ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಹಬ್ಬ

ಕಲಿಕಾ ಚೇತರಿಕೆಗೆ ಪೂರಕ ವಿಶಿಷ್ಟ ಕಾರ್ಯಕ್ರಮ ; ನಾಲ್ಕು ಕಾರ್ನರ್‌ಗಳಲ್ಲಿ ಹಬ್ಟಾಚರಣೆ

Team Udayavani, Dec 10, 2022, 5:51 PM IST

19

ದಾವಣಗೆರೆ: ಪ್ರಸಕ್ತ ಶೈಕ್ಷಣಿಕ ವರ್ಷವನ್ನು “ಕಲಿಕಾ ಚೇತರಿಕೆ’ ವರ್ಷವನ್ನಾಗಿಸಿಕೊಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಇದಕ್ಕೆ ಪೂರಕವಾಗಿ “ಕಲಿಕಾ ಹಬ್ಬ’ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿದೆ.

ರಾಜ್ಯದ ಎಲ್ಲ ಶಾಲಾ ಕ್ಲಸ್ಟರ್‌ಗಳಲ್ಲಿ ಎರಡು ದಿನ “ಕಲಿಕಾ ಹಬ್ಬ’ ಜ.10ರಿಂದ 25ರವರೆಗೆ ನಡೆಯಲಿದೆ. ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲೂ ಜ.27ರಿಂದ ಫೆ.10ರವರೆಗೆ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ನಡೆಯಲಿದೆ. ರಾಜ್ಯದ ಎಲ್ಲ 4103 ಕ್ಲಸ್ಟರ್‌ ಹಾಗೂ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದೆ. ಪ್ರತಿ ಕ್ಲಸ್ಟರ್‌ನಲ್ಲಿ ವಿವಿಧ ಶಾಲೆಯ ಒಟ್ಟು 120 ವಿದ್ಯಾರ್ಥಿಗಳು ಅಂದರೆ 4,92,360 ವಿದ್ಯಾರ್ಥಿಗಳು ಕ್ಲಸ್ಟರ್‌ ಮಟ್ಟದ ಕಲಿಕಾ ಹಬ್ಬದಲ್ಲಿ ಭಾಗವಹಿಸುವರು. ಪ್ರತಿ ಜಿಲ್ಲೆಗಳಲ್ಲಿ ವಿವಿಧ ತಾಲೂಕುಗಳಿಂದ ಒಟ್ಟು 300 ವಿದ್ಯಾರ್ಥಿಗಳು, 10,500 ವಿದ್ಯಾರ್ಥಿಗಳು ಜಿಲ್ಲಾ ಕಲಿಕಾ ಹಬ್ಬದಲ್ಲಿ ಪಾಲ್ಗೊಳ್ಳುವರು. ವಿದ್ಯಾರ್ಥಿಗಳ ನಾಯಕತ್ವ ದಲ್ಲಿ ಪ್ರತಿ ಶಾಲೆಯಲ್ಲಿಯೂ “ಕಲಿಕಾ ಹಬ್ಬ’ ನಡೆಯಲಿದೆ.

ಏನು ಉದ್ದೇಶ?:

ಕಲಿಕಾ ಚೇತರಿಕ ಕಾರ್ಯಕ್ರಮ ಹಾಗೂ ಚಟುವಟಿಕೆ ಆಧಾರಿತ ಕಲಿಕೆ ಬಗ್ಗೆ ಪಾಲಕರು ಹಾಗೂ ಸಮುದಾಯಕ್ಕೆ ಅರಿವು ಮೂಡಿಸುವುದು. ನಾವೀನ್ಯಯುತ ಮತ್ತು ಎಲ್ಲವೂ ಒಳಗೊಂಡ ಬೋಧನೆಗೆ ಪ್ರೋತ್ಸಾಹ ನೀಡುವುದು. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಕುತೂಹಲ ಮೂಡಿಸಿ, ಪ್ರಶ್ನೆ ಕೇಳುವಂತೆ ಪ್ರೋತ್ಸಾಹಿಸುವುದು. ಕಲಿಕಾ ಪ್ರಕ್ರಿಯೆನ್ನು ಸಂತಸಗೊಳಿಸುವುದು. ವಿದ್ಯಾರ್ಥಿಗಳ ಹಿಂಜರಿಕೆ ಹೋಗಲಾಡಿಸಿ, ಆತ್ಮವಿಶ್ವಾಸ ಹೆಚ್ಚಿಸುವುದು ಕಾರ್ಯಕ್ರಮದ ಉದ್ದೇಶ.

ಕಲಿಕಾ ಹಬ್ಬದ ಪ್ರಕ್ರಿಯೆ:

ಕಲಿಕಾ ಹಬ್ಬವು ನಾಲ್ಕು ಕಾರ್ನರ್‌ ಗಳಲ್ಲಿ ನಡೆಯಲಿದೆ. ಮೊದಲನೇ ಕಾರ್ನರ್‌ನಲ್ಲಿ ಆಡು-ಹಾಡು (ಇಲ್ಲಿ ಭಾಷಾ ಕೌಶಲ್ಯ ಅಭಿವೃದ್ಧಿಯಾಗುತ್ತದೆ), ಎರಡನೇ ಕಾರ್ನರ್‌ನಲ್ಲಿ ಕಾಗದ-ಕತ್ತರಿ (ಇಲ್ಲಿ ವಿದ್ಯಾರ್ಥಿಗಳು ಚಿಕ್ಕ, ದೊಡ್ಡ ಗೊಂಬೆ ತಯಾರಿಕೆ, ಪೇಪರ್‌ ಕಟ್ಟಿಂಗ್‌ಗಳಿದ ವಿವಿಧ ವಸ್ತುಗಳನ್ನು ಮಾಡಲು ಕಲಿಯುತ್ತಾರೆ), ಮೂರನೇ ಕಾರ್ನರ್‌ ಮಾಡು-ಆಡು (ಇಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತ ಕೌಶಲ್ಯ ಬೆಳೆಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮಲ್ಲಿಯೇ ಚರ್ಚಿಸಿ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ). ನಾಲ್ಕನೇ ಕಾರ್ನರ್‌ನಲ್ಲಿ ಊರು ಸುತ್ತೋಣ (ಒಂದು ಮರದ ಅಧ್ಯಯನ, ಜೈವಿಕ ಲೋಕ ಅರಿಯೋಣ, ಸಂದರ್ಶನ, ನಕ್ಷೆ ರಚಿಸೋಣ) ಎಂಬ ಕಾರ್ಯಕ್ರಮದ ಪರಿಕಲ್ಪನೆ ಒಳಗೊಂಡಿದೆ.

ಕಲಿಕಾ ಹಬ್ಬ ಸಂಘಟನೆಗಾಗಿ ಸಂಪನ್ಮೂಲ ವ್ಯಕ್ತಿಗಳಿಗೆ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಬೆಂಗಳೂರು ಹಾಗೂ ಧಾರವಾಡದಲ್ಲಿ ರಾಜ್ಯಮಟ್ಟದ ತರಬೇತಿ ನೀಡಲಾಗಿದ್ದು, ಜಿಲ್ಲಾ ಹಂತದ ತರಬೇತಿ ಡಿ.12ರಿಂದ 22ರವರೆಗೆ ನಡೆಯಲಿದೆ. ತಾಲೂಕು ಮಟ್ಟದಲ್ಲಿ ತರಬೇತಿ ಜ.1ರಿಂದ 10ರವರೆಗೆ ನಡೆಯಲಿದೆ.

ಕಲಿಕಾ ಹಬ್ಬದ ಯಶಸ್ಸಿಗಾಗಿ ಸ್ವಾಗತ ಸಮಿತಿ ರಚಿಸಬೇಕು. ಇದು ಪಟ್ಟಣ, ಗ್ರಾಮದ ಜನಪ್ರತಿನಿಧಿಗಳು ಊರಿನ ಹಿರಿಯರು, ಯುವಕರು, ಹಳೆಯ ವಿದ್ಯಾರ್ಥಿಗಳ ಸಂಘ, ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಕಾರ್ಯ ನಿರ್ವಹಿಸುವ ಸರ್ಕಾರೇತರ ಸೇವಾ ಸಂಸ್ಥೆಗಳು, ವೈದ್ಯರು, ಶಿಕ್ಷಕರು, ಅಧಿಕಾರಿಗಳನ್ನೊಳಗೊಂಡಿ ರಬೇಕು. ಸಭೆ ನಡೆಸಿ, ಹಬ್ಬದ ಕುರಿತು ಚರ್ಚಿಸಿ, ಕಲಿಕಾ ಹಬ್ಬದ ಸಂಘಟನೆಗೆ ಸಮುದಾಯ ಹಾಗೂ ಜನಪ್ರತಿನಿಧಿಗಳ ನೆರವು ಪಡೆಯಬೇಕು. ತನ್ಮೂಲಕ ಸಮುದಾಯ ಸಂಪೂರ್ಣವಾಗಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಹ ಇಲಾಖೆ ಸೂಚನೆ ನೀಡಿದೆ.

ಶಿಕ್ಷಣ, ಜೀವನ ಕೌಶಲ ಬೆಳೆಸುವ ಆಲೋಚನೆ

ಬಾಯಿ ಪಾಠ ಮಾಡುವ ಶಿಕ್ಷಣ ಕೈಬಿಟ್ಟು ಅನ್ವಯಿಕ, ವೈಜ್ಞಾನಿಕ, ವಿಮಶಾìತ್ಮಕವಾಗಿ ಯೋಚಿಸುವಂಥ ಶಿಕ್ಷಣ ನೀಡುವ ಅಂಶಗಳನ್ನು ಕಲಿಕಾ ಹಬ್ಬ’ ಹೊಂದಿದೆ. ಮಕ್ಕಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವುದು, ಕಲಿಕಾ ಹಬ್ಬದ ಪರಿಕಲ್ಪನೆಯಾಗಿದೆ. ಜತೆಗೆ ವಿದ್ಯಾರ್ಥಿಗಳು ತಮ್ಮ ಕೌಶಲ ವ್ಯಕ್ತಪಡಿಸಲು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹೊಸದನ್ನು ಕಲಿಯಲು ಇದೊಂದು ಉತ್ತಮ ಅವಕಾಶ ಎಂಬುದು ಸಾರ್ವಜನಿಕ ಶಿಕ್ಷಣ ಇಲಾಖೆ ಆಲೋಚನೆಯಾಗಿದೆ.

ಸ್ನೇಹಿತರ ಮನೆಯಲ್ಲಿ ವಾಸ: ಜಿಲ್ಲಾಮಟ್ಟದ ಕಲಿಕಾ ಹಬ್ಬದಲ್ಲಿ 4ರಿಂದ 9ನೇ ತರಗತಿಯ ಒಟ್ಟು 300 ವಿದ್ಯಾರ್ಥಿಗಳು (ಅತಿಥಿ-ಅತಿಥೇಯ ಎಂಬ ಎರಡು ವಿಭಾಗ ತಲಾ 150 ವಿದ್ಯಾರ್ಥಿಗಳು. ಇದರಲ್ಲಿ 150 ಬಾಲಕರು, 150 ಬಾಲಕಿಯರು ಇರುತ್ತಾರೆ) ಬೇರೆ ಬೇರೆ ತಾಲೂಕುಗಳಿಂದ ಭಾಗವಹಿಸುವರು. ಅತಿಥೇಯ ಶಾಲೆಯ ವಿದ್ಯಾರ್ಥಿಗಳ ಮನೆಗೆ ಬೇರೆ ತಾಲೂಕಿನಿಂದ ಬಂದ ವಿದ್ಯಾರ್ಥಿಗಳು ಅತಿಥಿಗಳಾಗಿ ಮೂರು ದಿನ ಜೊತೆಯಲ್ಲಿ ವಾಸಿಸುವರು. “ಕಲಿಕಾ ಹಬ್ಬ’ ಆಚರಿಸಲು ಇಲಾಖೆಯಿಂದ ನಿರ್ದೇಶನ ಬಂದಿದ್ದು ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗುವುದು. ಇಲಾಖೆ ಮಾರ್ಗಸೂಚಿಯಂತೆ ಸ್ವಾಗತ ಸಮಿತಿ ರಚಿಸಿ, ಕಲಿಕಾ ಹಬ್ಬ ಯಶಸ್ಸಿಗೆ ಕ್ರಮ ವಹಿಸಲಾಗುವುದು.   –ಜಿ.ಆರ್‌. ತಿಪ್ಪೇಶಪ್ಪ, ಡಿಡಿಪಿಐ, ದಾವಣಗೆರೆ

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Mangaluru: ವಿಧಾನ ಪರಿಷತ್ ಉಪಚುನಾವಣೆ… ನಿರೀಕ್ಷೆಯಂತೆ ಬಿಜೆಪಿ ಸುಲಭ ಗೆಲುವು

Mangaluru: ವಿಧಾನ ಪರಿಷತ್ ಉಪಚುನಾವಣೆ… ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

Dandeli: ಭಾರೀ ಮಳೆಗೆ ಮನೆಯ ಮೇಲೆ ಉರುಳಿದ ಬೃಹತ್ ಮರ… ಅಪಾರ ಹಾನಿ

Dinesh-gundurao

Health Care: ಇಂದು ಗೃಹ ಆರೋಗ್ಯ ಯೋಜನೆಗೆ ಚಾಲನೆ

Nikhil

Chennapattana By Poll: ಕಣಕ್ಕೆ ನಿಖಿಲ್‌, ಜಯಮುತ್ತು? ಇನ್ನೂ ಗೊಂದಲದಲ್ಲಿ ಜೆಡಿಎಸ್‌

Bengaluru: ಕಂಬಳ ಆಯೋಜನೆ; ನ. 5ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

Bengaluru: ಕಂಬಳ ಆಯೋಜನೆ; ನ. 5ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.