26ಕ್ಕೆ ಮತ್ತೆ ಕಲ್ಯಾಣ ಆಂದೋಲನ ಪೂರ್ವಭಾವಿ ಸಭೆ
Team Udayavani, Jun 25, 2019, 7:35 AM IST
ದಾವಣಗೆರೆ: ಸಹಮತ... ವೇದಿಕೆ ಪದಾಧಿಕಾರಿಗಳ ಸುದ್ದಿಗೋಷ್ಠಿ.
ದಾವಣಗೆರೆ: ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಆ. 22 ರಂದು ನಡೆಯಲಿರುವ ಮತ್ತೆ ಕಲ್ಯಾಣ…ಆಂದೋಲನದ ಹಿನ್ನೆಲೆಯಲ್ಲಿ ಜೂ. 26 ರಂದು ಕುವೆಂಪು ಕನ್ನಡ ಭವನದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಹಮತ ವೇದಿಕೆಯ ಡಾ| ಎಚ್.ಎಸ್. ಮಂಜುನಾಥ್ ಕುರ್ಕಿ ತಿಳಿಸಿದ್ದಾರೆ.
ಮತ್ತೆ ಕಲ್ಯಾಣ… ಆಂದೋಲನದ ಯಶಸ್ಸಿಗೆ ರೂಪುರೇಷೆ, ಎಲ್ಲಾ ಜಾತಿ, ವರ್ಗದ ಮಠಾಧೀಶರು, ಮುಖಂಡರನ್ನು ಆಹ್ವಾನಿಸುವುದು ಒಳಗೊಂಡಂತೆ ಅನೇಕ ವಿಚಾರಗಳ ವಿನಿಮಯ, ಚಿಂತನೆ-ಮಂಥನ ಮಾಡುವ ಉದ್ದೇಶದಿಂದ ಬುಧವಾರ ಬೆಳಗ್ಗೆ 11ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡ ನಾಡಿನಲ್ಲಿ 900 ವರ್ಷಗಳ ಹಿಂದೆ ಬಸವಾದಿ ಶರಣರ ನೇತೃತ್ವದಲ್ಲಿ ಜಾತಿ, ಮತ, ಪಂಥ, ಲಿಂಗ ಭೇದ, ಅಸಮಾನತೆಯ ವಿರುದ್ಧ ಕಲ್ಯಾಣ ಕ್ರಾಂತಿ ನಡೆದಿತ್ತು. ಪ್ರಸ್ತುತ ವಾತಾವರಣದಲ್ಲಿ ಅಂತಹ ಕ್ರಾಂತಿಯ ಅಗತ್ಯತೆ ಇದೆ. ಅಂತಹ ತತ್ವಗಳು, ಮಾನವೀಯ ಚಿಂತನೆಗಳತ್ತ ಹೊರಳಿ ನೋಡುವ ಪ್ರಯತ್ನವೇ ಮತ್ತೆ ಕಲ್ಯಾಣ… ಆಂದೋಲನ ಎಂದು ತಿಳಿಸಿದರು.
ಮತ್ತೆ ಕಲ್ಯಾಣ ಆಂದೋಲನ… ಕೇವಲ ಒಂದು ಸಮಾರಂಭ, ವಿಚಾರ ಸಂಕಿರಣ ಅಲ್ಲ. ಸಮಾಜದ ಇಂದಿನ ತಲ್ಲಣಗಳಿಗೆ ಇದೇ ನೆಲದಲ್ಲಿ ಜನ್ಮ ತಳೆದ ಶರಣ ಚಳವಳಿಯ ತಾತ್ವಿಕ ಭಿತ್ತಿಯೊಳಗಿನಿಂದ ಪರಿಹಾರಗಳನ್ನು ಹುಡುಕಿಕೊಳ್ಳುವ ಅನ್ವೇಷಣೆ. ವ್ಯಕ್ತಿ, ಕಸುಬು, ಜಾತಿ, ಲಿಂಗ, ಭಾಷೆ, ಧರ್ಮಗಳ ಹೆಸರಲ್ಲಿ ಮನುಷ್ಯರು ಸಹಜೀವಿಗಳಿಂದ ಸರಿಯುತ್ತಾ ಒಡೆದು ಹೋಗುತ್ತಿರುವ ಆತಂಕದ ಮಧ್ಯೆ ಜೊತೆ ಜೊತೆಯಾಗಿಯೇ ಮುನ್ನಡೆಯಲು ತೊಡಗುತ್ತಿರುವ ಹೊಸ ಪ್ರಕ್ರಿಯೆ ಎಂದು ತಿಳಿಸಿದರು.
ಆಗಸ್ಟ್ ತಿಂಗಳ ಪೂರ್ತಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ನಡೆಯಲಿರುವ ಮತ್ತೆ ಕಲ್ಯಾಣ ಆಂದೋಲನ… ಆ.1 ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಪ್ರಾರಂಭವಾಗಲಿದೆ. 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯ ನಂತರ ಕೆಲವರು ವಚನಗಳನ್ನು ಸುಡುವ ಪ್ರಯತ್ನ ನಡೆಸಿದಾಗ ವಚನಕಾರ್ತಿ ಅಕ್ಕನಾಗಮ್ಮ ವಚನಗಳ ಗಂಟು ಹೊತ್ತುಕೊಂಡು ಬಂದು ತರೀಕೆರೆ ಸಮೀಪದ ಎಣ್ಣೆಹಳ್ಳಿಯಲ್ಲಿ ಸಂರಕ್ಷಿಸಿ, ಸಂವರ್ಧನೆಗೆ ತಂದ ನೆನಪಿನಲ್ಲಿ ತರೀಕೆರೆಯಿಂದ ಪ್ರಾರಂಭಿಸಿ, ಆ.30 ರಂದು ಬಸವ ಕಲ್ಯಾಣದಲ್ಲಿ ಮುಕ್ತಾಯವಾಗಲಿದೆ. ದಾವಣಗೆರೆಯಲ್ಲಿ ಆ.22 ರಂದು ಆಂದೋಲನದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಎಂ. ಶಿವಕುಮಾರ್, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಜಿಪಂ ಸದಸ್ಯ ಕೆ.ಎಸ್. ಬಸವಂತಪ್ಪ, ನಗರಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್ ಶಿವಗಂಗಾ, ಶಶಿಧರ್ ಹೆಮ್ಮನಬೇತೂರು, ಶ್ರೀನಿವಾಸ್ ಮಳ್ಳೆಕಟ್ಟೆ, ಕೊರಟಿಕೆರೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ಅತ್ಯಾ*ಚಾರ ಪ್ರಕರಣ: ಆರೋಪಿಗೆ ಜಾಮೀನು
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.