ವೃತ್ತಿಯಲ್ಲಿ ಶ್ರದ್ಧೆ-ಆಸಕ್ತಿ-ಶ್ರಮ ಇದ್ದರೆ ಸೇವೆ ಸಾರ್ಥಕ
Team Udayavani, Feb 22, 2019, 7:35 AM IST
ದಾವಣಗೆರೆ: ತುಮಕೂರಿನ ಲಿಂ| ಶ್ರೀ ಸಿದ್ಧಗಂಗಾ ಸ್ವಾಮೀಜಿ ಅವರು ನಡೆದಾಡುವ ದೇವರಾದರೆ, ಡಾ| ಎಂ.ಎಸ್.ಎಲಿ ಅವರು ನಡೆದಾಡುವ ಡಾಕ್ಟರ್ ಎಂದು ಜೆಜೆಎಂ ಮೆಡಿಕಲ್ ಕಾಲೇಜು ವಿಶ್ರಾಂತ ಪ್ರಾಂಶುಪಾಲ ಡಾ| ಮಂಜುನಾಥ್ ಆಲೂರ್ ಅಭಿಪ್ರಾಯಪಟ್ಟರು.
ನಗರದ ಜೆಜೆಎಂ ಮೆಡಿಕಲ್ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಗುರುವಾರ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಈಚೆಗೆ ಗೌರವ ಡಾಕ್ಟರೇಟ್ ಪಡೆದ ಹಿರಿಯ ವೈದ್ಯ ಡಾ| ಎಸ್.ಎಂ. ಎಲಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಸದಾ ಶಾಂತಿ, ಸೌಮ್ಯವಾಗಿರುವ ಡಾ| ಎಂ.ಎಸ್. ಎಲಿ ಅವರಲ್ಲಿ ಒಬ್ಬ ವೈದ್ಯರಾದವರಿಗೆ ಇರಬೇಕಾದ ಎಲ್ಲಾ ರೀತಿ ಗುಣಗಳಿವೆ. ಈ ಇಳಿ ವಯಸ್ಸಿನಲ್ಲೂ ನಿಸ್ವಾರ್ಥದಿಂದ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಹಾಗಾಗಿ ಅವರು ನಿಜಕ್ಕೂ ನಮ್ಮೆಲ್ಲರ ಕಣ್ಮುಂದಿರುವ ನಡೆದಾಡುವ
ದೇವರು ಎಂದು ಹೇಳಿದರು.
ಡಾ| ಎಲಿ ಅವರು ಎಂದಿಗೂ ಹುದ್ದೆಗಳಿಗಾಗಿ ಬೆನ್ನತ್ತಿ ಹೋದವರಲ್ಲ. ಅವರ ಸೇವಾ ಕಾರ್ಯಕ್ಕೆ ಆ ಹುದ್ದೆಗಳೇ ಅವರನ್ನು ಹುಡುಕಿಕೊಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಇಂತಹ ಶ್ರೇಷ್ಠ ವೈದ್ಯರಿಗೆ ಗೌರವ ಡಾಕ್ಟರೇಟ್ ನೀಡಿರುವುದು ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಗೌರವ ಬಂದಂತಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಅಭಿಪ್ರಾಯ ಹಂಚಿಕೊಂಡ ಡಾ| ಎಂ. ಎಸ್. ಎಲಿ ಅವರು, ವೈದ್ಯರಾದವರು ಮೆಡಿಕಲ್ ಸೇರಿದಂತೆ ಯಾವುದೇ ಕ್ಷೇತ್ರವಿರಲಿ ನಿಸ್ವಾರ್ಥದಿಂದ ಸಮಾಜಕ್ಕೆ ಕೊಡುಗೆ ನೀಡುವ ಕೆಲಸ ಮಾಡಬೇಕು. ತಮ್ಮ ಬಳಿಗೆ ಬಂದ ಎಲ್ಲಾ ರೋಗಿಗಳನ್ನು ಗೌರವದಿಂದ ಕಾಣಬೇಕು. ಯಾರು ಕೂಡ ಪ್ರಶಸ್ತಿ, ಗೌರವಗಳ ಬೆನ್ನೇರಿ ಹೋಗಬೇಡಿ. ಅವುನಾವು ಮಾಡುವ ಸಮಾಜಮುಖೀ ಕಾರ್ಯಕ್ಕೆ ತಾನಾಗೆ ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು.
ಕಾಯಕವೇ ಕೈಲಾಸ ಎಂಬ ಮಾತನ್ನು ವೈದ್ಯರು ಮರೆಯಬಾರದು. ನಿತ್ಯ ಮಾಡುವ ವೃತ್ತಿಯಲ್ಲಿ ಶ್ರದ್ಧೆ, ಆಸಕ್ತಿ, ಶ್ರಮವಹಿಸಿ. ಜೊತೆಗೆ ತಮ್ಮ ವೃತ್ತಿಗನುಗುಣವಾಗಿ ಹೊಸ ಹೊಸ ಅನ್ವೇಷಣೆಗಳನ್ನು ಮಾಡಿ. ಆಗ ನಿಜಕ್ಕೂ ತಮ್ಮ ಸೇವೆ ಸಾರ್ಥಕವಾಗುತ್ತದೆ ಎಂದರು.ಜೆಜೆಎಂ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ| ಎಸ್.ಬಿ. ಮುರುಗೇಶ್, ಹಿರಿಯ ವೈದ್ಯರಾದ ಡಾ| ಗುರುಪಾದಪ್ಪ, ಅಕಾಡೆಮಿಕ್ ಸಮಿತಿ ಕಾರ್ಯದರ್ಶಿ ಡಾ| ರವಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.