ಕನಿಷ್ಠ ಶೇ.65ರಷ್ಟು ಸಿಡಿ ಅನುಪಾತ ಕಾಯ್ದುಕೊಳ್ಳಿ
Team Udayavani, Mar 28, 2017, 1:13 PM IST
ದಾವಣಗೆರೆ: ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಸಾಲ ನೀಡಿಕೆ, ಠೇವಣಿ ಸೀÌಕೃತಿಯ ಅನುಪಾತವನ್ನು ಕನಿಷ್ಠ 65ರಷ್ಟು ಸಾಧಿಸಲೇಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ತಾಕೀತು ಮಾಡಿದ್ದಾರೆ. ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಪುಸ್ತಕ ಬಿಡುಗಡೆಗೊಳಿಸಿ, ಮಾತನಾಡಿದರು.
ಅನೇಕ ಬ್ಯಾಂಕ್‌ಗಳು ಸಿಡಿ ಅನುಪಾತ ಕಾಪಾಡಿಕೊಂಡಿಲ್ಲ. ಸಾಲ ನೀಡಿಕೆಯಲ್ಲಿ ಸಾಕಷ್ಟು ಹಿಂದೆ ಬಿದ್ದಿವೆ. ಕೆಲ ಬ್ಯಾಂಕ್‌ಗಳು ಎರಡಂಕಿ ಸಹ ಮುಟ್ಟಿಲ್ಲ. ಅಂತಹ ಬ್ಯಾಂಕ್‌ಗಳು ಮುಂದಿನ ದಿನಗಳಲ್ಲಿ ತಮ್ಮ ನಿರೀಕ್ಷಿತ ಗುರಿ ಸಾಧಿಸಲು ಶ್ರಮಿಸಬೇಕಿದೆ ಎಂದರು. ಸಭೆ ಆರಂಭದಲ್ಲಿ ಮಾತನಾಡಿದ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಎನ್.ಟಿ. ಯರ್ರಿಸ್ವಾಮಿ, ಈ ವರ್ಷ ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳ ಮೂಲಕ ಒಟ್ಟು 3704.26 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ.
ಜಿಲ್ಲೆಯಲ್ಲಿ 125 ರಾಷ್ಟ್ರೀಕೃತ, 64 ಗ್ರಾಮೀಣ, 14 ಡಿಸಿಸಿ, 34 ಖಾಸಗಿ, 7 ಭೂ ಅಭಿವೃದ್ಧಿ/ಇತರೆ ಬ್ಯಾಂಕ್‌ಗಳಿವೆ. ಈ ಬ್ಯಾಂಕ್‌ಗಳ ಮೂಲಕ ಆದ್ಯತಾ ವಲಯಕ್ಕೆ 3166.14 ಕೋಟಿ, ಆದ್ಯತಾರಹಿತ ವಲಯಕ್ಕೆ 538.12 ಕೋಟಿ ರೂ. ಸಾಲ ನೀಡುವ ಉದ್ದೇಶ ಇದೆ ಎಂದರು. ಕೃಷಿಗೆ 2124.14 ಕೋಟಿ ರೂ., ಕೈಗಾರಿಕೆಗೆ 467.29 ಕೋಟಿ ರೂ. ಸಾಲ ನೀಡುವ ಗುರಿ ಹೊಂದಲಾಗಿದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ 2425.77 ಕೋಟಿ, ಗ್ರಾಮೀಣ ಬ್ಯಾಂಕ್ ಮೂಲಕ 931.45 ಕೋಟಿ, ಸಹಕಾರಿ ಬ್ಯಾಂಕ್ ಮೂಲಕ 340.04 ಕೋಟಿ ರೂ. ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ಅವರು ನೀಡಿದರು. ಕಳೆದ ಸಾಲಿನಲ್ಲಿ 2371.51 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿತ್ತು. ಇದರಲ್ಲಿ 2156.16 ಕೋಟಿ ರೂ. ಸಾಲ ನೀಡಲಾಗಿದೆ.
ಕೃಷಿ ವಲಯಕ್ಕೆ 1,410 ಗುರಿಯಲ್ಲಿ 1260 ಕೋಟಿ ರೂ., ಕೈಗಾರಿಕಾ ವಲಯಕ್ಕೆ 284 ಕೋಟಿ ರೂ. ಗುರಿಯಲ್ಲಿ 283 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಅವರು ತಿಳಿಸಿದರು. ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಪ್ರಗತಿ ಕುರಿತು ಪ್ರಶ್ನಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್, ಆಧಾರ್ ಜೋಡಣೆ ಕಾರ್ಯ ಚುರುಕುಗೊಳಿಸಿ.
ಗ್ರಾಹಕರು ಯಾವುದೇ ಕಾರಣಕ್ಕೂ ಬ್ಯಾಂಕ್‌ಗೆ ಬಂದು ಆಧಾರ್ ಜೋಡಣೆಗೆ ಮುಂದಾಗುವುದಿಲ್ಲ. ಅವರನ್ನು ನೀವೇ ಸಂಪರ್ಕಿಸಿ ಆಧಾರ್ ಸಂಖ್ಯೆ ಜೋಡಣೆ ಮನವರಿಕೆ ಮಾಡಿಕೊಡಿ ಎಂದರು. ಇದಕ್ಕೆ ಉತ್ತರಿಸಿದ ಯರ್ರಿಸ್ವಾಮಿ, ಜಿಲ್ಲೆಯಲ್ಲಿ ಒಟ್ಟು 19.53 ಲಕ್ಷ ಬ್ಯಾಂಕ್ ಖಾತೆಗಳಿದ್ದು, 1.62 ಲಕ್ಷ ಖಾತೆಗಳು ಚಾಲ್ತಿಯಲ್ಲಿಲ್ಲ.
17.91 ಲಕ್ಷ ಖಾತೆಯಲ್ಲಿ 10.03 ಲಕ್ಷ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ. ಇನ್ನೂ 7.88 ಲಕ್ಷ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಕಾರ್ಯ ಆಗಬೇಕಿದೆ ಎಂದರು. ಆಗ ಮಧ್ಯ ಪ್ರವೇಶಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿ, ನೀವು ನಮಗೆ ಒಪ್ಪಿಗೆ ಪತ್ರದ ಅರ್ಜಿ ನೀಡಿ.
ನಾವು ಉದ್ಯೋಗ ಖಾತ್ರಿ ಕೂಲಿಕಾರರ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯ ಒಪ್ಪಿಗೆ ಪತ್ರ ಪಡೆದುಕೊಂಡು ನೀಡುತ್ತೇವೆ ಎಂದರು. ಕೆನರಾ ಬ್ಯಾಂಕ್ ಕ್ಷೇತೀಯ ಮಹಾಪ್ರಬಂಧಕ ಎಚ್.ಎಂ. ಕೃಷ್ಣ, ಆರ್‌ಬಿಐನ ವಲಯ ವ್ಯವಸ್ಥಾಪಕ ಪಟ್ನಾಯಕ್, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರವೀಂದ್ರ, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಸಭೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.