![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 1, 2019, 11:51 AM IST
ಹುಬ್ಬಳ್ಳಿ: ಡಾ. ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಶ್ರೀ ಸದಸ್ಯರಿಂದ ಭೂಮಿ ತಾಯಿಯ ಮಡಿಲಿಗೆ ಜಲ ಪುನರ್ಭರಣ ಕಾರ್ಯಾಗಾರ ಮತ್ತು ಮಾಹಿತಿ ಶಿಬಿರವನ್ನು ಇತ್ತೀಚಿಗೆ ನಡೆಸಲಾಯಿತು.
ಭೂಮಿಯ ಅಂತರ್ಜಲ ಮಟ್ಟ ಕುಸಿಯುತ್ತಾ ಬಂದಿದ್ದು, ಸಮಸ್ಯೆಯ ಗಂಭೀರತೆಯನ್ನು ಅರಿತು ಹಲವಾರು ವರ್ಷಗಳಿಂದ ಭಾರತದಾದ್ಯಂತ ಲಕ್ಷಾಂತರ ಬಾವಿ, ಕೆರೆ, ಬೋರ್ವೆಲ್, ಕಟ್ಟಡದ ಛಾವಣಿ, ತೋಟದಲ್ಲಿ ಹರಿದು ಹೋಗುವ ನೀರು, ಲಭ್ಯವಿರುವ ಮಳೆಯ ನೀರನ್ನು ಶುದ್ಧೀಕರಿಸಿ ಭೂಮಿಯ ಮಡಿಲಿಗೆ ತುಂಬಿಸಿ ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳುವ ಈ ಕಾರ್ಯಾಗಾರವು ಹುಬ್ಬಳ್ಳಿ ಸಮೀಪದ, ಅಂಗಾಪುರ, ತಿಳುವಳ್ಳಿ ಮತ್ತು ಪುರುಕುಂಡಿ ಕೊಪ್ಪದಲ್ಲಿ ನಡೆಸಿಕೊಡಲಾಯಿತು.
ಈ ಕಾರ್ಯಾಗಾರ ನಡೆಸಲು ಬೇಕಾದ ಸಾಮಗ್ರಿಗಳು PVC ಪೈಪ್, ನೆಟ್, ಜಾಲಿ, ಗಮ್ ಹೊಯಿಗೆ, ಸಣ್ಣಜಲ್ಲಿ, ದೊಡ್ಡ ಜಲ್ಲಿ, ಮಧ್ಯಮ ಜಲ್ಲಿ. ಪ್ರತಿಷ್ಠಾನದ ಸದಸ್ಯರು ಈ ಕಾರ್ಯಾಗಾರ ಮತ್ತು ಮಾಹಿತಿಯನ್ನು ಸೇವಾರೂಪದಿಂದ ಮಾಡುತ್ತಾ ಬರುತ್ತಿದ್ದು, ಪ್ರತಿಷ್ಠಾನದ ಪದ್ಮಶ್ರೀ ಡಾ. ಅಪ್ಪಾ ಸಾಹೇಬ್ ಧರ್ಮಾಧಿಕಾರಿ ಇವರ ಮಾರ್ಗದರ್ಶನದಂತೆ ನಡೆದು ಬಂದಿರುತ್ತದೆ. ಸಾರ್ವಜನಿಕರು ಈ ಕಾರ್ಯಾಗಾರದ ಲಾಭ ಪಡೆದುಕೊಳ್ಳಬಹುದು ಎಂದು ಶ್ರೀ ಸದಸ್ಯರು ಹೇಳಿರುತ್ತಾರೆ.
ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ
Davanagere: ಪಕ್ಷದಿಂದ ಯತ್ನಾಳ್ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?
Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ
Davanagere: ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್
Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.