ಸಂಸದ ಸಿದ್ದೇಶ್ವರ್ ಮನೆ ಮೇಲೆ ಐಟಿ ದಾಳಿ
Team Udayavani, May 19, 2017, 12:44 PM IST
ದಾವಣಗೆರೆ: ಆದಾಯ ತೆರಿಗೆ ಅಧಿಕಾರಿಗಳ ಹುಬ್ಬಳ್ಳಿ ವಲಯ ತಂಡ ಗುರುವಾರ ದಾವಣಗೆರೆ ಮಂಡಿಪೇಟೆಯಲ್ಲಿರುವ ಜಿ.ಎಂ. ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕಲ್ಲಿ ಪರಿಶೀಲನೆ ನಡೆಸಿದೆ. ಈ ಮಧ್ಯೆ ದಾವಣಗೆರೆ ಸಂಸದ, ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್ ಅವರ ಚಿತ್ರದುರ್ಗ ತಾಲೂಕಿನ ಭೀಮಸಮುದ್ರದ ಮನೆ, ಕಚೇರಿ, ಕಾರ್ಖಾನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಜಿ.ಎಂ. ಸೌಹಾರ್ದ ಪತ್ತಿನ ಸಹಕಾರ ನಿಯಮಿತದ ಕಚೇರಿಗೆ ಬೆಳಿಗ್ಗೆ ಆಗಮಿಸಿದ 4-5 ಅಧಿಕಾರಿಗಳನ್ನೊಳಗೊಂಡ ತಂಡ ಎಲ್ಲಾ ದಾಖಲೆ ಪರಿಶೀಲನೆ ನಡೆಸಿತು. ನಗರದ ಜಿಎಂ ಸೌಹಾರ್ದ ಸಹಕಾರ ಬ್ಯಾಂಕ್‌ಗೆ ಎಂದಿನಂತೆ ವಹಿವಾಟಿಗೆ ಬಂದ ಗ್ರಾಹಕರಿಗೆ, ಆಂತರಿಕ ಲೆಕ್ಕ ಪರಿಶೀಲನೆ ನಡೆಸಲಾಗುತ್ತಿದೆ. ಹಾಗಾಗಿ ನಾಳೆ ಬನ್ನಿ ಎಂಬುದಾಗಿ ಕಾರಣ ಹೇಳಿ ವಾಪಸ್ ಕಳಿಸಲಾಯಿತು.
ದಾಳಿ ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಮಾಧ್ಯಮದವರಿಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಲಿಲ್ಲ. ಅಧಿಕಾರಿಯೊಬ್ಬರು, ಆಂತರಿಕ ಲೆಕ್ಕ ಪರಿಶೀಲನೆ ನಡೆಯುತ್ತಿದೆ ಎಂದಷ್ಟೇ ಹೇಳಿದರು. ಜಿಎಂಐಟಿ ಅತಿಥಿ ಗೃಹ, ಸಂಸದರ ಸಹೋದರಿ ನಿವಾಸ, ಜನಸಂಪರ್ಕ ಕಚೇರಿ ಒಳಗೊಂಡಂತೆ ಎಲ್ಲಿಯೂ ಯಾವುದೇ ಪರಿಶೀಲನೆ ನಡೆದಿಲ್ಲ. ಜಿ.ಎಂ. ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕಲ್ಲಿ ಮಾತ್ರವೇ ಪರಿಶೀಲನೆ ನಡೆದಿದೆ.
ಮಹತ್ವದ ದಾಖಲೆಗಳ ವಶ
ಚಿತ್ರದುರ್ಗ: ಸಿದ್ದೇಶ್ವರ್ ಅವರ ಭೀಮಸಮುದ್ರದ ನಿವಾಸ ಸೇರಿದಂತೆ ಅವರದೇ ಒಡೆತನದ ಗುಟಕಾ ಫ್ಯಾಕ್ಟರಿ, ಸಹಕಾರಿ ಬ್ಯಾಂಕ್ ಹಾಗೂ ಕಾಲೇಜುಗಳ ಮೇಲೆ ದಾಳಿ ನಡೆಸಲಾಗಿದೆ. ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿರುವ ವಾಸದ ಮನೆ, ಅವರ ಕುಟುಂಬದ ಒಡೆತನಕ್ಕೆ ಸೇರಿದ ಶ್ರೀ ಪ್ರಸನ್ನ ಟ್ರೇಡರ್ಸ್ ಅಡಿಕೆ ಮಂಡಿ, ಜಿ.ಎಂ. ಸೌಹಾರ್ದ ಸಹಕಾರಿ ಬ್ಯಾಂಕ್,
ಭೀಮಸಮುದ್ರದ ಸಮೀಪದ ಮೇಗಲಹಳ್ಳಿ ಬಳಿ ಇರುವ ಸೂಪರ್ ಗುಟಕಾ ಫ್ಯಾಕ್ಟರಿ ಹಾಗೂ ಎರಡು ಮನೆಗಳು, ದಾವಣಗೆರೆಯ ಜಿ.ಎಂ. ಸೌಹಾರ್ದ ಸಹಕಾರಿ ಬ್ಯಾಂಕ್, ಜಿಎಂಐಟಿ ಕಾಲೇಜು, ಅಡಿಕೆ ಮಂಡಿ ಸೇರಿದಂತೆ ಸಿದ್ದೇಶ್ವರ ಅವರ ಸಹೋದರ ಪ್ರಸನ್ನಕುಮಾರ್ ನಿವಾಸದ ಮೇಲೂ ದಾಳಿ ಮಾಡಿದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಜಿಎಂ ಶುಗರ್ಸ್‌ನ ಐಟಿ ಬಿಸಿ: ಹಾವೇರಿ ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಗುತ್ತಿಗೆದಾರ ಜಿಎಂ ಶುಗರ್ಸ್‌ನ ಕಚೇರಿ ಹಾಗೂ ಅಲ್ಲಿರುವ ಜಿಎಂ ಸಹಕಾರಿ ಸೌಹಾರ್ದ ಪತ್ತಿನ ಸಂಘದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.