ದಾವಣಗೆರೆಯಲ್ಲಿ ಜಲಕ್ಷಾಮ, ಕುಡಿಯುವ ನೀರಿಗೂ ಪರದಾಟ
Team Udayavani, Apr 30, 2017, 12:48 PM IST
ದಾವಣಗೆರೆ: ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಈಗ ಅಕ್ಷರಶಃ ಜಲಕ್ಷಾಮ. ಜೀವನಾಡಿ ತುಂಗಭದ್ರೆಯ ಜತೆಗೆ ಟಿವಿ ಸ್ಟೇಷನ್ ಮತ್ತು ಕುಂದುವಾಡ ಕೆರೆ ಬತ್ತಿವೆ. ಭದ್ರಾ ನಾಲೆಯಲ್ಲಿ ನೀರು ಹರಿಯದೇ ಇರುವುದರಿಂದ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚುತ್ತಿದೆ. ದಾವಣಗೆರೆಯ ನೀರಿನ ಮೂಲವಾಗಿರುವ ಟಿವಿ ಸ್ಟೇಷನ್ ಮತ್ತು ಕುಂದುವಾಡ ಕೆರೆಯಲ್ಲಿ ತಲಾ 400 ಎಂಎಲ್‌ಡಿ ನೀರು ಇದೆ.
ಆದರೆ, ಅದನ್ನು ಮುಂದಿನ ದಿನಗಳಿಗೆ ಮೀಸಲಿಡಲಾಗಿದೆ. ನಗರದಲ್ಲಿ ಇರುವ 400 ಕೊಳವೆಬಾವಿಗಳ ನೀರನ್ನು 5 ಸಾವಿರ ಲೀಟರ್ ಸಾಮರ್ಥ್ಯದ 26 ಟ್ಯಾಂಕರ್‌ಗಳ ಮೂಲಕ 41 ವಾರ್ಡ್‌ಗಳಲ್ಲಿ ಒದಗಿಸಲಾಗುತ್ತಿದೆಯಂತೆ. ಮಹಾನಗರ ಪಾಲಿಕೆಯಿಂದ ಒದಗಿಸಲಾಗುತ್ತಿರುವ ನೀರು 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ದಾಹ ತಣಿಸುತ್ತಿಲ್ಲ.
ಹಾಗಾಗಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. 25-30 ವರ್ಷದಿಂದ ಚಾಲನೆಯಲ್ಲಿದ್ದ ಕೊಳವೆ ಬಾವಿಗಳಲ್ಲಿ ಹನಿ ನೀರು ಬರದಂತಾಗಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ 150ಕ್ಕೂ ಹೆಚ್ಚು ಕಿರು ನೀರು ಸರಬರಾಜು ಘಟಕ (ಮಿನಿ ವಾಟರ್ ಟ್ಯಾಂಕ್)ಬಹುತೇಕ ಇದ್ದೂ ಇಲ್ಲದಂತಾಗಿವೆ.
ನೂರಾರು ಕೈಪಂಪ್‌ಗ್ಳು ಸ್ಥಗಿತಗೊಂಡಿವೆ. ಅವುಗಳನ್ನು ದುರಸ್ತಿ ಪಡಿಸಿ, ಸಮಸ್ಯೆ ತಗ್ಗಿಸಲು ಪುರಪಿತೃಗಳು, ಅಧಿಕಾರಿಗಳು ಗಮನ ನೀಡಿತ್ತಿಲ್ಲ. ನಗರದಲ್ಲಿ ನೀರಿನ ಸಮಸ್ಯೆಯ ಎಚ್ಚರಿಕೆ ಗಂಟೆ ಮೊಳಗುತ್ತಲೇ ಇತ್ತು. ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರೂ ಏಕಾಏಕಿ ನೀರಿನ ಸಮಸ್ಯೆ ನಿರ್ಮಾಣವಾಗಿದೆ.
ಸದ್ಯಕ್ಕೆ ವಿದ್ಯುತ್ ಕಡಿತದ ಸಮಸ್ಯೆ ಇಲ್ಲ. ಒಂದೊಮ್ಮೆ ವಿದ್ಯುತ್ ಸಮಸ್ಯೆ ಇದ್ದಿದ್ದರೆ ನೀರಿನ ಹಾಹಾಕಾರ ಬುಗಿಲೇಳುತ್ತಿತ್ತು. ಬಹುತೇಕ ಕಡೆ ನಲ್ಲಿಯಲ್ಲಿ ನೀರು ಬರದೆ 15-20 ದಿನಗಳಾಗುತ್ತಾ ಬಂದಿದೆ. 8-10 ದಿನಕ್ಕೆ ನೀರು ಬಿಡಲಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಜನರು ಸಹ ನೀರು ಸ್ಟಾಕ್ ಮಾಡಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಈಗ ಇದ್ದಕ್ಕಿದ್ದಂತೆ ನೀರು ಬರದೇ ಇರುವುದು ಸಾಕಷ್ಟು ತೊಂದರೆಗೆ ಕಾರಣವಾಗಿದೆ.
ಹೆಚ್ಚುತ್ತಿರುವ ಬಿರು ಬಿಸಿಲು ನೀರಿನ ಬೇಡಿಕೆ ಹೆಚ್ಚಿಸುತ್ತಿದೆ. ಆದರೆ, ನೀರೇ ಇಲ್ಲ. ಹಾಗಾಗಿ ಮನೆಯಲ್ಲಿ ಒಂದಿಬ್ಬರಿಗೆ ನೀರು ತರುವುದೇ ಖಾಯಂ ಕೆಲಸ. ನೀರಿನ ಟ್ರಾಕ್ಟರ್‌ಗಳನ್ನೇ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಇನ್ನು ಟ್ಯಾಂಕರ್ ಬಂದಾಗ ಬಿಂದಿಗೆ ನೀರು ತುಂಬಿಸಿಕೊಳ್ಳಲು ಇನ್ನಿಲ್ಲದ ಸಾಹಸ ಪಡಬೇಕಾಗುತ್ತದೆ. ಒಮ್ಮೊಮ್ಮೆ ಜಗಳಕ್ಕೂ ಇಳಿಯಬೇಕಾಗದ ಸ್ಥಿತಿ ದಾವಣಗೆರೆಯ ಜನರದ್ದಾಗಿದೆ.
ಟ್ಯಾಂಕರ್ ದುಬಾರಿ…. ಬೇಸಿಗೆ ಪ್ರಾರಂಭದಲ್ಲಿ 300-400 ರೂಪಾಯಿಗೆ ಟ್ಯಾಂಕರ್ ನೀರು ಸಿಗುತ್ತಿತ್ತು. ಯಾವಾಗ ನಲ್ಲಿಯಲ್ಲಿ ನೀರು ಬರುವುದು ನಿಂತಿದೆಯೋ ಅಲ್ಲಿಂದ ಟ್ಯಾಂಕರ್ ಬೆಲೆ ಹೆಚ್ಚಾಗಿದೆ. ಒಂದು ಕಡೆ 700-800 ರೂಪಾಯಿ ಇದ್ದರೆ. ಕೆಲವು ಕಡೆ ಸಾವಿರ ರೂಪಾಯಿ ಗಡಿ ದಾಟಿದೆ.
ದುಡ್ಡು ಕೊಟ್ಟರೂ ನೀರು ಸಿಗೊಲ್ಲ… ಎಂಬ ವಾತಾವಣ ಇದೆ. ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದಂತೆಯೇ ಕೊಳವೆಬಾವಿಗಳಿಗೆ ಮುಗಿಬಿದ್ದ ಕಾರಣ ಆ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ಹಾಗಾಗಿ ಅನೇಕ ಕಡೆ ನೀರು ಮಾರಾಟ ನಿಲ್ಲಿಸಲಾಗುತ್ತಿದೆ. ಇನ್ನು ಕೊಳವೆಬಾವಿ ಕೊರೆದು, ಅಲ್ಲಿಂದ ನೀರು ಪಡೆದು, ಜನರಿಗೆ ಒದಗಿಸುವ ಜಿಲ್ಲಾಡಳಿತ, ನಗರಪಾಲಿಕೆಯ ಪ್ರಯತ್ನಕ್ಕೆ ಜನರೇ ಅಡ್ಡಿಪಡಿಸಿದ ಘಟನೆಯೂ ನಡೆದಿವೆ. ಹಾಗಾಗಿ ದಾವಣಗೆರೆಯಲ್ಲಿ ನೀರಿನ ಸಮಸ್ಯೆ ಸದ್ಯಕ್ಕಂತೂ ಬಗೆಹರಿಯದ ಸಮಸ್ಯೆ.
* ರಾ.ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.