ಜಯದೇವಶ್ರೀ ಕ್ರಾಂತಿಪುರುಷ


Team Udayavani, Jan 21, 2019, 6:16 AM IST

dvg-3.jpg

ದಾವಣಗೆರೆ: ಬಸವ ತತ್ವದ ಆಧಾರದ ಮೇಲೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರದ್ದಾಗಿದೆ ಎಂದು ಚಿತ್ರದುರ್ಗ ಬೃಹನ್ಮಠದ ಶ್ರೀ ಡಾ| ಶಿವಮೂರ್ತಿ ಮುರುಘಾ ಶರಣರು ಪ್ರತಿಪಾದಿಸಿದರು.

ಜಯದೇವ ವೃತ್ತದ ಶಿವಯೋಗಾಶ್ರಮದಲ್ಲಿ ಭಾನುವಾರ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 62ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮೂರನೇ ದಿನದ ಸಹಜ ಶಿವಯೋಗದ ಸಾನ್ನಿಧ್ಯವಹಿಸಿ ಮಾತನಾಡಿದರು.

ಶ್ರೀ ಜಯದೇವ ಜಗದ್ಗುರುಗಳು ಬಸವತತ್ವ ಪಾಲಿಸಿದವರು. ಆ ಮೂಲಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ 28 ವರ್ಷಗಳಿಂದಲೂ ಬಸವತತ್ವ ಪಾಲನೆ ಹಾಗೂ ಪ್ರಸಾರದಲ್ಲಿ ಚಿತ್ರದುರ್ಗ ಬೃಹನ್ಮಠ ಹಲವಾರು ಕಾರ್ಯ ಯೋಜನೆಗಳನ್ನು ಹಾಕಿಕೊಂಡು ಮುನ್ನಡೆದಿದೆ ಎಂದರು.

ಬೆಂಗಳೂರಿನಂತಹ ಮಹಾನಗರದಲ್ಲಿ ಬಸವಣ್ಣನವರ ಕಾರ್ಯಕ್ರಮಗಳಲ್ಲಿ ಅವರ ವಚನಗಳನ್ನೇ ಹೇಳುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಬಸವಣ್ಣನ ವಚನಗಳನ್ನು ಹೇಳುವಂತೆ, ಸಮಾರಂಭಗಳಲ್ಲಿ ಪ್ರಾರ್ಥನೆಗೆ ವಚನಗಳನ್ನೇ ಹಾಡುವಂತೆ ಮಾಡಲಾಯಿತು. ಸಹಜ ಶಿವಯೋಗ, ಶರಣ ಸಂಗಮ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ರಾಜ್ಯವಲ್ಲದೆ ಹೊರ ರಾಜ್ಯ, ರಾಷ್ಟ್ರಗಳಲ್ಲಿ ಬಸವ ಪ್ರಜ್ಞೆಯನ್ನು ಮೂಡಿಸಿ, ಅದನ್ನು ಅನುಸರಿಸುವಂತೆ ಮಾಡಿದ ಕೀರ್ತಿ ಮುರುಘಾಮಠಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಬಸವಣ್ಣ ಎಂದರೆ ವಿಶ್ವ, ವಿಶ್ವ ಎಂದರೆ ವಿಶಾಲ. ಶರಣರ ಭಾವನೆಗಳು, ಅವರ ವಚನಗಳೂ ವಿಶಾಲವಾದ ಅರ್ಥವನ್ನು ಒಳಗೊಂಡಿವೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಚನಗಳ ಅರಿವು ಮೂಡಿಸಲಾಗುತ್ತಿದೆ ಎಂದರು.

ಶರಣ ಸಂಸ್ಕೃತಿ ಎಂಬ ಪದವು ವಿಶಾಲವಾದ ಅರ್ಥವನ್ನು ಒಳಗೊಂಡಿದೆ. ಬದುಕನ್ನು ಉದಾತ್ತಗೊಳಿಸುವುದು, ಪರಿಶ್ರಮಿಸುವುದು, ಸಂಸ್ಕಾರಗೊಳಿಸುವುದು, ಗೌರವಿಸುವುದು, ಒಗ್ಗೂಡಿಸುವುದು, ಕಟ್ಟುವುದು, ಸಮಾನತೆಯನ್ನು ತರುವುದು ಎಂದೆಲ್ಲಾ ಕರೆಯಲಾಗುತ್ತದೆ. ಈ ಶರಣ ಸಂಸ್ಕೃತಿ ಉತ್ಸವದ ಮೂಲಕ ಇಂತಹ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುರುಘಾಮಠ ನಡೆದುಕೊಂಡು ಬರುತ್ತಿದೆ. ಜಾತ್ಯತೀತವಾಗಿ, ಸರ್ವರಿಗೂ ಸಮಾನತೆ, ಮಹಿಳಾ ಸ್ವಾತಂತ್ರ್ಯ ನೀಡುತ್ತಾ ಪ್ರತಿಯೊಬ್ಬರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಬಸವತತ್ವದ ಪ್ರಚಾರಕ್ಕೆ 12ನೇ ಶತಮಾನದ ನಂತರವೂ ಹಲವಾರು ಶರಣರು ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದಾರೆ. ಅಲ್ಲದೇ ತೋಂಟದ ಸಿದ್ದಲಿಂಗ ಶರಣರು, ನಂತರ ಮುರುಘೆಯ ಶ್ರೀ ಶಾಂತವೀರ ಸ್ವಾಮೀಜಿಗಳು ಶ್ರಮಿಸಿದ್ದಾರೆ. ಇಲ್ಲಿನ ವಿಜಯ ಮಹಾಂತಸ್ವಾಮಿ, ನಾಗನೂರು, ಅಥಣಿ ಶ್ರೀಗಳು, ಫ.ಗು. ಹಳಕಟ್ಟಿ, ಹರ್ಡೇಕರ್‌ ಮಂಜಪ್ಪ ಅವರ ಕೊಡುಗೆಯೂ ಅಪಾರವಾಗಿದೆ ಎಂದು ಸ್ಮರಿಸಿಕೊಂಡರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ, ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ, ಶರಣೆ ಲಿಂಗದೇವಿ, ಧಾರವಾಡದ ಈಶ್ವರ ಸಾಣಿಕೊಪ್ಪ, ಹರಿಹರದ ಸುಬ್ರಮಣ್ಯ ನಾಡಿಗೇರ, ಜಿಲ್ಲಾ ಪಂಚಾಯತಿ ಸದಸ್ಯ ತೇಜಸ್ವಿ ಪಟೇಲ್‌, 30ಕ್ಕೂ ಹೆಚ್ಚು ಮಠಗಳ ಮಠಾಧೀಶರು ಪಾಲ್ಗೊಂಡಿದ್ದರು.

ನಂತರ ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ಬಸವಕೇಂದ್ರದ ಆಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸೆ ಕಾರ್ಯಕ್ರಮ ನಡೆಯಿತು.

ನೂತನ ಸ್ವಾಮೀಜಿ ನೇಮಕ ಸಂತಸ ತಂದಿದೆ
ದಾವಣಗೆರೆ:
ಚಿತ್ರದುರ್ಗದ ಶ್ರೀ ಕೇತೇಶ್ವರ ಮಹಾಮಠದ ನೂತನ ಪೀಠಾಧಿಪತಿಗಳಾಗಿ ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀ ನೇಮಕ ಸಮಾಜಕ್ಕೆ ಸಂತಸ ತಂದಿದೆ ಎಂದು ಅಖೀಲ ಕರ್ನಾಟಕ ಕೇತೇಶ್ವರ ಮೇದಾರ ಸಮಾಜದ ರಾಜ್ಯಾಧ್ಯಕ್ಷ ಪಿ.ಸಿ. ಪಾಟೀಲ್‌ ನುಡಿದರು. ಮೇದಾರ ಸಮುದಾಯದ ಕುಲಗುರುಗಳನ್ನಾಗಿ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿಗೆ ಶ್ರೀ ಶಿವಮೂರ್ತಿ ಮುರುಘಾ ಶರಣರು ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಭಾನುವಾರ ನಡೆದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಲಿಂಗದೀಕ್ಷೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಕೇತೇಶ್ವರ ಮೇದಾರ ಗುರುಪೀಠದ ಗುರು ಬಸವಪ್ರಭು ಶ್ರೀ ಲಿಂಗೈಕ್ಯರಾದ ಬಳಿಕ ಕಳೆದ 5 ವರ್ಷದಲ್ಲಿ ಪೀಠಕ್ಕೆ ಇಬ್ಬರು ಗುರುಗಳನ್ನು ಮಾಡಲಾಗಿತ್ತು. ಅವರ ತಂದೆ, ತಾಯಿ ಅನಾ ರೋಗ್ಯದಿಂದ ಸ್ವಾಮೀಜಿಗಳು ಮಠ ಬಿಟ್ಟು ಹೋದರು. ಈ ಸಂದರ್ಭದಲ್ಲಿ ಬಸವಪ್ರಭುಗಳ ಬಳಿ ಬಾಲ್ಯದಿಂದಲೇ ವಟುವಾಗಿ ಸೇವೆ ಸಲ್ಲಿಸಿದ ಮಂಜುನಾಥ್‌ ಎಂಬುವವರನ್ನು ಮೇದಾರ ಸಮಾಜದವರು ಗುರ್ತಿಸಿ, ಈ ಅನಾಥ ಮಠಕ್ಕೆ ಸ್ವಾಮೀಜಿಯಾಗಿ ನೇಮಕ ಮಾಡಬೇಕೆಂದು ಒಮ್ಮತದಿಂದ ನಿಶ್ಚಯ ಮಾಡಿಕೊಂಡೆವು.

ಮೇದಾರಪೀಠಕ್ಕೆ ನೂತನ ಸ್ವಾಮೀಜಿ ನೇಮಿಸುವ ಸಲುವಾಗಿ ಈ ಪ್ರಸ್ತಾಪವನ್ನು ಮುರುಘಾ ಶರಣರ ಮುಂದಿಟ್ಟೆವು. ಆಗ ಅವರು ದಾವಣಗೆರೆಯ ಕಾರ್ಯಕ್ರಮದಲ್ಲಿ ದೀಕ್ಷೆ ನೀಡುವುದಾಗಿ ತಿಳಿಸಿ, ಅದರಂತೆ ಇಂದು ನೂತನ ಸ್ವಾಮೀಜಿಗೆ ಕಾವಿ ಲಾಂಛನ, ಲಿಂಗದೀಕ್ಷೆ ನೀಡಿ, ನಮ್ಮ ಮಠಕ್ಕೆ ನೂತನ ಸ್ವಾಮೀಜಿಯಾಗಿ ಮಾಡಿದ್ದಾರೆ. ನೂತನ ಸ್ವಾಮೀಜಿ ನೇಮಕದಿಂದ ಸಮಾಜಕ್ಕೆ ಸಂತಸವಾಗಿದೆ ಎಂದರು.

ಚಿತ್ರದುರ್ಗದ ಶಿಬಾರದಲ್ಲಿ ಮುರುಘಾಶರಣರು ನೀಡಿರುವ 5 ಎಕರೆ ಜಾಗದಲ್ಲಿ ಕೇತೇಶ್ವರ ಮಠ ನಿರ್ಮಾಣವಾಗುತ್ತಿದೆ. ಈಗ ಮೂರೂವರೆ ಕೋಟಿ ರೂ. ವೆಚ್ಚದಲ್ಲಿ ಅರ್ಧ ಕೆಲಸ ಮುಗಿದಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

2-davangere

Davangere: ಮಹಿಳೆಯ ಮೇಲೆ ಕರಡಿ ದಾಳಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.