಟಿಸ್ ಹಾಗೂ ಹಂದಿ ಜ್ವರದಂತಹ ರೋಗಗಳು ಬರಲಿವೆ. ಒಮ್ಮೊಮ್ಮೆ ದಿಢೀರನೆ ನುಗ್ಗುವ ಹಂದಿಗಳಿಂದ ದ್ವಿಚಕ್ರ ವಾಹನ ಸವಾರರು ರಸ್ತೆಗಳ ಮೇಲೆ ಬಿದ್ದು ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಹಾಗಾಗಿ ಹಂದಿ ಮಾಲೀಕರು ತಮ್ಮ ಸ್ವಂತ ಸ್ಥಳಗಳಲ್ಲಿ ಹಂದಿ ಸಾಕಾಣಿಕೆ ಮಾಡುವುದು ಸೂಕ್ತ ಎಂದರು.
ದಾವಣಗೆರೆ ನಗರದಲ್ಲಿ ಹೆಚ್ಚಿರುವ ಹಂದಿಗಳನ್ನು ವೈಜ್ಞಾನಿಕವಾಗಿ ಸಾಕಾಣಿಕೆ ಮಾಡುವಂತೆ ಹಂದಿ ಮಾಲೀಕರಿಗೆ ತಿಳಿಸಿದ ಜಿಲ್ಲಾಧಿಕಾರಿ,ಬಿಡಾಡಿ ಹಂದಿಗಳು ರಸ್ತೆಯ ಮೇಲೆ ತೆರೆದ ಜಾಗಗಳಲ್ಲಿ ಹೆಚ್ಚಾಗಿ ಓಡಾಡಲುಸಾರ್ವಜನಿಕರೂ ಕಾರಣರಾಗಿದ್ದಾರೆ. ತಮ್ಮಮನೆಗಳಲ್ಲಿ ಉಳಿದ ತ್ಯಾಜ್ಯಗಳನ್ನು ಸರಿಯಾಗಿವಿಲೇವಾರಿ ಮಾಡದೇ ರಸ್ತೆ ಬದಿ ಬಿಸಾಕುವುದರಿಂದ ಹಂದಿಗಳಿಗೆ ಆಹಾರ ಸಿಕ್ಕಂತಾಗುತ್ತದೆ. ಈ ಆಹಾರಕ್ಕಾಗಿ ಹಂದಿಗಳು ಓಡಾಡುತ್ತವೆ. ನಗರದಲ್ಲಿ ಕಾಣುವಷ್ಟುಹಂದಿಗಳು ಹೊಸ ಬಡಾವಣೆಗಳಲ್ಲಿ ಕಾಣುವುದಿಲ್ಲ. ಏಕೆಂದರೆ ಅಲ್ಲಿ ತ್ಯಾಜ್ಯದ ಆಹಾರ ಎಲ್ಲೆಂದರಲ್ಲಿ ಸಿಗುವುದಿಲ್ಲ. ಆದ್ದರಿಂದ ಹಂದಿಗಳ ಹಾವಳಿ ತಪ್ಪಿಸುವವಿಚಾರದಲ್ಲಿ ಹಂದಿ ಮಾಲೀಕರು, ಸಾರ್ವಜನಿಕರು, ಮಹಾನಗರಪಾಲಿಕೆಯವರು ಎಲ್ಲರೂ ಒಮ್ಮತದಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಹಂದಿ ಮಾಲೀಕರ ಸಂಘದ ಅಧ್ಯಕ್ಷ ಆನಂದಪ್ಪ ಮಾತನಾಡಿ, ನಾವು ಈಗಾಗಲೇಮಹಾನಗರಪಾಲಿಕೆಯಿಂದ ಸ್ಥಳ ಕೇಳಿದ್ದೇವೆ. ಮಹಾನಗರಪಾಲಿಕೆಯವರು ಸಂಗ್ರಹಿಸುವ ತ್ಯಾಜ್ಯದಿಂದ ಉಳಿಯುವ ಆಹಾರಗಳನ್ನು ಕೊಟ್ಟರೆ ನಮಗೆ ಸಹಾಯವಾಗುತ್ತದೆ. ನಮ್ಮ ಜನಾಂಗ ಇದೇ ಕಸುಬನ್ನು ಅವಲಂಬಿಸಿದೆ. ಈ ಹಿಂದೆ ಪೊರಕೆ ಹಾಗೂ ಬುಟ್ಟಿಗಳನ್ನು ಹೆಣೆಯುತ್ತಿದ್ದರು. ಆದರೆಪೊರಕೆ, ಬುಟ್ಟಿಗಳಿಗೆ ಕಚ್ಚಾ ವಸ್ತುಗಳು ದೊರೆಯದೇ ಇರುವುದರಿಂದ ಹಂದಿ ಸಾಕಾಣಿಕೆಯೊಂದೇ ನಮಗೆ ಉಪ ಜೀವನವಾಗಿದೆ. ರಾಜ್ಯದಲ್ಲಿ ಸುಮಾರು 25 ಲಕ್ಷ ಮಂದಿ ಇದೇ ಕಸುಬನ್ನು ಮಾಡಿಕೊಂಡಿರುತ್ತೇವೆ.ನಮಗೂ ಸಾರ್ವಜನಿಕರ ಆರೋಗ್ಯದ ರಕ್ಷಣೆಯ ಅರಿವಿದೆ. ನಗರ ಅಂದವಾಗಿರಬೇಕೆಂಬುದು ನಮ್ಮ ಆಸೆಯೂ ಆಗಿದೆ. ಆದ್ದರಿಂದ ನಗರಕ್ಕೆ ಹತ್ತಿರವಾಗಿರುವ ಸ್ಥಳದಲ್ಲಿ ಜಾಗ ಕೊಟ್ಟರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ತಹಶೀಲ್ದಾರರ ಸಹಾಯದಿಂದ ನಗರದ ಹೊರ ವಲಯದಲ್ಲಿ ಪ್ರತ್ಯೇಕ ಸ್ಥಳ ಗುರುತಿಸಿ ಹಂದಿಮಾಲೀಕರಿಗೆ ನೀಡಿ ಆದಷ್ಟು ಬೇಗ ಸಮಸ್ಯೆಗೆ ಇತಿಶ್ರೀ ಹಾಡಿರಿ ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಪ್ರಸನ್ನಕುಮಾರ್, ಜಯಮ್ಮ ಗೋಪ್ಯಾ ನಾಯ್ಕ, ಡಿವೈಎಸ್‌ಪಿ ನಾಗೇಶ್ ಐತಾಳ್, ಪಾಲಿಕೆ ಆರೋಗ್ಯಾಧಿಕಾರಿ ಸಂತೋಷ್, ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಈ ಹಿಂದೆ ಹಂದಿ ಸಾಕಾಣಿಕೆಗೆ ಜಾಗ ಗುರುತಿಸಲಾಗಿತ್ತು. ಆದರೆ ಆ ಸ್ಥಳ ದೂರವಾಗುತ್ತದೆಂದು ಹಂದಿಮಾಲೀಕರು ನಿರಾಕರಿಸಿದ್ದರು. ಮತ್ತೂಮ್ಮೆ ಬೇರೆ ಸ್ಥಳ ಗುರುತಿಸಿಕೊಡಲಾಗುವುದು. ನಾಗರಿಕರ ಆರೋಗ್ಯ ಹಾಗೂ ಸ್ಮಾರ್ಟ್ ಸಿಟಿ ಅಂದ ಹೆಚ್ಚಿಸಲು ಹಂದಿ ಮಾಲೀಕರು ಸಹಕರಿಸಬೇಕು. – ಬಿ.ಜಿ. ಅಜಯಕುಮಾರ್, ಮೇಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.