ಕೇಶವಮೂರ್ತಿಯವರ ಸಮಾಜಮುಖೀ ಸೇವೆ ಶ್ಲಾಘನೀಯ
Team Udayavani, Jan 28, 2019, 7:08 AM IST
ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯವು ಹಿರಿಯ ಪತ್ರಕರ್ತ ಸಿ. ಕೇಶವಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಚಿತ್ರದುರ್ಗ ಶ್ರೀ ಬಸವ ಮಾದರ ಚನ್ನಯ್ಯ ಸ್ವಾಮೀಜಿ ಆಗ್ರಹಿಸಿದರು.
ನಗರದ ಸಿದ್ಧಗಂಗಾ ಶಾಲೆ ಆವರಣದಲ್ಲಿ ಭಾನುವಾರ ಜಿಲ್ಲಾ ಸಮಾಚಾರ ಪತ್ರಿಕೆ ಬಳಗದಿಂದ ಹಮ್ಮಿಕೊಂಡಿದ್ದ 2018ರ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಸಿ. ಕೇಶವಮೂರ್ತಿ ಅವರು ಕೇವಲ ಪತ್ರಿಕೋದ್ಯಮ ಮಾತ್ರವಲ್ಲದೇ, ರಾಜಕೀಯ ಕ್ಷೇತ್ರದಲ್ಲಿ ಇದ್ದಾಗಲೂ ಸಾಕಷ್ಟು ಸಮಾಜಮುಖೀ ಕಾರ್ಯಗಳನ್ನು ಮಾಡಿದ್ದಾರೆ. ಅವರು ಮಾಡಿಸಿದ ಉತ್ತಮ ರಸ್ತೆಗಳು, ಕಾಮಗಾರಿಗಳು, ಬೆಳೆಸಿದ ಗಿಡಮರಗಳ ಸಾರ್ಥಕ ಕೆಲಸ ಇಂದಿಗೂ ಮಾದರಿಯಾಗಿವೆ. ಹಾಗಾಗಿ ಅವರಿಗೆ ಸ್ಥಳೀಯ ದಾವಣಗೆರೆ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದ್ದಾದರೆ ನಿಜಕ್ಕೂ ಅದು ಅವರಿಗೆ ನೀಡಿದಂತ ಗೌರವವಾಗುತ್ತದೆ ಎಂದರು.
ಅಚ್ಚುಮೊಳೆಗಳ ಪ್ರಸರಣದಿಂದ ತಮ್ಮ ಪತ್ರಿಕೆ ಆರಂಭಿಸಿ ಇಂದಿನ ಆಫ್‌ಸೆಟ್ವರೆಗೆ ನಾಲ್ಕೂವರೆ ದಶಕಗಳ ಕಾಲ ಮುಂದುವರೆಸಿಕೊಂಡು ಬಂದಿರುವುದು ನಿಜಕ್ಕೂ ಸವಾಲಿನ ಕೆಲಸ. ಅದಕ್ಕೆ ಅವರಲ್ಲಿರುವ ಇಚ್ಛಾಶಕ್ತಿ, ಜನಪರ ಕಾಳಜಿ ಕಾರಣ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಹೆಣ್ಣುಮಕ್ಕಳಿಗೆ ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ನೀಡುವುದೇ ಕಡಿಮೆ. ಆದರೆ, ಮಾಜಿ ಶಿಕ್ಷಣ ಸಚಿವೆ ನಾಗಮ್ಮ ಕೇಶವಮೂರ್ತಿ ಅವರಿಗೆ ಸಿ. ಕೇಶವಮೂರ್ತಿ ಅವರು ರಾಜಕೀಯದಲ್ಲಿ ಉತ್ತಮ ಸ್ಥಾನ ಪಡೆಯಲು ಬೆನ್ನುಲುಬಾಗಿ ನಿಂತವರು. ಜೊತೆಗೆ ತಾವು ಅಧಿಕಾರದಲ್ಲಿದ್ದಾಗ ಉತ್ತಮ ಸಮಾಜಮುಖೀ ಸೇವೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಹಿರಿಯ ಪತ್ರಕರ್ತೆ ಡಾ| ವಿಜಯಾ ಮಾತನಾಡಿ, ಇಂದಿನ ಜಾಗತೀಕರಣದ ವ್ಯವಸ್ಥೆಯಲ್ಲಿ ಕೆಲವೇ ಜನರ ಕೈಲಿ ಪತ್ರಿಕೆ ಓಡೆತನ ಸಿಕ್ಕು ಜನರಿಗೆ ಬೇಕಾದ ಸಾಮಾಜಿಕ ನ್ಯಾಯ ಒದಗಿಸಲು ಆಗುತ್ತಿಲ್ಲ. ಎಲ್ಲಡೆ ವ್ಯಾಪಾರೀಕರಣದ ದೃಷ್ಟಿ ಹೆಚ್ಚಾಗಿದ್ದು, ಮಾಧ್ಯಮದ ಮೂಲ ಉದ್ದೇಶ ಮರೆಯಾಗುತ್ತಿದೆ. ಈ ಧೋರಣೆ ಬದಲಾಗಬೇಕು. ಹೊಸಬರಿಗೆ ಅವಕಾಶಗಳು ದೊರೆಯುವಂತಾಗಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿ ಹಿರಿಯ ಪತ್ರಕರ್ತ ಸಿ. ಕೇಶವಮೂರ್ತಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪೇಪರ್ ದರ ಹೆಚ್ಚಾಗಿದೆ. ಪತ್ರಿಕೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಪ್ರಸರಣ, ಜಾಹೀರಾತು ಹೆಚ್ಚು ಮಾಡೋದು ಸವಾಲಿನ ಕೆಲಸವಾಗಿದೆ. ಇದಕ್ಕೆ ಸಾಕಷ್ಟು ಸಲಾಮ್ ಹೊಡೆಯಬೇಕು. ಇಲ್ಲ ಅಂದ್ರೆ ಬೈದು ಬರೆದು ಪ್ರಸರಣ ಹೆಚ್ಚು ಮಾಡಬೇಕು. ಆದರೆ. ಇವ್ಯಾವುದರ ಗೋಜಿಗೆ ಹೋಗದೇ ನಮ್ಮ ಪತ್ರಿಕೆಯನ್ನು ಉತ್ತಮವಾಗಿಯೇ ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯ ಡಾ| ಎ.ಎಚ್. ಶಿವಯೋಗಿಸ್ವಾಮಿ ಯೋಗಕ್ಷೇಮ ಕೃತಿ ಕುರಿತು ಮಾತನಾಡಿದರು. ಇದೇ ವೇಳೆ ಹಿರಿಯ ಪತ್ರಕರ್ತ ಸಿ. ಕೇಶವಮೂರ್ತಿ ಅವರಿಗೆ 2018ರ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಪತ್ರಕರ್ತ ವಿ. ಹನುಮಂತಪ್ಪ ಅವರ ಯೋಗಕ್ಷೇಮ ಕೃತಿ ಬಿಡುಗಡೆ ಮಾಡಲಾಯಿತು.
ಲೀಡ್ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕ ಎನ್.ಟಿ. ಎರ್ರಿಸ್ವಾಮಿ, ಎಚ್.ಎನ್. ಪ್ರದೀಪ್, ಪ್ರಗತಿ ಕೃಷ್ಣಾ ಬ್ಯಾಂಕ್ ಮ್ಯಾನೇಜರ್ ಬಿ.ಎನ್. ಭಾಸ್ಕರ್, ಪತ್ರಕರ್ತ ವಿ. ಹನುಮಂತಪ್ಪ ಉಪಸ್ಥಿತರಿದ್ದರು. ಅನಂದತೀರ್ಥಾಚಾರ್ ಸ್ವಾಗತಿಸಿದರು. ಸಾಲಿಗ್ರಾಮ ಗಣೇಶ್ ಶೆಣೈ ನಿರೂಪಿಸಿದರು.
ಪತ್ರಿಕಾ ವೃತ್ತಿಯ ಮೂಲಕ ಸಮಾಜದಲ್ಲಿ ಉತ್ತಮ ಸೇವೆ ಮಾಡಬಹುದು. 80ರ ದಶಕದಲ್ಲಿ ಉದಯವಾಣಿ ದಿನಪತ್ರಿಕೆ ಮೂಲಕ ಹೊಸ ಪ್ರಯೋಗ ಪ್ರಾರಂಭಿಸಲಾಗಿತ್ತು. ಮೂಲಭೂತ ಸೌಲಭ್ಯಗಳ ಕೊರತೆ ಇರುವ ಗ್ರಾಮ ಗುರುತಿಸಿ ಅಲ್ಲಿನ ಬೇಕು, ಬೇಡಗಳ ಬಗ್ಗೆ ಜನರಿಂದ ತಿಳಿದುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಮುಟ್ಟಿಸುವ ಕೆಲಸ ಮಾಡಲಾಯಿತು. ಈ ಪ್ರಯೋಗದಿಂದಾಗಿ ಸಾಕಷ್ಟು ಗ್ರಾಮಗಳಿಗೆ ಉತ್ತಮ ರಸ್ತೆ, ದೀಪ ದೊರೆಯುವಂತಾಯಿತು. ಅದಕ್ಕೆ ಕೆಲ ಗ್ರಾಮದ ತರುಣರ ಶ್ರಮವೂ ಕಾರಣವಾಯಿತು.
•ಡಾ| ವಿಜಯಾ, ಹಿರಿಯ ಪತ್ರಕರ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.