5ರಂದು ಭದ್ರೆಗೆ ಭಾರತೀಯ ರೈತ ಒಕ್ಕೂಟದಿಂದ ಬಾಗಿನ
Team Udayavani, Sep 2, 2019, 10:34 AM IST
ದಾವಣಗೆರೆ: ಭಾರತೀಯ ರೈತ ಒಕ್ಕೂಟ ಪದಾಧಿಕಾರಿಗಳ ಸುದ್ದಿಗೋಷ್ಠಿ.
ದಾವಣಗೆರೆ: ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಸೆ.5 ರಂದು ಬಾಗಿನ ಅರ್ಪಿಸಲಾಗುವುದು ಎಂದು ಭಾರತೀಯ ರೈತ ಒಕ್ಕೂಟ(ಭದ್ರಾ ಶಾಖೆ) ಪ್ರಧಾನ ಕಾರ್ಯದರ್ಶಿ ಎಚ್.ಆರ್. ಲಿಂಗರಾಜ್ ಶಾಮನೂರು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟುದಾರರು ಒಳಗೊಂಡಂತೆ ಸರ್ವ ಜನರ ಜೀವನಾಡಿಯಾಗಿರುವ ಭದ್ರಾ ಜಲಾಶಯ ಭರ್ತಿಯಾಗಿದೆ. ಪ್ರತಿ ವರ್ಷದ ಸಂಪ್ರದಾಯದಂತೆ ತಾಯಿ ಭದ್ರೆಗೆ ಬಾಗಿನ ಅರ್ಪಿಸಿ, ಪೂಜೆ ನೆರವೇರಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಭಾರತೀಯ ರೈತ ಒಕ್ಕೂಟದ ಗೌರವ ಅಧ್ಯಕ್ಷರಾದ, ಶಾಸಕ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ| ಸಿ. ನರಸಿಂಹಪ್ಪ, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸುವರು. ಜಿಲ್ಲೆಯ ರೈತರು ಸ್ವಪ್ರೇರಣೆಯಿಂದ ವಾಹನ, ರೊಟ್ಟಿ-ಬುತ್ತಿಯೊಂದಿಗೆ ಆಗಮಿಸುವಂತೆ ಮನವಿ ಮಾಡಿದರು.
ಭದ್ರಾ ಜಲಾಶಯ ತುಂಬಿದ್ದು ಈಚೆಗೆ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಜಲಾಶಯದಲ್ಲಿ 155 ಅಡಿ ನೀರು ಇದ್ದಾಗಲೇ ಭತ್ತಕ್ಕೆ ನೀರು ಹರಿಸುವಂತೆ ಕಾಡಾ ಸಮಿತಿಗೆ ಮನವಿ ಮಾಡಿಕೊಂಡರೂ ಜಲಾಶಯ ತುಂಬುವುದಿಲ್ಲ ಎಂದು ನಾಲೆಯಲ್ಲಿ ನೀರು ಹರಿಸಲಿಲ್ಲ. ಕಾಡಾ ಸಮಿತಿ ಅಚ್ಚುಕಟ್ಟುದಾರರು ಮತ್ತು ರೈತರನ್ನ ಸದಾ ಕಾಡುವ ಸಮಿತಿ ಆಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಜಲಾಶಯದಲ್ಲಿ 140 ಅಡಿ ನೀರಿದ್ದ ಸಂದರ್ಭದಲ್ಲೇ ಭತ್ತಕ್ಕೆ ನೀರು ನೀಡಲಾಗಿದೆ. ರೈತರು, ಅಚ್ಚುಕಟ್ಟು ದಾರರ ಬಗ್ಗೆ ಕಾಳಜಿ ವಹಿಸದ ಅಧಿಕಾರಿಗಳು ಕೈಗಾರಿಕಾ ಲಾಬಿಗೆ ಮಣಿದು, ಅವರು ಬಯಸಿದಾಗ ಕುಡಿಯುವ ನೀರಿನ ನೆಪದಲ್ಲಿ ನದಿಗೆ ಹರಿಸುತ್ತಾರೆ. ರಾಜ್ಯ ಸರ್ಕಾರ ಇಂತದ್ದಕ್ಕೆ ಕಡಿವಾಣ ಹಾಕಬೇಕು. ನೀರು ಪೋಲು ತಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಭದ್ರಾ ಅಚ್ಚುಕಟ್ಟಿನಲ್ಲಿ ಶೇ.60 ರಷ್ಟು ಭತ್ತದ ನಾಟಿ ಕಾರ್ಯ ನಡೆದಿದೆ. 90 ದಿನಗಳಲ್ಲಿ ಇಳುವರಿ ಬರುವಂತಹ ಆರ್‌ಎನ್‌ಆರ್, 64 ತಳಿಯನ್ನೇ ಹೆಚ್ಚಾಗಿ ಬಳಸಲಾಗಿದೆ. ನಾಟಿ ಮಾಡಿದಂತಹ ಭತ್ತ ನವೆಂಬರ್‌ನಲ್ಲಿ ಕಾಳು ಕಟ್ಟುವ ಹಂತಕ್ಕೆ ಬರುತ್ತದೆ. ಶೀತಕ್ಕೆ ಸಿಲುಕುವುದರಿಂದ ಇಳುವರಿ ಕಡಿಮೆ ಆಗಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಕ್ಕೂಟದ ಶಾನಭೋಗ್ ನಾಗರಾಜ ರಾವ್ ಕೊಂಡಜ್ಜಿ, ಮಹೇಶ್ ಕುಂದು ವಾಡ, ಉಜ್ಜಣ್ಣ ಬಿ. ಕಲ್ಪನಹಳ್ಳಿ, ಎ.ಎಂ. ಮಂಜುನಾಥ್, ಅಣ್ಣಪ್ಪ ಕುಂದುವಾಡ, ಹನುಮಂತಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.