Davanagere: ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ರಾಗಿ ಸಂಗ್ರಹ; ಓರ್ವ ಬಂಧನ
Team Udayavani, Jul 24, 2024, 6:19 PM IST
ದಾವಣಗೆರೆ: ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ 18,400 ರೂಪಾಯಿ ಮೌಲ್ಯದ ಪಡಿತರ ರಾಗಿಯನ್ನು ಹರಿಹರ ನಗರ ಠಾಣೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಹರಿಹರದ ಸ್ಟಾರ್ ಟ್ರೇರ್ಸ್ ಮಾಲಿಕ ಸಯ್ಯದ್ ತಾಜುದ್ದೀನ್ ಬಂಧಿತ.
ಹರಿಹರ ನಗರದ ಗೌಸಿಯಾ ಕಾಲೋನಿಯಲ್ಲಿ ಸುರೇಶ್ ಎಂಬುವರ ಹಂಚಿನ ಮನೆಯನ್ನು ಬಾಡಿಗೆ ಪಡೆದುಕೊಂಡು ಸಾರ್ವಜನಿಕ ವಿತರಣೆ ಪದ್ದತಿಯಲ್ಲಿ ವಿತರಣೆ ಮಾಡುವ ರಾಗಿ ಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಣೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಹರಿಹರ ನಗರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಹಾಗೂ ಆಹಾರ ನಿರೀಕ್ಷಕ ಎಂ. ನಜರುಲ್ಲಾ ಇತರರು ದಾಳಿ ನಡೆಸಿ ಒಟ್ಟು 920 ಕೆಜಿ ರಾಗಿ ( ಬೆಲೆ 18,400) ವಶಪಡಿಸಿಕೊಂಡಿದ್ದಾರೆ.
ಕಾಳಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ದಾಸ್ತಾನನ್ನು ಅಕ್ರಮ ದಾಸ್ತಾನು ಎಂದು ಪರಿಗಣಿಸಿ ಸಯ್ಯದ್ ತಾಜುದ್ದೀನ್ ವಿರುದ್ದ ಆಹಾರ ನಿರೀಕ್ಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.