9 ಚಿನ್ನದ ಪದಕ ಪಡೆದ ಸುಚಿತ್ರಾಗೆ ಐಇಎಸ್ ಕನಸು
Team Udayavani, Mar 19, 2019, 7:06 AM IST
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನ ಸಂಗಮ ಆವರಣದಲ್ಲಿ ಸೋಮವಾರ ನಡೆದ 18ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರು ಚಿನ್ನದ ಪದಕ ಪಡೆದು ಮಿಂಚಿದರು. ದಾವಣಗೆರೆಯ ಜೈನ್ ಇನ್‌ಸ್ಟಿಟ್ಯೂಟ್ ಆಪ್
ಟೆಕ್ನಾಲಾಜಿಯ ಬಿಇ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಮೊದಲ ರ್‍ಯಾಂಕ್ ಗಳಿಸಿದ ಸುಚಿತ್ರಾ ಎನ್. 9 ಚಿನ್ನದ ಪದಕ ಪಡೆದಿದ್ದಾಳೆ.
ನಿರಂತರ ಶ್ರಮದಿಂದ ಇಷ್ಟೊಂದು ಸಾಧನೆ ಮಾಡಿರುವ ಸುಚಿತ್ರಾ ಐಇಎಸ್(ಭಾರತೀಯ ಇಂಜಿನಿಯರಿಂಗ್ ಸರ್ವೀಸ್) ಪರೀಕ್ಷೆಗೆ ತಯಾರಿ ನಡೆಸಿದ್ದಾಳೆ. ತಂದೆ ನಟರಾಜನ್ ಬಿ. ಹಾಗೂ ತಾಯಿ ಸೀತಾ ದಂಪತಿಯ ಮಗಳು ಸುಚಿತ್ರಾ ಹಾಗೂ ಮಗ ಸುನೀಲ ಡಿಪ್ಲೊಮಾ ಓದುತ್ತಿದ್ದಾನೆ. ಮಗಳ ಸಾಧನೆಗೆ ಪಾಲಕರು ಸಂತಸ ಪಟ್ಟಿದ್ದಾರೆ. ಸದ್ಯ ಬಾಗಲಕೋಟೆಯಲ್ಲಿ ಎಂ.ಟೆಕ್ ಕಲಿಯುತ್ತಿದ್ದು, ಐಇಎಸ್ ಮಾಡಬೇಕೆಂಬ ಕನಸು ಇಟ್ಟುಕೊಂಡಿದ್ದಾರೆ.
ಮೂವರೂ ಹೆಣ್ಮಕ್ಳೂ ಎಂಜಿನಿಯರ್
ಹೆಣ್ಣು ಹುಟ್ಟಿದರೆ ಮೂಗು ಮುರಿಯತ್ತಿರುವ ದಿನಗಳಲ್ಲಿ ಮೂವರೂ ಹೆಣ್ಣು ಮಕ್ಕಳಿಗೆ ಎಂಜಿನಿಯರಿಂಗ್ ಕಲಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ನಿವೃತ್ತ ಬ್ಯಾಂಕ್ ಮ್ಯಾನೇಜರ್ ರಾಮಪ್ಪ ಹಾಗೂ ಸುವರ್ಣ ದಂಪತಿ ಮೂರನೇ ಮಗಳೇ ಮಧುಶ್ರೀ ದಾವಣಗೆರೆಯ ಬಾಪೂಜಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಬಿಇ ಸಿವಿಲ್ ವಿಭಾಗದಲ್ಲಿ ರ್‍ಯಾಂಕ್ ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ. ಮೊದಲನೇ ಮಗಳು ಕಾವ್ಯಶ್ರೀ, ಎರಡನೇ ಮಗಳು ವಿದ್ಯಾಶ್ರೀ ಹಾಗೂ ಮೂರನೇಯವಳು ಮಧುಶ್ರೀ. ಮೂವರೂ ಸಿವಿಲ್ ಎಂಜಿನಿಯರಿಂಗ್ ಓದಿದ್ದೇ ವಿಶೇಷ. ಪಾಲಕರ ಹಾಗೂ ಪ್ರಾಧ್ಯಾಪಕರ ಸಹಾಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಐಇಎಸ್ ಓದಬೇಕೆಂಬ ಕನಸು ಇದೆ. ಶೀಘ್ರವೇ ಅದನ್ನೂ ಮಾಡುತ್ತೇನೆ ಎನ್ನುತ್ತಾರೆ ಮಧುಶ್ರೀ
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.