ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸಮಸ್ಯೆ ಇತ್ಯರ್ಥ
Team Udayavani, Jun 12, 2021, 11:32 AM IST
ಹರಿಹರ: ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದ ಕ್ಷೌರಿಕನ ವರ್ತನೆ ಖಂಡಿಸಿ ದಲಿತರು ಕ್ಷೌರಿಕನ ಜತೆ ವಾಗ್ವಾದ ನಡೆಸಿದ ಘಟನೆ ತಾಲೂಕಿನ ಧೂಳೆಹೊಳೆ ಗ್ರಾಮದಲ್ಲಿ ಶುಕ್ರವಾರ ನಡೆಯಿತು.
ಸಾಮಾನ್ಯವಾಗಿ ಹರಿಹರದಲ್ಲೆ ಕ್ಷೌರ ಮಾಡಿಸುತ್ತಿದ್ದ ಗ್ರಾಮದ ದಲಿತರು ಲಾಕ್‌ಡೌನ್ ಕಾರಣಕ್ಕೆ ನಗರಕ್ಕೆ ಬರಲಾಗದೆ ಶುಕ್ರವಾರ ಬೆಳಗ್ಗೆ ಸ್ಥಳೀಯ ಅಂಗಡಿಗೆ ತೆರಳಿದ್ದು, ಕ್ಷೌರಿಕ ಅಣ್ಣಪ್ಪ, ನಿಮಗೆ ಕ್ಷೌರ ಮಾಡಿದರೆ ಇತರೆ ಜನಾಂಗದವರು ನನ್ನ ಬಳಿ ಕ್ಷೌರಕ್ಕೆ ಬರುವುದಿಲ್ಲ, ಆದ ಕಾರಣ ನಿಮಗೆ ಕ್ಷೌರ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಕೆರಳಿದ ದಲಿತರು ನಮಗೆ ಏಕೆ ಕ್ಷೌರ ಮಾಡಲ್ಲ, ನಾವು ಹರಿಹರಕ್ಕೆ ಹೋಗಿ ಬರಲು ಇನ್ನೂರು ರೂ. ಖರ್ಚಾಗುತ್ತದೆ. ಅಲ್ಲದೆ ಈಗ ಲಾಕ್‌ಡೌನ್ ಬೇರೆ, ನಾವು ಹಣ ನೀಡಿದರೂ ನೀನೇಕೆ ಕ್ಷೌರ ಮಾಡಲ್ಲ ಎಂದು ವಾಗ್ವಾದ ನಡೆಸಿದ್ದಾರೆ. ಆದರೂ ಕ್ಷೌರಿಕ ಒಪ್ಪದಿದ್ದಾಗ ದಲಿತ ಸಮಾಜದ ಯುವಕರು ಸಮಾಜ ಕಲ್ಯಾಣಾಧಿಕಾರಿಗಳಿಗೆ ಫೋನ್ ಮಾಡಿ ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ.
ಕೂಡಲೆ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸೈಯದ್ ನಾಸಿರುದ್ದೀನ್ ಪೊಲೀಸರೊಂದಿಗೆ ಗ್ರಾಮಕ್ಕೆ ತೆರಳಿ ಕ್ಷೌರಿಕನಿಗೆ, ಜಾತಿ, ಜನಾಂಗ ಆಧರಿಸಿ ಕ್ಷೌರ ಮಾಡುವುದಿಲ್ಲ ಎಂದರೆ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ನಿನ್ನ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕಾಗುತ್ತೆ. ಅವರಿವರ ಮಾತು ಕೇಳಬೇಡ, ದೂರು ದಾಖಲಾದರೆ ನಿನ್ನ ಸಹಾಯಕ್ಕೆ ಯಾರೂ ಬರುವುದಿಲ್ಲ ಎಂದು ತಿಳಿಸಿದರು.
ಸ್ಥಳದಲ್ಲಿದ್ದ ಇತರೆ ಜನಾಂಗದವರಿಗೂ ಕೂಡ, ಗ್ರಾಮದಲ್ಲಿ ಎಲ್ಲಾ ಜಾತಿ, ಜನಾಂಗದವರೂ ಇರುತ್ತಾರೆ. ಈ ರೀತಿ ಕ್ಷೌರದ ವಿಷಯದಲ್ಲಿಯೂ ತಾರತಮ್ಯ ಮಾಡುವುದು ಬೇಡ. ನಿಮ್ಮ ಒತ್ತಡದಿಂದಾಗಿ ಕ್ಷೌರಿಕ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ, ನೀವೂ ತಪ್ಪಿತಸ್ಥರಾಗುತ್ತೀರಿ ಎಂದು ಎಚ್ಚರಿಸಿದರು.
ಆಗ ಕ್ಷೌರಿಕ ಅಣ್ಣಪ್ಪ ಹಾಗೂ ಗ್ರಾಮಸ್ಥರು ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದಾಗ ಪ್ರಕರಣ ಸುಖಾಂತ್ಯ ಕಂಡಿತು. ಲಾಕ್‌ಡೌನ್ ಮುಗಿದ ನಂತರ ಗ್ರಾಮದಲ್ಲಿ ಶಾಂತಿ ಸಭೆ ನಡೆಸಲಾಗುವುದು ಎಂದು ನಾಸಿರುದ್ದೀನ್ ಗ್ರಾಮಸ್ಥರಿಗೆ ತಿಳಿಸಿದರು.
ದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್, ಪಿಡಿಒ ಮೌನೇಶಾಚಾರ್,ಗ್ರಾಪಂ ಸದಸ್ಯರಾದ ಶಿಲ್ಪಾ ಹುಚ್ಚೆಂಗೆಪ್ಪ, ಮಾಜಿ ಸದಸ್ಯ ಎ.ಪರಶುರಾಮ, ಮಲ್ಲಪ್ಪ ಕೆ., ಮಂಜಪ್ಪಎ., ಶ್ರೀನಿವಾಸ್, ಕಟ್ಟೆಪ್ಪ, ನಿಂಗರಾಜ್, ಅಣ್ಣಪ್ಪ, ಹವಳೆಪ್ಪ, ರೇವಣಪ್ಪ, ಬಸಪ್ಪ, ಕೋಟೆಪ್ಪ ಇತರರು ಇದ್ದರು.
ಕೋವಿಡ್ ಸಂಕಷ್ಟದಲ್ಲೂ ಕೆಲವರು ಮಾನವೀಯತೆ ಮರೆತು, ಜಾತಿ, ಮತಗಳ ಎತ್ತಿಕಟ್ಟಿ ತಾರತಮ್ಯ ಮಾಡುತ್ತಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಇಂದಿಗೂ ದೇವಸ್ಥಾನ, ಹೋಟೆಲ್, ಕ್ಷೌರದಂಗಡಿ ದಲಿತರಿಗೆ ನಿಷಿದ್ಧ. ಅಧಿಕಾರಿಗಳು, ಮಠಾ ಧೀಶರು, ಜನಪ್ರತಿನಿಧಿ ಗಳು, ಸಮಾಜ ಸುಧಾರಕರು ಒಟ್ಟಾಗಿ ಅಸ್ಪೃಶ್ಯತೆಗೆ ಕೊನೆ ಹಾಡಬೇಕಿದೆ.– ಪಿ.ಜೆ.ಮಹಾಂತೇಶ್, ದಸಂಸ ತಾಲೂಕು ಸಂಚಾಲಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.