800 ಮಂದಿಗೆ ವಸತಿ ಕಲ್ಪಿಸಲು ನಿರ್ಣಯ
Team Udayavani, Apr 19, 2017, 1:07 PM IST
ಜಗಳೂರು: ನೀರಿನ ತೆರಿಗೆ ಶೇ.15ರಷ್ಟು ಹೆಚ್ಚಿಸುವುದು, ಅವಧಿಧಿ ಮುಗಿದ ಮಳಿಗೆಗಳನ್ನು ಖುಲ್ಲಾಪಡಿಸಿ ಮರು ಹರಾಜು ಮಾಡುವುದು, ನೂತನ ಬಡಾವಣೆಗಳಿಗೆ ಮರುನಾಮಕರಣ ಮಾಡುವುದು, 800 ಮಂದಿಗೆ ವಸತಿ ಕಲ್ಪಿಸುವುದು, ಆಸ್ಪತ್ರೆಯಲ್ಲಿ ಗಂಜಿ ಕೇಂದ್ರ ತೆರೆಯಲು ಪಟ್ಟಣ ಪಂಚಾಯತ್ ಮಂಗಳವಾರ ನಿರ್ಣಯ ಕೈಗೊಂಡಿತ್ತು.
ಪಪಂ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷ ಭೇದ ಮರೆತು ಅನಮೋದಿಸಿದರು. ಸದಸ್ಯ ಚಂದ್ರಪ್ಪ ಮಾತನಾಡಿ, ಖಾಲಿಯಾಗಿರುವ ಮಳಿಗೆಗಳನ್ನು ಎರಡು ವರ್ಷವಾದರೂ ಮರು ಹರಾಜು ಮಾಡಲು ನಿಮ್ಮಿಂದ ಆಗುತ್ತಿಲ್ಲ ಎಂದು ಸಾರ್ವಜನಿಕರು ನಮಗೆ ಗೇಲಿ ಮಾಡುತ್ತಿದ್ದಾರೆ.
ತರಕಾರಿ ಮಾರುಕಟ್ಟೆ ಮತ್ತು ಅವಧಿ ಮೀರಿದ ಹಾಗೂ ಖಾಲಿ ಇರುವ ಮಳಿಗೆಗಳನ್ನು ಬಹಿರಂಗ ಹರಾಜು ಹಾಕುವಂತೆ ಪಟ್ಟು ಹಿಡಿದರು. ಇದಕ್ಕೆ ಸದಸ್ಯರಾದ ತಿಪ್ಪೇಸ್ವಾಮಿ, ಬಂಗಾರಪ್ಪ ಬೆಂಬಲ ವ್ಯಕ್ತಪಡಿಸಿದರು. ಸದಸ್ಯ ಜಯ್ಯಣ್ಣ ಮಾತನಾಡಿ, ಕಚೇರಿ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಖಾಸಗಿ ವಾಹನಕ್ಕೆ 1.83 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ಟೆಂಡರ್ ಕರೆಯದೇ ವಾಹನ ಪಡೆದಿರುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರು. ಪಟ್ಟಣದಲ್ಲಿ ಕುಡಿಯುವ ನೀರನ್ನು ಟ್ಯಾಂಕ್‌ರ ಮೂಲಕ ವಿತರಿಸಲಾಗುತ್ತದೆ ಎಂದು ಹೇಳುತ್ತೀರಿ, ಆದರೆ ಪೈಪ್‌ಲೈನ್ ಸೇರಿದಂತೆ ಇತರೇ ರಿಪೇರಿಗೆ 2.60 ಲಕ್ಷ ರೂ. ಖರ್ಚು ಮಾಡಲಾಗಿದೆ. ಪಪಂನ ಪಾಸ್‌ಶೀಟ್ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ನೀಡುತ್ತಿಲ್ಲ.
ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. ಅಧಿಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾರದರ್ಶಕವಾಗಿದ್ದಾಗ ಹಿಂಜರಿಕೆ ಬೇಡ ಕೂಡಲೇ ಎಲ್ಲಾ ಸದಸ್ಯರಿಗೆ 2013ರಿಂದ ಇಲ್ಲಿಯವರೆಗೆ ಪಾವತಿಸಲಾದ ಬಿಲ್ಲಿನ ಪಾಸ್ ಶೀಟ್ ಕೊಡಿ ಅವರು ಕೇಳಿದ ದಾಖಲೆಗಳನ್ನು ಒದಗಿಸಿ ಎಂದು ಶಾಸಕ ಎಚ್.ಪಿ.ರಾಜೇಶ್ ಸೂಚನೆ ನೀಡಿದರು.
ಮೂರು ವರ್ಷಕ್ಕೊಮ್ಮೆ ನೀರಿನ ತೆರಿಗೆಯನ್ನು ಪರಿಷ್ಕರಣೆ ಮಾಡಬೇಕೆಂದು ಪೌರನಿರ್ದೇಶನಾಲಯದಿಂದ ಸುತ್ತೋಲೆ ಬಂದಿದೆ. ಪ್ರಸ್ತುತ ಮಾಸಿಕ 80 ರೂಪಾಯಿ ವಸೂಲಿ ಮಾಡಲಾಗುತ್ತದೆ. ನಿಯಮಾನುಸಾರ ನೀರಿನ ತೆರಿಗೆ ಪರಿಷ್ಕರಣೆ ಆಗಬೇಕಾಗಿದೆ. ಸದಸ್ಯರು ಸಲಹೆ ನೀಡುವಂತೆ ಮುಖ್ಯಾಧಿಕಾರಿ ಬಿ.ಕಂಪಳಮ್ಮ ಮನವಿ ಮಾಡಿದರು.
ಬಿಜೆಪಿಯ ಎಂಎಲ್‌ಎ ತಿಪ್ಪೇಸ್ವಾಮಿ ಮಾತನಾಡಿ, ಬರವಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ತೆರಿಗೆ ಹೆಚ್ಚಿಸಿದರೆ ನಾಗರೀಕರು ಒಪ್ಪುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಶೇಕಡ 10ರಷ್ಟು ಮಾತ್ರ ಹೆಚ್ಚಿಸುವಂತೆ ಸದಸ್ಯರಾದ ಅಪ್ಸರಮಂಜು, ಮಂಜಣ್ಣ, ರುದ್ರಣ್ಣ ಒತ್ತಾಯಿಸಿದರು. ಕೊನೆಗೆ ಶೇ.15ರಷ್ಟು ತೆರಿಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಯಿತು.
ಅಧ್ಯಕ್ಷರ ಬೇಸರ: ನನ್ನ ಅನುಮತಿ ಇಲ್ಲದೇ ಬಿಲ್ ಪಾಸಾಗುತ್ತವೆ. ಅಲ್ಲದೇ ನನ್ನ ಗಮನಕ್ಕೆ ತರದೇ ಖರ್ಚು ಮಾಡಲಾಗುತ್ತದೆ. ಕೇಳಿದರೆ ನಿಮ್ಮ ಅನುಮತಿ ಕೇಳುವ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ. ಮಾಹಿತಿ ಕೇಳಿದರೆ ಕೊಡುತ್ತಿಲ್ಲ ಎಂದು ಪಪಂ ಅಧ್ಯಕ್ಷೆ ನೂರಜಹಾನ್ ಶಾಸಕ ಎಚ್.ಪಿ.ರಾಜೇಶ್ ಅವರ ಗಮನಕ್ಕೆ ತಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!
Bengaluru: ಬಿಯರ್ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ
Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.