ಆಭರಣ ಕುಶಲಕರ್ಮಿಗಳಿಗೆ ಸೂಕ್ತ ತರಬೇತಿ ಅಗತ್ಯ: ಸಿದ್ದೇಶ್ವರ್
Team Udayavani, Jul 17, 2018, 4:53 PM IST
ದಾವಣಗೆರೆ: ಇಂದಿನ ತಂತ್ರಜ್ಞಾನ ಕಾಲದಲ್ಲಿ ಚಿನ್ನ ಬೆಳ್ಳಿ ಮತ್ತು ಜೆಮ್ಸ್‌ಸೆಟ್ ಕುಶಲಕರ್ಮಿಗಳಿಗೆ ಸೂಕ್ತ ತರಬೇತಿ ಅಗತ್ಯವಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ತಿಳಿಸಿದ್ದಾರೆ.
ಸೋಮವಾರ, ದೈವಜ್ಞ ಕಲ್ಯಾಣ ಮಂಟಪದಲ್ಲಿ ಪ್ರಧಾನ ಮಂತ್ರಿ ಕುಶಲ ವಿಕಾಸ ಯೋಜನೆಯ ಎನ್‌ಎಸ್‌ಡಿಸಿ ಮತ್ತು ಬಿಜೆಎಸ್‌ಸಿಐ ಯ ಆರ್ ಪಿಎಲ್ ಕಾರ್ಯಕ್ರಮದಡಿ ಚಿನ್ನ, ಬೆಳ್ಳಿ ಮತ್ತು ಜೆಮ್ಸ್‌ಸೆಟ್ ಕುಶಲಕರ್ಮಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರ ಮತ್ತು ಪರೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅತಿ ಸೂಕ್ಷ್ಮಕೆಲಸ ಮಾಡುವಂತಹ ಚಿನ್ನ ಬೆಳ್ಳಿ ಮತ್ತು ಜೆಮ್ಸ್‌ಸೆಟ್ ಕುಶಲಕರ್ಮಿಗಳು ಕೆಲಸದಲ್ಲಿ ಇನ್ನೂ ಹೆಚ್ಚಿನ ನೈಪುಣ್ಯತೆ ಸಾಧಿಸಲು ಸೂಕ್ತ ತರಬೇತಿ ಅಗತ್ಯ ಎಂದರು.
ಚಿನ್ನ-ಬೆಳ್ಳಿ ಕೆಲಸಕ್ಕೆ ಹೆಚ್ಚಾಗಿ ಯಂತ್ರೋ ಪಕರಣಗಳ ಬಳಕೆ ಹೆಚ್ಚಾಗುತ್ತಿರುವ ಕಾರಣಕ್ಕೆ ಕೆಲಗಾರರರಿಗೆ ಕೆಲಸ ಕಡಿಮೆ ಆಗಿದೆ. ತಂತ್ರಜ್ಞಾನಕ್ಕೆ ತಕ್ಕಂತೆ ಮತ್ತಷ್ಟು ತರಬೇತಿ, ಆರ್ಥಿಕ ಸಹಾಯ ನೀಡಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.
ತಾಳಿಯಿಂದ ಹಿಡಿದು ಬಂಗಾರದ ಎಲ್ಲಾ ಆಭರಣ ಸಿದ್ಧಗೊಳ್ಳಲು ಅಕ್ಕಸಾಲಿಗರು ಬೇಕೆ ಬೇಕು. ಬ್ಯಾಂಕ್, ಸಂಸ್ಥೆ ಮತ್ತಿತರ ಕಡೆಗಳಲ್ಲೂ ಬಂಗಾರ ಪರೀಕ್ಷೆ ನಡೆಸಲು ಅವರ ಅವಶ್ಯಕತೆ ಇದೆ. ಹೆಚ್ಚಿನ ಗುಣಮಟ್ಟದಲ್ಲಿ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರದಿಂದ ನಿಟುವಳ್ಳಿಯಲ್ಲಿ ಸಹ ತರಬೇತಿ ಕೇಂದ್ರ ತೆರೆಯಲಾಗಿದೆ. ದೈವಜ್ಞ ಸಮಾಜದ ವತಿಯಿಂದಲೇ ಸ್ವ- ಉದ್ಯೋಗ ಹಾಗೂ ಆರ್ಥಿಕ ಸಬಲತೆ ನೀಡಲು ತರಬೇತಿ ಶಿಬಿರ ಏರ್ಪಡಿಸಿರುವುದು ಸ್ವಾಗತಾರ್ಹ. ದೈವಜ್ಞ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ದೈವಜ್ಞ ಸಮಾಜದ ರಾಜ್ಯ ಅಧ್ಯಕ್ಷ ರಾಮರಾವ್ ರಾಯ್ಕರ್ ಮಾತನಾಡಿ, ಬಹುರಾಷ್ಟ್ರೀಯ ಕಂಪನಿಗಳು ಯಂತ್ರೋಪಕರಣಗಳ ಮೂಲಕ ಬಂಗಾರ ಆಭರಣ ತಯಾರಿಕೆ ಆರಂಭಿಸಿ ರುವುದರಿಂದ ತಲತಲಾಂತರದಿಂದ ಕುಶಲಗಾರಿಕೆ ಮಾಡಿಕೊಂಡು ಬಂದವರ ಬದುಕಿಗೆ ಕುತ್ತು ಬಂದಿದೆ. ಕುಶಲಕರ್ಮಿಗಳಿಗೆ ಕೇವಲ ತರಬೇತಿ ಕಾರ್ಡ್ ನೀಡುವ ಜೊತೆಗೆ ಮಾಸಾಶನ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಮುದ್ರಾ ಯೋಜನೆಯಡಿ ಸಾಲ ಕೇಳಿದರೆ ಹಲವಾರು ಕಾನೂನು ಹೇಳಲಾಗುತ್ತದೆ. ಸಂಬಂಧಿತರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿ, ಸಾಲ ಸೌಲಭ್ಯದ ವ್ಯವಸ್ಥೆ ಮಾಡಬೇಕು. ಈ ತರಬೇತಿ ಪಡೆದವರಿಗೆ ನೀಡುವ ಪ್ರಮಾಣ ಪತ್ರದಿಂದ ದೇಶದ ಯಾವ ಮೂಲೆಯಲ್ಲಾದರೂ ಉದ್ಯೋಗ, ಸ್ವಉದ್ಯೋಗ, ಸ್ವಾವಲಂಬಿ ಜೀವನ ನಡೆಸಬಹುದು. ಹಾಗಾಗಿ ಎಲ್ಲರೂ ತರಬೇತಿಯ ಸೂಕ್ತ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಐಶ್ವರ್ಯ ಗೋಲ್ಡ್ ಟೆಸ್ಟಿಂಗ್‌ನ ರಮೇಶ್ ರಾಯ್ಕರ್ ಅಧ್ಯಕ್ಷತೆ ವಹಿಸಿದ್ದರು. ಜಿಎಪಿಎಲ್ ಮಧುರೈನ ಮುಖ್ಯ ತರಬೇತುದಾರ
ಗುರು ಆನಂದನ್, ಬಿ.ವಿ. ಶಿವಾನಂದ್, ಸತ್ಯನಾರಾಯಣ ರಾಯ್ಕರ್, ನಾಗರಾಜ್ ಕೆ. ಕುಡೇಕರ್ ಇತರರು ಇದ್ದರು. ಮುರುಳಿಧರ ಸ್ವಾಗತಿಸಿದರು. ರವೀಂದ್ರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ
ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.